CONNECT WITH US  

UP ಸಾರಿಗೆ ಬಸ್ಸು, ಎಸ್‌ಯುವಿ ಢಿಕ್ಕಿ: 6 ಸಾವು, 13 ಮಂದಿಗೆ ಗಾಯ

ಸಂಭಾಲ್‌, ಉತ್ತರ ಪ್ರದೇಶ : ಗಿನ್ನೋರ್‌ ಪ್ರದೇಶದಲ್ಲಿ ರಾಜ್ಯ ಸಾರಿಗೆ ಬಸ್ಸೊಂದು ಎಸ್‌ಯುವಿ ವಾಹನವೊಂದಕ್ಕೆ ಢಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ ಆರು ಮಂದಿ ಮೃತಪಟ್ಟು ಇತರ 13 ಮಂದಿ ಗಾಯಗೊಂಡಿರುವ ಘಟನೆ ಇಂದು ಶುಕ್ರವಾರ ಬೆಳಗ್ಗೆ ನಡೆದಿದೆ.

ಮೊರಾದಾಬಾದ್‌-ಆಗ್ರಾ ಹೈವೇಯಲ್ಲಿ ಈ ಅವಘಡ ಸಂಭವಿಸಿತು. ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಅವರೆಲ್ಲ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Trending videos

Back to Top