ಜಡ್ಜ್ಗಳ ನೇಮಕಕ್ಕೆ 1ತಿಂಗಳಲ್ಲಿ 6 ಬಾರಿ ಸಭೆ ಮಾಡಿದ ಸಿಜೆಐ
Team Udayavani, Nov 10, 2018, 8:19 AM IST
ಹೊಸದಿಲ್ಲಿ: ಸುಪ್ರೀಂಕೋರ್ಟ್ನ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ 30 ದಿನಗಳ ಅವಧಿಯಲ್ಲಿ 29 ಜಡ್ಜ್ಗಳ ನೇಮಕ, 9 ಮುಖ್ಯ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ನ್ಯಾಯಮೂರ್ತಿಗಳ ಸಮಿತಿ ಸುಪ್ರೀಂಕೋರ್ಟ್ಗೆ ನಾಲ್ವರು ನ್ಯಾಯಮೂರ್ತಿಗಳ ಹೆಸರು ಶಿಫಾರಸು ಮಾಡಿ 2 ದಿನ ಕಳೆಯುವಷ್ಟರಲ್ಲಿಯೇ ಕೇಂದ್ರ ಸರ್ಕಾರ ಅದಕ್ಕೆ ಅನುಮೋದನೆ ನೀಡಿತ್ತು. 30 ದಿನಗಳ ಅವಧಿಯಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಆರು ಬಾರಿ ನ್ಯಾಯಮೂರ್ತಿಗಳಾದ ಎಂ.ಬಿ.ಲೋಕುರ್, ಕುರಿಯನ್ ಜೋಸೆಫ್, ಎ.ಕೆ. ಸಿಕ್ರಿ ಮತ್ತು ಎಸ್.ಎ. ಬೋಬೆ ಜತೆಗೆ ಸಭೆ ನಡೆಸಿದ್ದರು. ಅಲಹಾಬಾದ್ ಹೈಕೋರ್ಟ್ಗೆ 30 ನ್ಯಾಯಮೂರ್ತಿಗಳ ನೇಮಕವಾಗಿದ್ದರೆ, ಒಡಿಶಾ ಹೈಕೋರ್ಟ್ಗೆ ಒಬ್ಬ ನ್ಯಾಯಮೂರ್ತಿಗಳ ನೇಮಕವಾಗಿದೆ. ಜತೆಗೆ 11 ಮಂದಿ ನ್ಯಾಯಮೂರ್ತಿಗಳನ್ನು ಒಂದು ಹೈಕೋರ್ಟಿಂದ ಮತ್ತೂಂದು ಹೈಕೋರ್ಟ್ಗೆ ವರ್ಗಾವಣೆಯನ್ನೂ ಮಾಡಲಾಗಿದೆ ಎಂದು “ದ ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.