ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿದ ಬಿಎಸ್ಎಫ್ ಎಎಸ್ಐ
Team Udayavani, Dec 19, 2018, 4:45 PM IST
ಜಮ್ಮು : 49ರ ಹರೆಯದ ಬಿಎಸ್ಎಫ್ ನ ಸಹಾಯಕ ಸಬ್ ಇನ್ಸ್ಪೆಕ್ಟರ್ ಓರ್ವರು ತಮ್ಮ ಸೇವಾ ರಿವಾಲ್ವರ್ ನಿಂದ ಗುಂಡೆಸೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರವ ಎಎಸ್ಐ ಯನ್ನು ಸತ್ಪಾಲ್ ಜಸ್ವಾಲ್ ಎಂದು ಗುರುತಿಸಲಾಗಿದೆ. ಪೂಂಚ್ ಜಿಲ್ಲೆಯ ಮೇಂಧರ್ ಬೆಕ್ಟ್ ನಲ್ಲಿನ ಹೊರ ಠಾಣೆಯಲ್ಲಿ ಗುಂಡಿನ ಸದ್ದು ಕೇಳಿ ಬಂದಾಗ ಅಲ್ಲಿಗೆ ಧಾವಿಸಿದ ಸಹೋದ್ಯೋಗಿಗಳಿಗೆ ಜಸ್ವಾಲ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂತು.
ಒಡನೆಯೇ ಜಸ್ವಾಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.