ತೈಲ ಮತ್ತೆ ತುಟ್ಟಿ
Team Udayavani, Jan 15, 2019, 12:30 AM IST
ಹೊಸದಿಲ್ಲಿ: ಸತತ 5ನೇ ದಿನವೂ ತೈಲ ದರದಲ್ಲಿ ಏರಿಕೆ ಕಂಡಿದ್ದು, ಸೋಮವಾರ ಪೆಟ್ರೋಲ್ ದರ ಲೀಟರ್ಗೆ 70 ರೂ.ಗಳ ಗಡಿ ದಾಟಿದೆ ಮತ್ತು ಡೀಸೆಲ್ ಲೀಟರ್ಗೆ 64 ರೂ. ತಲುಪಿದೆ.
ಸೋಮವಾರ ಪೆಟ್ರೋಲ್ ಬೆಲೆ ಲೀ.ಗೆ 38 ಪೈಸೆ ಹೆಚ್ಚಳವಾದರೆ, ಡೀಸೆಲ್ ಲೀ.ಗೆ 49 ಪೈಸೆ ಹೆಚ್ಚಳವಾಗಿದೆ ಎಂದು ಸರಕಾರಿ ಸ್ವಾಮ್ಯದ ತೈಲ ಸಂಸ್ಥೆಗಳು ತಿಳಿಸಿವೆ. 2019 ಆರಂಭವಾದ ಬಳಿಕ ಈವರೆಗೆ ಒಟ್ಟಾರೆ ಪೆಟ್ರೋಲ್ ಲೀ.ಗೆ 1.84 ರೂ. ಮತ್ತು ಡೀಸೆಲ್ ಲೀ.ಗೆ 2.02 ರೂ. ಹೆಚ್ಚಳವಾಗಿದೆ. ಜ.7ರ ಬಳಿಕ ಸತತವಾಗಿ ದರ ಏರಿಕೆಯಾಗುತ್ತಿದೆ.