CONNECT WITH US  

ಟ್ರೈನ್‌18ನಲ್ಲಿ ಊಟ ಕಡ್ಡಾಯ

ವಾರಾಣಸಿ-ಅಹಮದಾಬಾದ್‌ ಪ್ರಯಾಣಕ್ಕೆ ವಿನಾಯಿತಿ 

ಹೊಸದಿಲ್ಲಿ: ಶೀಘ್ರದಲ್ಲೇ ಸಂಚಾರ ನಡೆಸಲಿರುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌(ಟ್ರೈನ್‌ 18) ರೈಲಿನಲ್ಲಿ ಊಟ ಸೇವನೆ ಮಾಡದೇ ಇರುವ ಆಯ್ಕೆಯೇ ಇಲ್ಲ! 

ರೈಲು ಏರಿದರೆ ಊಟ ಮಾಡುವುದು ಕಡ್ಡಾಯ. ಸಾಮಾನ್ಯವಾಗಿ ಶತಾಬ್ದಿ, ರಾಜಧಾನಿ ಹಾಗೂ ಇತರ ಎಕ್ಸ್‌ಪ್ರೆಸ್‌ ರೈಲುಗಳಲ್ಲಿ ಟಿಕೆಟ್‌ ಬುಕ್‌ ಮಾಡುವಾಗ ಊಟ ಮಾಡದೇ ಇರುವ ಆಯ್ಕೆಯಿದೆ. ಇದರಿಂದಾಗಿ ಟಿಕೆಟ್‌ನಲ್ಲಿ ಊಟದ ದರವನ್ನು ವಿಧಿಸದೇ ಇರುವುದರಿಂದ, ಟಿಕೆಟ್‌ ದರ ಗಮನಾರ್ಹವಾಗಿ ಇಳಿಯುತ್ತದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ನಲ್ಲಿ ಈ ಸೌಲಭ್ಯ ವಾರಾಣಸಿಯಿಂದ ಅಹಮದಾಬಾದ್‌ಗೆ ನೇರವಾಗಿ ತೆರಳುವವರಿಗೆ ಮಾತ್ರ ಇರಲಿದೆ. ಅವರ ಕೆಟರಿಂಗ್‌ ಶುಲ್ಕವನ್ನು ಟಿಕೆಟ್‌ ದರದಲ್ಲಿ ಸೇರಿಸಲಾಗುವುದಿಲ್ಲ.

ಅಂದರೆ ಭಾರತ್‌ ಎಕ್ಸ್‌ಪ್ರೆಸ್‌ ಹೊರಡುವ ಮೊದಲ ಸ್ಟೇಷನ್‌ ವಾರಾಣಸಿಯಲ್ಲಿ ರೈಲನ್ನೇರಿ, ಕೊನೆಯ ಸ್ಟೇಷನ್‌ ಅಹಮದಾಬಾದ್‌ನಲ್ಲಿ ಇಳಿಯುವವರು ಮಾತ್ರ ಟಿಕೆಟ್‌ ಬುಕ್‌ ಮಾಡುವ ವೇಳೆಯಲ್ಲೇ ಊಟವನ್ನು ಐಆರ್‌ಸಿಟಿಸಿಯಿಂದ ಖರೀದಿಸದೇ ಇರಲು ಅವಕಾಶವಿದೆ. ಊಟ ತೆಗೆದುಕೊಳ್ಳದೇ ಇದ್ದರೆ, ಟಿಕೆಟ್‌ನಲ್ಲಿ ಊಟದ ವೆಚ್ಚವನ್ನು ವಿಧಿಸುವುದಿಲ್ಲ. ಆದರೆ ಇತರ ಯಾವ ನಿಲ್ದಾಣದಲ್ಲಿ ರೈಲನ್ನೇರಿದರೂ ಊಟ ಕಡ್ಡಾಯವಾಗಿರಲಿದೆ. ಹಾಗೆಯೇ, ಊಟಕ್ಕೆ ತಗಲುವ ವೆಚ್ಚವನ್ನೂ ವಿಧಿಸಲಾಗುತ್ತದೆ. ಊಟದ ವೆಚ್ಚ ನಿಲ್ದಾಣದಿಂದ ನಿಲ್ದಾಣಕ್ಕೆ ವಿಭಿನ್ನವಾಗಿರುತ್ತದೆ.

Tags: 

Trending videos

Back to Top