CONNECT WITH US  

3 ತಿಂಗಳಲ್ಲಿ  "ಅಲ್ಪಸಂಖ್ಯಾಕ' ಪದಕ್ಕೆ ವ್ಯಾಖ್ಯಾನ ನೀಡಿ: ಸುಪ್ರೀಂ

ಹೊಸದಿಲ್ಲಿ: "ಅಲ್ಪಸಂಖ್ಯಾಕ' (ಮೈನಾರಿಟಿ) ಎಂಬ ಪದವನ್ನು ಯಾವ ರೀತಿ ಬಳಕೆ ಮಾಡಬಹುದು ಎಂಬ ಬಗ್ಗೆ ನಿರ್ಧರಿಸಲು ಸುಪ್ರೀಂ ಕೋರ್ಟ್‌ ರಾಷ್ಟ್ರೀಯ ಅಲ್ಪಸಂಖ್ಯಾಕರ ಆಯೋಗ (ಎನ್‌ಸಿಎಂ)ಕ್ಕೆ 3 ತಿಂಗಳ ಅವಧಿ ನೀಡಿದೆ. ವಿವಿಧ ರಾಜ್ಯಗಳಲ್ಲಿ "ಅಲ್ಪಸಂಖ್ಯಾಕ' ವರ್ಗಕ್ಕೆ ಹಲವಾರು ಸಮುದಾಯಗಳು ಸೇರುವ ಹಿನ್ನೆಲೆಯಲ್ಲಿ ಸಿಜೆಐ ರಂಜನ್‌ ಗೊಗೊಯ್‌ ನೇತೃತ್ವದ ಪೀಠ ವ್ಯಾಖ್ಯೆ ನಿರ್ಣಯಿಸುವಂತೆ ಆಯೋಗಕ್ಕೆ ಸೂಚಿಸಿದೆ. 2011ರ ಜನಗಣತಿಯ ಬಳಿಕ ಅಲ್ಪಸಂಖ್ಯಾಕ ಎಂಬ ಪದವನ್ನು ಮರು ವ್ಯಾಖ್ಯಾನಿಸಬೇಕಾಗಿದೆ. ಜಮ್ಮು ಸೇರಿ 8 ರಾಜ್ಯಗಳಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆ ಇದೆ ಎಂದು ಬಿಜೆಪಿ ನಾಯಕ, ನ್ಯಾಯವಾದಿ ಅಶ್ವಿ‌ನಿ ಉಪಾಧ್ಯಾಯ ಸುಪ್ರೀಂಗೆ ಅರಿಕೆ ಮಾಡಿದ್ದರು. ಅಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಇರುವುದರಿಂದ ಅವರ ಮೂಲ ಹಕ್ಕುಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಎಂದು ಪ್ರತಿಪಾದಿಸಿದ್ದಾರೆ. 


Trending videos

Back to Top