ಬಂಟ್ಸ್‌ ನ್ಯಾಯ ಮಂಡಳಿ ಮುಂಬಯಿ ಇದರ 18ನೇ ವಾರ್ಷಿಕ  ಮಹಾಸಭೆ


Team Udayavani, Sep 26, 2018, 4:44 PM IST

2509mum04.jpg

ಮುಂಬಯಿ: ಸಮಾಜದಲ್ಲಿ ಅನೇಕತೆಗಳ ಮನೋಭಾವವುಳ್ಳ ಜನರಿದ್ದಾರೆ. ನ್ಯಾಯ ಮಂಡಳಿಯನ್ನು ಅರಸಿ ಬಂದ ಬಂಟರ ವ್ಯಾಜ್ಯಗಳನ್ನು ಸೌಜನ್ಯತೆಯಿಂದ ಸೂಕ್ತವಾಗಿ ಇತ್ಯರ್ಥಗೊಳಿಸಿ ಖಾಯಂ ಪರಿಹಾರ ನೀಡಿದ ಅಭಿಮಾನ ನಮಗಿದೆ. ನ್ಯಾಯ ಮಂಡಳಿಯ ಪ್ರತೀಯೋರ್ವರ ಸಹಯೋಗದಿಂದ ಇದು ಸಾಧ್ಯವಾಗಿದೆ. ಸುಮಾರು ಒಂದೂವರೆ ದಶಕದಿಂದ ನಾವು ಅನೇಕ ಸಮಸ್ಯೆಗಳನ್ನು ಸೌಹಾರ್ದತೆಯಿಂದ ಬಗೆಹರಿಸಿದ್ದೇವೆ. ಆ ಮೂಲಕ ಮಂಡಳಿಯ ಸೇವೆ ಸಾರ್ಥಕವಾಗಿದೆ ಅನ್ನುವ ತೃಪ್ತಿ ನಮಗಿದೆ. ಇನ್ನೂ ಪ್ರಯತ್ನವನ್ನು ಮುನ್ನಡೆಸುವೆವು. ಸರ್ವರ ಸಮಸ್ಯೆಗಳನ್ನೂ ಸಮಾನತೆಯಿಂದ ಆಲಿಸಿ ಸಮಪಾಲು ಸಮಬಾಳು ನೀಡುವ ಪ್ರಯತ್ನ ಮುಂದುವರಿಸುವೆವು. ಭವಿಷ್ಯತ್ತಿನಲ್ಲೂ ಸರ್ವರ ಸಹಕಾರ ಅವಶ್ಯವಾಗಿದ್ದು ಸಮಸ್ಯೆಗಳಿಗೆ ನ್ಯಾಯ ಸಮ್ಮತವಾಗಿ ದೀರ್ಘಾವಧಿಯ ಸೂಕ್ತ ಪರಿಹಾರ ನೀಡುವಲ್ಲಿ ಕಾರ್ಯಚರಿಸುವೆವು. ಈ ತನಕ ಬಹುತೇಕ ವಿವಾದಗಳನ್ನು ಸೌಹಾರ್ದತೆಯಿಂದ ಬಗೆಹರಿಸಿದ ಆತ್ಮವಿಶ್ವಾಸ ನಮಗಿದೆ ಎಂದು ಬಂಟ್ಸ್‌ ನ್ಯಾಯ ಮಂಡಳಿ ಕಾರ್ಯಧ್ಯಕ್ಷ ರವೀಂದ್ರ ಎಂ. ಅರಸ ತಿಳಿಸಿದರು.

ಸೆ. 24 ರಂದು ಕುರ್ಲಾ ಪೂರ್ವದ ಬಂಟರ ಸಂಘದ ಅನೆಕ್ಸ್‌ ಕಟ್ಟಡದಲ್ಲಿನ ಲತಾ ಪ್ರಭಾಕರ್‌ ಎಲ್‌. ಶೆಟ್ಟಿ ಮತ್ತು ಕಬೆತಿಗುತ್ತು ಕಶಿ ಸಿದ್ಧು ಶೆಟ್ಟಿ ಸಭಾಗೃಹದಲ್ಲಿ ನಡೆದ  ಬಂಟ್ಸ್‌ ನ್ಯಾಯ ಮಂಡಳಿಯ  18ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಂಡಳಿಯ ಸೇವಾಕಾರ್ಯಗಳಿಗೆ ಸಮಾಜ ಬಾಂಧವರ ಪ್ರೋತ್ಸಾಹ, ಸಹಕಾರ ಸದಾಯಿರಲಿ ಎಂದು ನುಡಿದರು.

ಬಂಟ ಸಮಾಜದ ಹಿರಿಯ ಮುತ್ಸದ್ಧಿ, ನ್ಯಾಯ ಮಂಡಳಿಯ ಮಾಜಿ ಕಾರ್ಯಧ್ಯಕ್ಷ ಎಂ. ಡಿ. ಶೆಟ್ಟಿ ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿ ಮಾತನಾಡಿ, ಬಾಲ್ಯವಸ್ಥೆಯಲ್ಲೇ ಅರ್ಧ ಚಡ್ಡಿಯಲ್ಲಿ ಮುಂಬಯಿ ಸೇರಿ ಕರ್ನಾಟಕ ರಾತ್ರಿಶಾಲೆ ಓದಿದ ನಾನು ಇಂದು ಸೂಟ್‌ ಧರಿಸಿ ಇಂತಹ ಪ್ರತಿಷ್ಠಿತ ವೇದಿಕೆಗಳನ್ನು ಅಲಂಕರಿಸುವಂತಾಗಿದೆ. ನನ್ನ ಮೇಲೆ ಎಲ್ಲರಿಗೂ ಅತೀವ ಮಮತೆಯಿದೆ ಅದೇ ನನ್ನ ಸಂಪಾದನೆ ಮತ್ತು ಆಸ್ತಿಯಾಗಿದೆ. ನಾನು ತಿಳಿದು ತಪ್ಪು  ಮಾಡಿದ ಅರಿವು ನನಗಿಲ್ಲ. ನಾವು ಎಲ್ಲರಿಗೂ ಯೋಗ್ಯರೆಣಿಸಿದಾಗಲೇ ನ್ಯಾಯ ಸಮರ್ಥವಾಗುವುದು. ಈ ನ್ಯಾಯ ಮಂಡಳಿಯಿಂದ ಸಾವಿರಾರು ಸಮಾಜ ಬಂಧುಗಳಿಗೆ ಒಳಿತಾಗಿ ಕೋಟಿಗಟ್ಟಲೆ ಲಾಭವಾಗಿದೆ ಎನ್ನುವುದೇ ಮಂಡಳಿಯ ಹಿರಿಮೆಯಾಗಿದೆ ಎಂದು ನುಡಿದರು.

ಬಂಟರ ಸಂಘ ಮುಂಬಯಿ ಅಧ್ಯಕ್ಷ ಪದ್ಮನಾಭ ಎಸ್‌. ಪಯ್ಯಡೆ, ಬೋಂಬೆ ಬಂಟ್ಸ್‌ ಅಸೋಸಿಯೇಶನ್‌ನ ಅಧ್ಯಕ್ಷ ನ್ಯಾಯವಾದಿ ಸುಭಾಷ್‌ ಬಿ. ಶೆಟ್ಟಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನ್ಯಾಯ ಮಂಡಳಿ ಜೊತೆ ಕಾರ್ಯದರ್ಶಿ ಪಿ. ಧನಂಜಯ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಹಾಸಭೆಯಲ್ಲಿ ನ್ಯಾಯ ಮಂಡಳಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಆಶಾ ಎಸ್‌. ಶೆಟ್ಟಿ, ಜಯ ಎ. ಶೆಟ್ಟಿ, ಎನ್‌. ಸಿ. ಶೆಟ್ಟಿ, ಶ್ಯಾಮ ಎನ್‌. ಶೆಟ್ಟಿ, ಸಲಹಾ ಮಂಡಳಿ ಸದಸ್ಯರಾದ ಕೃಷ್ಣ  ವೈ. ಶೆಟ್ಟಿ, ಆರ್‌. ಸಿ. ಶೆಟ್ಟಿ, ಸಂಜೀವ ಎಂ. ಶೆಟ್ಟಿ, ಸೀತರಾಮ ಎಂ. ಶೆಟ್ಟಿ  ಅವರು ಹಾಜರಿದ್ದರು.
ಕಾರ್ಯಧ್ಯಕ್ಷ ರವೀಂದ್ರ ಅರಸ ಅವರು ಬಂಟರ ಹಿರಿಯ ಧುರೀಣ  ಎಂ. ಡಿ. ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್‌ ಶೆಟ್ಟಿ, ಪದ್ಮನಾಭ ಪಯ್ಯಡೆ, ಸುಭಾಷ್‌ ಶೆಟ್ಟಿ, ಹಿರಿಯ ಉದ್ಯಮಿ ಸುಧೀರ್‌  ವಿ. ಶೆಟ್ಟಿ, ಲತಾ ಪಿ. ಭಂಡಾರಿ, ಬಂಟರವಾಣಿ ಗೌರವ ಪ್ರಧಾನ ಸಂಪಾದಕ ಅಶೋಕ್‌ ಪಕ್ಕಳ, ಸಿಎ ಸುರೇಂದ್ರ ಎ. ಶೆಟ್ಟಿ, ಸಿಎ ಸಂಜೀವ ಶೆಟ್ಟಿ ಮತ್ತಿತರ ಗಣ್ಯರನ್ನು ಪುಷ್ಪಗುತ್ಛವನ್ನಿತ್ತು ಅಭಿವಂದಿಸಿದರು. ಸಭಿಕರಲ್ಲಿನ ಬೊಳ್ಯಗುತ್ತು ವಿವೇಕ್‌ ಶೆಟ್ಟಿ, ಸುಧೀರ್‌ ವಿ. ಶೆಟ್ಟಿ, ಮುಂಡಪ್ಪ ಎಸ್‌. ಪಯ್ಯಡೆ, ದಿವಾಕರ್‌ ಶೆಟ್ಟಿ ಇಂದ್ರಾಳಿ, ಮಂಡಳಿಯ ಸಲಹಾ ಮಂಡಳಿ ಸದಸ್ಯರಾದ ಆರ್‌. ಸಿ. ಶೆಟ್ಟಿ, ಸೀತರಾಮ ಎಂ. ಶೆಟ್ಟಿ  ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಲತಾ ಪಿ. ಶೆಟ್ಟಿ ಪ್ರಾರ್ಥನೆಗೈದರು. ಉಪಾಧ್ಯಕ್ಷ ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್‌ ಎಲ್‌. ಶೆಟ್ಟಿ ಸ್ವಾಗತಿಸಿ ಸಭಾ ಕಲಾಪ ನಡೆಸಿದರು. ಗೌರವ  ಪ್ರಧಾನ  ಕಾರ್ಯದರ್ಶಿ ಡಾ| ಪ್ರಭಾಕರ ಶೆಟ್ಟಿ ಬೋಳ ವಾರ್ಷಿಕ ವರದಿ ಮತ್ತು ಗತವಾರ್ಷಿಕ ಮಹಾಸಭೆ ವರದಿ ವಾಚಿಸಿದರು. ಕೋಶಾಧಿಕಾರಿ ನ್ಯಾಯವಾದಿ ಅಶೋಕ್‌ ಡಿ. ಶೆಟ್ಟಿ ಅವರು ವಾರ್ಷಿಕ ಲೆಕ್ಕಪತ್ರಗಳ ವಿವರ ನೀಡಿ ವಂದಿಸಿದರು. 

 18 ವರ್ಷಗಳ ಸೇವೆಯನ್ನು ಪೂರೈಸಿದ ನ್ಯಾಯ ಮಂಡಳಿ ಬಂಟರ ಹೆಗ್ಗಳಿಕೆಯಾಗಿದೆ. ಜಸ್ಟೀಸ್‌  ಸಂತೋಷ್‌ ಹೆಗ್ಡೆ ಅವರ ಸಮಾಜ ಪ್ರಿಯ ಚಿಂತನೆ, ಕಲ್ಪನೆ, ಆಶಯ ಸಮಾ ಜದ ಜನತೆಯಲ್ಲಿ ನ್ಯಾಯ ಒದಗಿಸಿದೆ. ಸುಮಾರು 350 ಅಧಿಕ ಕೇಸುಗಳನ್ನು ಕೈಗೆತ್ತಿ ನಾವು ಪರಿಹರಿಸಿದ್ದೇವೆ. ಇದು ಎಲ್ಲರ ಒಗ್ಗಟ್ಟಿನ ಕೆಲಸವಾಗಿದೆ.ತೀರ್ಪು-ತೀರ್ಮಾನ ನೀಡುವುದು ಬಂಟರಿಗೆ‌ ವಂಶ ಪಾರಂಪರಿಕವಾಗಿ ಬಂದ ವರವಾಗಿದೆ.
– ಪದ್ಮನಾಭ ಎಸ್‌. ಪಯ್ಯಡೆ , 
ಅಧ್ಯಕ್ಷರು : ಬಂಟರ ಸಂಘ ಮುಂಬಯಿ

 ಬಂಟ್ಸ್‌ ನ್ಯಾಯ ಮಂಡಳಿ ಸಮಾಜದ ಜನತೆಗೆ ಲಾಭವಾಗಿಯೆ ಪರಿಣಮಿಸಿದೆ. ಇದೊಂದು ಬುದ್ಧಿ ಜೀವಿಗಳ ಸಂಸ್ಥೆ ಎನ್ನುವುದರಲ್ಲಿ ಸಂಶಯವಿಲ್ಲ. ನ್ಯಾಯಕ್ಕೆ ಅನುಭವಸ್ಥ ಹಿರಿಯ ವ್ಯಕ್ತಿಗಳ ಬುದ್ಧಿವಾದ ಅಗತ್ಯವಾಗಿದ್ದು, ಅವರ ಚಿಂತನೆಯಿಂದಲೇ ಸಮರ್ಥ ನ್ಯಾಯ ಸಾಧ್ಯ. ನಮ್ಮೊಳಗಿನ ಇಂತಹ ಮಂಡಳಿಯ ಸೇವೆ ಸಮಾಜಕ್ಕೆ ಮತ್ತು ಇತರರೂ ಅನುಕರಿಸಲಿ.
 – ನ್ಯಾಯವಾದಿ ಸುಭಾಶ್‌ ಶೆಟ್ಟಿ , 
ಅಧ್ಯಕ್ಷರು : ಬೋಂಬೆ ಬಂಟ್ಸ್‌ ಅಸೋಸಿಯೇಶನ್‌

 ಎಂ. ಡಿ. ಶೆಟ್ಟಿ ಅವರು  ಕೇವಲ ಬಂಟರಿಗೆ ಮಾತ್ರವಲ್ಲ ಸಮಗ್ರ ಸಮಾಜಕ್ಕೆ ಮಾದರಿ ವ್ಯಕ್ತಿ. ಅವರ ಸಮಾಜದ ಮೇಲಿನ ಪ್ರೀತಿ ಎಲ್ಲರಿಗೂ ಆದರ್ಶನೀಯ. ಬಂಟರಲ್ಲಿ ಕಡಂದಲೆ ಪ್ರಕಾಶ್‌ ಶೆಟ್ಟಿ ಅವರಂತಹ ಸಾಹಸಿಗ ವಕೀಲರು, ನಿಷ್ಠೆಯಿಂದ ಸಮಾಜವನ್ನು ನಡೆಸುವ ಅರಸರೂ ಇದ್ದಾರೆ ಅಂದ ಮೇಲೆ ನ್ಯಾಯ ಮಂಡಳಿ ಸೇವೆ ಬಗ್ಗೆ ಎರಡು ಮಾತಿಲ್ಲ. ಆದ್ದರಿಂದಲೇ ಬಂಟ್ಸ್‌ ಸಂಘದ ನ್ಯಾಯ ಮಂಡಳಿ ವಿಶ್ವಕ್ಕೇ ಮಾದರಿ. ನ್ಯಾಯ ಮಂಡಳಿಯು ಬಂಟ್ಸ್‌ ಸಂಘದಲ್ಲೇ ಕೇಂದ್ರ ಕಚೆೇರಿ ಹೊಂದಿ ದೇಶಾದಾದ್ಯಂತ ಶಾಖೆಗಳು ವಿಸ್ತಾರಿಸುವಂತಾಗಲಿ 
– ಐಕಳ ಹರೀಶ್‌ ಶೆಟ್ಟಿ , 
ಅಧ್ಯಕ್ಷರು : ಜಾಗತಿಕ ಬಂಟರ ಸಂಘಗಳ ಒಕ್ಕೂಟ

ಚಿತ್ರ-ವರದಿ: ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.