CONNECT WITH US  

ಪುಣೆ ಬಿಲ್ಲವ ಸಮಾಜ ಸೇವಾ ಸಂಘ: ನೂತನ ಕಾರ್ಯಕಾರಿ ಸಮಿತಿ ರಚನೆ

ಪುಣೆ: ನಗರದ ಪ್ರತಿಷ್ಠಿತ  ಬಿಲ್ಲವ ಸಮಾಜ ಸೇವಾ ಸಂಘದ ನೂತನ  ಅಧ್ಯಕ್ಷರಾಗಿ ಪುಣೆಯ ಹೊಟೇಲ್‌ ಉದ್ಯಮಿ, ಸಂಘಟಕ, ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ ಇದರ  ಉಪಾಧ್ಯಕ್ಷ  ವಿಶ್ವನಾಥ್‌ ಪೂಜಾರಿ  ಕಡ್ತಲ ಅವರು  ಸರ್ವಾನುಮತದಿಂದ  ಅವಿರೋಧವಾಗಿ  ಆಯ್ಕೆಯಾದರು.

ಜ. 6ರಂದು ಪುಣೆಯ ಸೋಮವಾರ ಪೇಟೆಯ ಸಂತ ಘಾಡೆY ಮಹಾರಾಜ್‌ ಮಠದ ಸಭಾಭವನದಲ್ಲಿ ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಮಹಾಸಭೆಯು ಅಧ್ಯಕ್ಷ ಶೇಖರ್‌ ಟಿ. ಪೂಜಾರಿ  ಅವರ  ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಪುಣೆ ಬಿಲ್ಲವ ಸಂಘಕ್ಕೆ ಅಗತ್ಯವಿರುವ ಒಂದು ಸಭಾಂಗಣವನ್ನು ನಿರ್ಮಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿ ಕಟ್ಟಡ ಸಮಿತಿಯನ್ನು ರಚಿಸುವಂತೆ ಸಭೆಯಲ್ಲಿ ತಿರ್ಮಾನ ಕೈಗೊಂಡು, ನಗರದ   ಹೊಟೇಲ್‌ ಉದ್ಯಮಿ, ಸಮಾಜ ಸೇವಕ, ಪಂಚಮಿ  ಚಾರಿಟೇಬಲ್‌ ಟ್ರಸ್ಟ್‌ನ ಸಂಸ್ಥಾಪಕ ಪುರಂದರ ಪೂಜಾರಿ  ಅವರನ್ನು ಕಾರ್ಯಾಧ್ಯಕ್ಷರನ್ನಾಗಿ  ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

2019-2021ನೆ ಸಾಲಿಗೆ ನೂತನ  ಕಾರ್ಯಕಾರಿ ಸಮಿತಿಯ ಆಯ್ಕೆಯನ್ನು ಕೈಗೆತ್ತಿಕೊಂಡು  ವೇದಿಕೆಯಲ್ಲಿದ್ದ ಗಣ್ಯರು ಮತ್ತು  ಸಭೆಯಲ್ಲಿ ಉಪಸ್ಥಿತರಿದ್ದ ಸಮಾಜ ಬಾಂಧವರ ಒಮ್ಮತದೊಂದಿಗೆ  ಅಧ್ಯಕ್ಷರನ್ನಾಗಿ ವಿಶ್ವನಾಥ್‌ ಪೂಜಾರಿ ಕಡ್ತಲ ಅವರನ್ನು  ಹಾಗೂ ಪುರಂದರ ಪೂಜಾರಿ  ಅವರನ್ನು ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ  ಸಂಘದ ಪ್ರಮುಖರಾದ ಕರುಣಾಕರ ಶಾಂತಿ ಅವರು ಸಭೆಯಲ್ಲಿ ಪ್ರಕಟಿಸಿದರು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿಶ್ವನಾಥ್‌ ಪೂಜಾರಿ  ಕಡ್ತಲ ಅವರನ್ನು  ನಿರ್ಗಮನ ಅಧ್ಯಕ್ಷ ಶೇಖರ್‌  ಪೂಜಾರಿ  ಅವರು ಅಭಿನಂದಿಸಿದರು. ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಪುರಂದರ ಪೂಜಾರಿ  ಅವರನ್ನು ಸಂಘದ ಸಂಸ್ಥಾಪಕ ಅಧ್ಯಕ್ಷ ಸುಂದರ ಪೂಜಾರಿ  ಅಭಿನಂದಿಸಿದರು.

ವಿಶ್ವನಾಥ್‌ ಪೂಜಾರಿ ಕಡ್ತಲ
ಮೂಲತಃ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದವರಾದ ವಿಶ್ವನಾಥ ಪೂಜಾರಿ ಅವರು,  ಉದ್ಯೋಗವನ್ನರಸಿ ಪುಣೆಗೆ  ಆಗಮಿಸಿದವರು. ಕಠಿನ ಪರಿಶ್ರಮದಿಂದ  ಹೊಟೇಲ್‌ ಉದ್ಯಮವನ್ನು ಪ್ರಾರಂಬಿಸಿ, ಇದೀಗ ಪುಣೆಯಲ್ಲಿ ಪ್ರತಿಷ್ಠಿತ ಕಾತ್ರಜ್‌  ಜಂಕ್ಷನ್‌ ಫ್ಯಾಮಿಲಿ ರೆಸ್ಟೋ ಬಾರ್‌, ಹೊಟೇಲ್‌ ಸೃಷ್ಟಿ, ಹೊಟೇಲ್‌ ಸತ್ಕಾರ್‌ನ್ನು  ನಡೆಸುತ್ತಿ¨ªಾರೆ. ತನ್ನ ಉದ್ಯಮದ  ಜೊತೆಗೆ ಸಮಾಜ ಸೇವಾ ಕಾರ್ಯಗಳನ್ನು  ಕೈಗೊಂಡಿರುವ ಇವರು  ಕಷ್ಟದಲ್ಲಿರುವ ಹಲವಾರು ಸಣ್ಣ ಮಟ್ಟದ ಉದ್ಯಮಿಗಳಿಗೆ ಸಹಾಯಕರಾಗಿ  ನಿಂತವರು. ಇತರೆ ಜಾತಿ ಸಂಘಟನೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳೆಸಿಕೊಂಡಿರುವ ಇವರು ತುಳುನಾಡಿನವರಿಗೆ  ಯಾವುದೇ ರೀತಿಯ ತೊಂದರೆಯಾದಲ್ಲಿ ತಕ್ಷಣವೇ  ಆಗಮಿಸಿ  ತನ್ನಿಂದಾಗುವ ಸಹಾಯವನ್ನು ಮಾಡಿ ಎಲ್ಲರ ಸುಖ, ಕಷ್ಟಗಳಲ್ಲಿ ಭಾಗಿಯಾಗುತ್ತಾ ಪುಣೆಯಲ್ಲಿ ಬಹಳಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ.

ಈ ಹಿಂದೆ  ಎರಡು ವರ್ಷ ಪುಣೆ ರೆಸ್ಟೋರೆಂಟ್‌ ಅÂಂಡ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ನ ಸಮಿತಿ ಸದಸ್ಯರಾಗಿ ಸೇವೆಗೈದು, ಇದೀಗ ಎರಡು ವರ್ಷಗಳಿಂದ  ಉಪಾಧ್ಯಕ್ಷರಾಗಿ ಉತ್ತಮ ಕಾರ್ಯಗೈಯುತ್ತಿ¨ªಾರೆ. ಪುಣೆ ಬಿಲ್ಲವ ಸಂಘದ ಉಪಾಧ್ಯಕ್ಷರಾಗಿ ತನ್ನ ಸಮಾಜದ  ಸೇವೆ ಗೈಯು ತ್ತಾ, ಕಳೆದ ವರ್ಷ ನಡೆದ ಪುಣೆ ಬಿಲ್ಲವ ಸಂಘದ ಬೆಳ್ಳಿ ಮಹೋತ್ಸವ  ಆಚರಣೆಯ ಸಮಿತಿಯ ಅಧ್ಯಕ್ಷರಾಗಿ ಬೃಹತ್‌ ಮಟ್ಟದಲ್ಲಿ ಉತ್ತಮ ಶಿಸ್ತು ಬದ್ಧವಾಗಿ ಕಾರ್ಯಕ್ರಮವನ್ನು ಅಯೋಸಿದ್ದು ಇವರ ಸಂಘಟನಾ  ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಪುಣೆಯಲ್ಲಿ ಎಚ್‌ಐವಿ ಬಾಧಿತ  ಮಕ್ಕಳ ಮಮತಾ ಫೌಂಡೇಶನ್‌ನ ಬೆನ್ನೆಲುಬಾಗಿ ನಿಂತು ಸಹಾಯ ಹಸ್ತ ನೀಡುತ್ತಾ ಬಂದಿರುವ ಇವರು ತನ್ನ ಮಕ್ಕಳ ಹುಟ್ಟುಹಬ್ಬವನ್ನು ಎಚ್‌ಐವಿ ಬಾಧಿತ ಮಕ್ಕಳ ಜೊತೆಯಲ್ಲಿ   ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿ¨ªಾರೆ. ತನ್ನ ಹುಟ್ಟೂರು ಕಡ್ತಲದಲ್ಲಿ ಶಿರಿಬೈಲು ದೇವಸ್ಥಾನದಲ್ಲಿ ಪ್ರತಿ ವರ್ಷ  ದಸರದಂದು ಉತ್ಸವದ ದಿನದ ನೇತೃತ್ವ ವಹಿಸಿ ಅನ್ನದಾನ ಸೇವೆಯನ್ನು ನಡೆಸುತ್ತಿದ್ದಾರೆ. ಕಡ್ತಲ ಪ್ರಾಥಮಿಕ ಶಾಲೆಯ 10 ಬಡ ಮಕ್ಕಳನ್ನು ದತ್ತು ಪಡೆದು ಅವರ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿ¨ªಾರೆ. ಇದೀಗ ತನ್ನ ಸಮಾಜದ ಪುಣೆ  ಸಂಘಟನೆಯ  ಸಾರಥ್ಯ ವಹಿಸಿಕೊಂಡಿರುವ ಇವರು  ಪತ್ನಿ ಅರುಣಾ ಮತ್ತು ಮಕ್ಕಳಾದ ವಿರೇನ್‌ ಮತ್ತು ಆರವ್‌ ಅವರೊಂದಿಗೆ ಪುಣೆಯಲ್ಲಿ ನೆಲೆಸಿದ್ದಾರೆ.

ಪುರಂದರ ಪೂಜಾರಿ
ನಗರದ ಹಿರಿಯ ಹೊಟೇಲ್‌ ಉದ್ಯಮಿಯಾ ಗಿರುವ ಇವರು  ಮೂಲತಃ ಕಾರ್ಕಳ ತಾಲೂಕಿನ ದೊಂಡೆರಂಗಡಿಯವರು. ಕಡು ಬಡತನದಲ್ಲಿ ಎಲ್ಲರಂತೆಯೇ ಕನಸನ್ನು ಹೊತ್ತು ಮುಂಬಯಿ  ನಗರವನ್ನು ಸೇರಿ ಉದ್ಯೋಗಕ್ಕೆ ಸೇರಿ, ಆನಂತರ ಕಠಿನ  ಶ್ರಮದಿಂದ  ಹೊಟೇಲ್‌ ಉದ್ಯಮಕ್ಕೆ ಸೇರಿಕೊಂಡು ನಂತರ ಪುಣೆಯಲ್ಲಿ ಪಂಚಮಿ ಎಂಬ ಸಣ್ಣ ಹೊಟೇಲನ್ನು ನಡೆಸಿಕೊಂಡು ಬಂದ ಇವರು ನಂತರದ  ದಿನಗಳಲ್ಲಿ  ತನ್ನ  ಮಾಲಕತ್ವದಲ್ಲಿ  ಹೊಟೇಲ್‌ ಉದ್ಯಮವನ್ನು ಪ್ರಾರಂಭಿಸಿ ದೊಡ್ಡ ಮಟ್ಟದಲ್ಲಿ ವಿಸ್ತಾರಗೊಳಿಸಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕ ಪುಣೆಯಲ್ಲಿ ಹೆಸರಿನೊಂದಿಗೆ, ಗ್ರಾಹಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ತನ್ನ ಉದ್ಯಮ ಬೆಳೆದಂತೆ ತನ್ನ ಆದಾಯದಲ್ಲಿ ಒಂದಾಂಶವನ್ನು ಸಮಾಜಕ್ಕೆ ನೀಡುವ ದೃಢ  ಧ್ಯೇಯದೊಂದಿಗೆ ಸುಮಾರು 18 ವರ್ಷಗಳ ಹಿಂದೆ  ತನ್ನದೇ ಅದಂಥಹ ಪಂಚಮಿ ಚಾರಿಟೆಬಲ್‌ ಟ್ರಸ್ಟ್‌ನ್ನು ಸ್ಥಾಪಿಸಿ, ಅದರ  ಮುಖಾಂತರ ಹಲವಾರು ಸಮಾಜ ಮುಖೀ ಸೇವಾ ಕಾರ್ಯಮಾಡುತ್ತಿ¨ªಾರೆ.

ಟ್ರಸ್ಟ್‌ ಮುಖಾಂತರ  ಜನ್ಮ ಭೂಮಿ  ಉಡುಪಿ ಜಿÇÉೆ ಕಾರ್ಕಳ ತಾಲೂಕಿನಲ್ಲಿ ಮತ್ತು ಕರ್ಮಭೂಮಿ ಪುಣೆಯಲ್ಲಿ ಶಿಕ್ಷಣ, ಕ್ರೀಡೆ  ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 250 ಕ್ಕೂ ಮಿಕ್ಕಿದ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ಸಂಪೂರ್ಣ ಉಚಿತ ಶಿಕ್ಷಣವನ್ನು ಈ ಟ್ರಸ್ಟ್‌ ನೀಡುತ್ತಿದೆ. ಕಾರ್ಕಳ ತಾಲೂಕಿನ ಒಂದು ಶಾಲೆಯನ್ನು ದತ್ತು ಪಡೆದು ಅ ಶಾಲೆಯ ಮಕ್ಕಳಿಗೆ 7ನೇ ತರಗತಿಯ ವರೆಗೆ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಮಾಡಿದ್ದಾರೆ.  ಉಡುಪಿ ಜಿÇÉೆಯಲ್ಲಿ ಸುಮಾರು 65ಕ್ಕೂ ಮಿಕ್ಕಿದ ಅಂದರ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿ ಬಾಳಿಗೆ ಬೆಳಕಾಗಿದೆ ಈ ಟ್ರಸ್ಟ್‌.

ಪುಣೆಯಲ್ಲಿ ಪ್ರತಿ ವರ್ಷ ಅಂದ ಪುರುಷರು  ಮಹಿಳೆಯರು ಮತ್ತು ಮಕ್ಕಳಿಗೆ ಉಚಿತ ಕಣ್ಣಿನ  ವೈದ್ಯಕೀಯ ಶಿಬಿರನ್ನು ಟ್ರಸ್ಟ್‌ ಮುಖಾಂತರ ನಡೆಸಿ, ಉಚಿತ ಕನ್ನಡಕಗಳನ್ನು ನೀಡಲಾಗುತ್ತಿದೆ. ಅಂಧರಿಗೆ ಉಚಿತವಾಗಿ ಸೀರೆ, ಬಟ್ಟೆ ವಿತರಣೆ ಯನ್ನು ಪುರಂದರ ಪೂಜಾರಿ  ಅವರು ಮಾಡುತ್ತಿ¨ªಾರೆ. ಏಡ್ಸ್‌ ಬಗ್ಗೆ ಅರಿವು ಮೂಡಿಸುವ ರಾಜ್ಯ ಮಟ್ಟದ ಮ್ಯಾರಥಾನ್‌, ಕಬಡ್ಡಿ ಮತ್ತು ಇತರೆ ಕ್ರೀಡಾಕೂಟ ಏರ್ಪಡಿಸಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸಹಾಯಹಸ್ತವನ್ನು ನೀಡುತ್ತ ಬರುತ್ತಿ¨ªಾರೆ. ಪತ್ನಿ ಅಮಿತಾ ಮತ್ತು ಪುತ್ರಿ  ಡಾ| ವಿಜಯಲಕ್ಷ್ಮೀ  ಅವರೊಂದಿಗೆ ನಗರದಲ್ಲಿ ನೆಲೆಸಿದ್ದಾರೆ. 

ಚಿತ್ರ-ವರದಿ : ಹರೀಶ್‌ ಮೂಡಬಿದ್ರೆ

Trending videos

Back to Top