ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರ: ಉದಯ್‌ ಸುಂದರ್‌ ಶೆಟ್ಟಿ


Team Udayavani, Feb 9, 2019, 5:25 PM IST

77.jpg

ಮುಂಬಯಿ: ಜೀವನದಲ್ಲಿ ಯಶಸ್ಸು ಕಾಣಬೇಕಾದರೆ ಬದುಕಿನ ಬಗ್ಗೆ ಸ್ಪಷ್ಟ ಚಿಂತನೆ ಅತಿ ಅಗತ್ಯವಾಗಿದೆ. ಸಕಾರಾತ್ಮಕ ಗುಣ, ಶಿಸ್ತು ಸಂಯ ಮವನ್ನು ಅಳವಡಿಸಿಕೊಂಡು ಸತತ ಪರಿಶ್ರಮದ ಮೂಲಕ ಯಶಸ್ಸಿನ ದಾರಿಗುಂಟ ಸಾಗಲು ಸಾಧ್ಯವೆಂದು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಶಿರ್ವ  ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ ಅಧ್ಯಕ್ಷ ಉದಯ್‌ ಸುಂದರ್‌ ಶೆಟ್ಟಿ ನುಡಿದರು.

ಅವರು ಫೆ. 3 ರಂದು ಅಂಧೇರಿ ಪೂರ್ವದ ಹೊಟೇಲ್‌ ಪೆನಿನ್ಸುಲಾ ಗ್ರಾÂಂಡ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಜರಗಿದ ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ  ಕಾಲೇಜು ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ 9ನೇ ವಾರ್ಷಿ ಕೋತ್ಸವ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ,  ಸಂಸ್ಥೆಯ 9 ವರ್ಷಗಳ ಪ್ರಗತಿಗೆ ನಮ್ಮ ಹಳೆವಿದ್ಯಾರ್ಥಿ ಕುಟುಂಬದ ಅನ್ಯೋನ್ಯ ಸಂಬಂ ಧವೇ ಕಾರಣವಾಗಿದೆ. ನಿಮ್ಮೆಲ್ಲರ ಸಹಕಾರದಿಂದ ನಾನು ಈ ವೇದಿಕೆ ತಲುಪಲು ಸಾಧ್ಯವಾಗಿದೆ. ನೀವೆಲ್ಲರೂ ನನ್ನ ಪ್ರೀತಿಗೆ ಪಾತ್ರರಾಗಿದ್ದೀರಿ, ಮೆಚ್ಚುಗೆಯ ನುಡಿಗಳನ್ನಾಡಿದ್ದೀರಿ, ಇದು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ಮುಂಬರುವ ವರ್ಷದಲ್ಲಿ ದಶಮಾನೋತ್ಸವವನ್ನು ಆಚರಿಸಲಿರುವ ನಮ್ಮ ಹಳೆ ವಿದ್ಯಾರ್ಥಿ ಸಂಘ ಕಾರ್ಯಕ್ರಮದಲ್ಲಿ ನಮ್ಮ ಕಾಲೇಜಿನ ಎರಡು ಸಾವಿರ ವಿದ್ಯಾರ್ಥಿಗಳು ಭಾಗವಹಿಸುವಂತೆ ನಾವೆಲ್ಲರೂ ಪ್ರಯತ್ನಶೀಲರಾಗೋಣ ಎಂದು ಸದಸ್ಯರಿಗೆ ಕರೆ ನೀಡಿದರು.

ಮುಖ್ಯ ಅತಿಥಿ, ಉದ್ಯಮಿ, ಹೊಟೇಲ್‌ ಅವೇನ್ಯೂ ಇದರ ನಿರ್ದೇಶಕ ರಘುರಾಮ ಕೆ. ಶೆಟ್ಟಿ ಸಂಘದ ಕಾರ್ಯಚಟುವಟಿಕೆ ಮೆಚ್ಚಿ ಅಭಿನಂ ದನೆ ಸಲ್ಲಿಸಿದರು. ಸಂಘದ ಯಾವುದೇ ಕಾರ್ಯಯೋಜನೆಗೆ ತನ್ನ ಸಹಕಾರವಿದೆ ಎಂದರು.

ಗೌರವ ಅತಿಥಿ ಎಂ.ಎಸ್‌.ಆರ್‌.ಎಸ್‌. ಕಾಲೇಜು ಶಿರ್ವ ಇದರ ಪ್ರಾಂಶುಪಾಲ ಕರುಣಾಕರ ನಾಯ್ಕ ಮಾತನಾಡುತ್ತ, ಈ ಹಳೆ ವಿದ್ಯಾರ್ಥಿ ಸಂಘವು ಒಂದು ವಿಶಿಷ್ಟವಾದ ಸಂಘಟನೆಯಾಗಿದೆ  ಎಂಬುದು ಮುಂಬಯಿಯಲ್ಲಿ ನಿಮ್ಮ ಕಾರ್ಯಚಟುವಟಿಕೆಗಳನ್ನು ಕಂಡು ಗಮನಿಸಿದ್ದೇನೆ. ಸಂಘದ ಅಧ್ಯಕ್ಷ ಉದಯ್‌ ಸುಂದರ್‌ ಶೆಟ್ಟಿ ಅವರ ನಾಯಕತ್ವದ ಗುಣವೇ ನಿಮ್ಮ ಸಂಘದ ಹಿಂದಿರುವ ಶಕ್ತಿಯಾಗಿದೆ. ವಿದ್ಯೆ ನೀಡಿದ ಸಂಸ್ಥೆಯ ಬಗ್ಗೆಗಿನ ನಿಮ್ಮ ಪ್ರೀತಿ ಕಾಳಜಿ ಪ್ರಶಂಸನೀಯವಾದುದು. ಎಂದು ನುಡಿದರು.

ಇನ್ನೋರ್ವ ಗೌರವ ಅತಿಥಿ ಎಂ.ಎಸ್‌.ಆರ್‌.ಎಸ್‌. ಕಾಲೇಜು ಶಿರ್ವ ಇದರ ಸಹ ಉಪನ್ಯಾಸಕಿ ಹೇಮಲತಾ ಶೆಟ್ಟಿ ಮಾತನಾಡಿ, ಮುಂಬಯಿಯಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಕಾಣುವ, ಕಾರ್ಯಚಟುವಟಿಕೆಗಳನ್ನು ವೀಕ್ಷಿಸುವ ಅನಿರೀಕ್ಷಿತ ಅವಕಾಶ ನನ್ನ ಪಾಲಿಗೆ ಬಂದಿರುವುದು ನನಗೆ ಅತ್ಯಂತ ಸಂತಸ ನೀಡಿದೆ. ನಿಮ್ಮ ಉತ್ಸಾಹ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲಿ, ಕಾಲೇಜು ಇನ್ನಷ್ಟು ಅಭಿವೃದ್ಧಿ ಹೊಂದಲು ನಿಮ್ಮೆಲ್ಲರ ಸಹಕಾರವಿರಲೆಂದು ಆಶಿಸಿದರು.

ಎಂ.ಎಸ್‌.ಆರ್‌.ಎಸ್‌. ಕಾಲೇಜು ಶಿರ್ವದ ಕಚೇರಿ ಸಿಬಂದಿಗಳಾದ ಕುಮಾರಿ ಲಕ್ಷ್ಮೀ ಮತ್ತು ಗೀತಾ ಕುಮಾರಿ ಸಂಸ್ಥೆಯ ಎಲ್ಲಾ ಹಳೆವಿದ್ಯಾರ್ಥಿಗಳನ್ನು ಅಭಿನಂದಿಸಿದರು.

ಹಳೆ ವಿದ್ಯಾರ್ಥಿ ಸಂಘದ ಮಾರ್ಗದರ್ಶಕ ಹಾಗೂ ಸಲಹಾ ಸಮಿತಿ ಸದಸ್ಯ ಡಾ| ಶ್ರೀಧರ ಶೆಟ್ಟಿ ಅವರು ಅನಿಸಿಕೆ ವ್ಯಕ್ತಪಡಿಸುತ್ತ, 9ನೇ ವರ್ಷಕ್ಕೆ ಹೆಜ್ಜೆ ಇಟ್ಟಿರುವ ಎಂ.ಎಸ್‌.ಆರ್‌.ಎಸ್‌. ಕಾಲೇಜು ಹಳೆವಿದ್ಯಾರ್ಥಿ ಸಂಘ ಮುಂಬಯಿ ಇದರ ಪದಾಧಿಕಾರಿಗಳು ಹಾಗೂ ಸದಸ್ಯರ ಕಾರ್ಯ ಅದ್ಭುತವೆಂದು ಬಣ್ಣಿಸಿದರು.  ಸಮಾನ ಮನಸ್ಸಿನ ಹಳೆ ವಿದ್ಯಾರ್ಥಿಗಳಿಂದಾಗಿ ಸಂಸ್ಥೆಯು ಇಂದು ಆಲದ ಮರವಾಗಿ ಬೆಳೆಯಲು ಸಾಧ್ಯವಾಗಿದೆ ಎಂದು ನುಡಿದ ಅವರು,  ಮುಖ್ಯ ಅತಿಥಿ ರಘುರಾಮ ಶೆಟ್ಟಿಯವರೊಬ್ಬ ಆದರ್ಶಪ್ರಾಯ ವ್ಯಕ್ತಿಯಾಗಿದ್ದಾರೆ. ಅವರ ಹೃದಯ ಶ್ರೀಮಂತಿಕೆ, ಆಂತರಿಕ ಸೌಂದರ್ಯಕ್ಕೆ ನಾವೆಲ್ಲರೂ ತಲೆಬಾಗಬೇಕು ಎಂದು ಅವರನ್ನು ಅಭಿನಂದಿಸಿದರು.

‌ಂಸ್ಥೆಯ ಸಲಹೆಗಾರ ನಿತ್ಯಾನಂದ ಹೆಗ್ಡೆ ಅವರು ಮಾತನಾಡಿ, ಶಿರ್ವದ ಎರಡು ಕಾಲೇಜುಗಳು ಶಿರ್ವದ ಇತಿಹಾಸದಲ್ಲಿ ಆದ ಐತಿಹಾಸಿಕ ನಿರ್ಣಯವಾಗಿದೆ. ಈ ಶೈಕ್ಷಣಿಕ ನಿರ್ಣಯದ ವ್ಯವಸ್ಥೆಗೆ ಕಾರಣೀಭೂ ತರಾದ ಪೂಜ್ಯ ಮುದ್ದು ಶೆಟ್ಟಿ, ಸುಂದರ್‌ರಾಮ್‌ ಶೆಟ್ಟಿ ಹಾಗೂ ಸತೀಶ್ಚಂದ್ರ ಹೆಗ್ಡೆಯವರು ಸದಾ ಸ್ಮರಣೀಯರು ಎಂದು ನುಡಿದರು.

ಕಾರ್ಯಕ್ರಮ ಪ್ರಾಯೋಜಕ ಸತೀಶ್‌ ಶೆಟ್ಟಿ (ಪೆನಿನ್ಸುಲಾ ಹೊಟೇಲ್‌) ಮಾತನಾಡಿ, ಉದಯ್‌ ಸುಂದರ್‌ ಶೆಟ್ಟಿ ನೇತೃತ್ವದಲ್ಲಿ ಜರಗುತ್ತಿ ರುವ ಹಳೆವಿದ್ಯಾರ್ಥಿ ಸಂಘದ ಕಾರ್ಯಚಟುವಟಿಕೆಗಳನ್ನು ಕಳೆದ 9 ವರ್ಷದಿಂದ ಗಮನಿಸುತ್ತಾ ಬಂದಿ ದ್ದೇನೆ. ಮುಂದೆಯೂ ಸಂಘಕ್ಕೆ ನನ್ನ ಸಹಕಾರ ಇದ್ದೇ ಇದೆ ಎಂದರು. ಸಂಘದ ಅಭಿಮಾನಿ ಇನ್ನಬೀಡು ರವೀಂದ್ರ ಶೆಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುತ್ತ, ಎಂಎಸ್‌ಆರ್‌ಎಸ್‌ ಕುಟುಂಬದ ಕಾರ್ಯಚಟುವಟಿಕೆ ಇತರ ಹಳೆ ವಿದ್ಯಾರ್ಥಿ ಸಂಘಗಳಿಗೆ ಮಾದರಿ ಯಾಗಲೆಂದು ಅವರು ಆಶಿಸಿದರು.

ಇದೇ ಸಂದರ್ಭದಲ್ಲಿ ಮುಖ್ಯ ಅತಿಥಿ ಅವೆನ್ಯೂ ಹೊಟೇಲ್‌ ನಿರ್ದೇಶಕ ರಘುರಾಮ ಕೆ. ಶೆಟ್ಟಿ ಅವರನ್ನು ಸಂಘದ ಅಧ್ಯಕ್ಷ ವಿಜಯ್‌ಸುಂದರ್‌ ಶೆಟ್ಟಿ ಮತ್ತು ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ಸಮ್ಮಾನ ಪತ್ರ ಪುಷ್ಪಗುತ್ಛ ನೀಡಿ ಸಮ್ಮಾನಿಸಿದರು.  ಹಳೆ ವಿದ್ಯಾರ್ಥಿನಿ ಅನಿತಾ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಗೌರವ ಅತಿಥಿಗಳಾದ ಕರುಣಾಕರ್‌ ನಾಯ್ಕ, ಹೇಮಲತಾ ಶೆಟ್ಟಿ, ಕುಮಾರಿ ಲಕ್ಷ್ಮಿ, ಗೀತಾ ಕುಮಾರಿ, ಶಶಿಕಾಂತಿ ಶೆಟ್ಟಿ ಸತೀಶ್‌ ಶೆಟ್ಟಿ ದಂಪತಿ ಪೆನಿನ್ಸುಲಾ ಇವರನ್ನು ಸತ್ಕರಿಸಲಾಯಿತು.

ಸಲಹಾ ಸಮಿತಿಯ ಸದಸ್ಯರಾದ ಡಾ| ಶ್ರೀಧರ ಶೆಟ್ಟಿ, ನಿತ್ಯಾನಂದ ಹೆಗ್ಡೆ, ಅನಿಲ್‌ ಶೆಟ್ಟಿ ಏಳಿಂಜೆ, ಶರತ್‌ ಶೆಟ್ಟಿ, ಸತೀಶ್‌ ಶೆಟ್ಟಿ, ಎಸ್‌.ಎಂ. ಭಟ್‌ ಇವರನ್ನು ಗೌರವಿಸಲಾಯಿತು. ಕವಿ, ಲೇಖಕ ಸಂಘದ ಹಳೆ ವಿದ್ಯಾರ್ಥಿ ಪಂಜಿಮಾರು ಉದಯ್‌ ಶೆಟ್ಟಿ, ಶೈಲಜಾ ಶೆಟ್ಟಿ ದಂಪತಿಯನ್ನು ವಿಶೇಷವಾಗಿ ಸಮ್ಮಾನಿಸಲಾಯಿತು. ಅನಿತಾ ಶೆಟ್ಟಿ ಸಮ್ಮಾನ ಪತ್ರ ವಾಚಿಸಿದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಬುನಾ ಎಸ್‌. ಶೆಟ್ಟಿ, ಪಂಜಿಮಾರು ಉದಯ್‌ ಶೆಟ್ಟಿ ಕವಿತೆ ವಾಚಿಸಿದರು. ಸಮ್ಮಾನಕ್ಕೆ ಉದಯ್‌ ಶೆಟ್ಟಿ ಕೃತಜ್ಞತೆ ಸಲ್ಲಿಸಿದರು.  ಬಳಿಕ ಹಳೆ ವಿದ್ಯಾರ್ಥಿಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಸಚ್ಚಿದಾನಂದ ಶೆಟ್ಟಿ ವಿದ್ಯಾರ್ಥಿಗಳ ಪಟ್ಟಿಯನ್ನು ಓದಿದರು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ವಿಜೇತರ ಹೆಸರನ್ನು ಜ್ಯೋತಿ ಶೆಟ್ಟಿ ಓದಿದರು. ಆರಂಭದಲ್ಲಿ ಅಧ್ಯಕ್ಷ ಉದಯ್‌ ಕುಮಾರ್‌ ಶೆಟ್ಟಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆಶಾಲತಾ ಶ್ರೀಧರ್‌ ಶೆಟ್ಟಿ ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷ ಖಾಂದೇಶ್‌ ಭಾಸ್ಕರ್‌ ಶೆಟ್ಟಿ ಎಲ್ಲರನ್ನೂ ಸ್ವಾಗತಿಸಿ ಹಳೆ ವಿದ್ಯಾರ್ಥಿ ಸಂಘ ಕಾಲೇಜಿಗೆ ನೀಡಿದ ಕೊಡುಗೆಯನ್ನು ವಿವರಿಸಿದರು. 

ಸಂಘದ ಗೌರವ ಕಾರ್ಯದರ್ಶಿ ಜಗದೀಶ್‌ ಬಿ. ಶೆಟ್ಟಿ ವಾರ್ಷಿಕ ವರದಿ ಓದಿದರು. ಗೌರವ ಕೋಶಾಧಿಕಾರಿ ಸಿಎ ರವಿರಾಜ್‌ ಶೆಟ್ಟಿ ಲೆಕ್ಕ ಪತ್ರದ ವರದಿ ಸಲ್ಲಿಸಿದರು. ಸಭಾ ಕಾರ್ಯಕ್ರಮವನ್ನು ರವೀಶ್‌ ಆಚಾರ್ಯ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಾಯಕ, ಶಿಬರೂರು ಸುರೇಶ್‌ ಶೆಟ್ಟಿ ನಿರ್ವಹಿಸಿದರು. ವಿಶ್ವನಾಥ ಬಂಗೇರ ವಂದಿಸಿದರು. ಪೆನಿನ್ಸುಲಾ ಸತೀಶ್‌ ಶೆಟ್ಟಿ, ಶಶಿಕಾಂತಿ ಶೆಟ್ಟಿ ದಂಪತಿ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವೇದಿಕೆಯಲ್ಲಿ ಅಧ್ಯಕ್ಷ ಉದಯ್‌ ಸುಂದರ್‌ ಶೆಟ್ಟಿ, ಮುಖ್ಯ ಅತಿಥಿ ರಘುರಾಮ ಕೆ. ಶೆಟ್ಟಿ, ಗೌರವ ಅತಿಥಿ ಕರುಣಾಕರ ನಾಯ್ಕ, ಹೇಮಲತಾ ಶೆಟ್ಟಿ, ಕಾಲೇಜಿನ ಸಿಬಂದಿ ವರ್ಗದ ಕುಮಾರಿ ಲಕ್ಷ್ಮೀ, ಗೀತಾ ಕುಮಾರಿ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ವಸಂತ್‌ ಎನ್‌. ಶೆಟ್ಟಿ ಫಲಿಮಾರು, ಮೋಹನ್‌ ಶೆಟ್ಟಿ, ಗೌರವ ಕಾರ್ಯದರ್ಶಿ ಜಗದೀಶ್‌ ಬಿ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರವಿರಾಜ್‌  ಶೆಟ್ಟಿ, ಜೊತೆ ಕಾರ್ಯದರ್ಶಿ ಸಂದೀಪ್‌ ಎಸ್‌. ಶೆಟ್ಟಿ, ಜೊತೆ ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿ, ಸಂಚಾಲಕ ಫ್ರಾನ್ಸಿಸ್‌ ವಾಲ್ಟರ್‌ ಮಥಾಯ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಬುನಾ ಎಸ್‌. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.        

ಚಿತ್ರ-ವರದಿ:   ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು

ಟಾಪ್ ನ್ಯೂಸ್

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್‌ಡಿಐಎ ಧ್ಯೇಯ: ಜೆ.ಪಿ. ನಡ್ಡಾ

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

ಭಾರತೀಯ ಚೊಂಬು ಪಕ್ಷದಿಂದ ಕರ್ನಾಟಕಕ್ಕೆ ಚೊಂಬು: ರಾಹುಲ್‌

1-weewqewqe

Madrid: 16 ವರ್ಷದ ಎದುರಾಳಿ ವಿರುದ್ಧ ನಡಾಲ್‌ಗೆ ಸುಲಭ ಜಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Road Mishap;ಅರಂತೋಡು: ಕಾರು – ಬೈಕ್‌ ಢಿಕ್ಕಿ: ಸವಾರ ಸಾವು

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.