ರೋಹಿತ್‌ ದಾಖಲೆ ರೈಡ್‌ ಯುಪಿಗೆ 24-64 ಅಂಕಗಳ ಸೋಲು


Team Udayavani, Oct 18, 2017, 12:19 PM IST

6988.jpg

ಪುಣೆ: ನಾಯಕ ರೋಹಿತ್‌ ಕುಮಾರ್‌ ಅವರ ದಾಖಲೆಯ ರೈಡಿಂಗ್‌ ಅಂಕ (30 ಅಂಕ) ದಿಂದ ಬೆಂಗಳೂರು ಬುಲ್ಸ್‌ 5ನೇ ಆವೃತ್ತಿ ಪ್ರೊ ಕಬಡ್ಡಿಯ ಪುಣೆ ಚರಣದಲ್ಲಿ 64-24ರಿಂದ ಯುಪಿ ಯೋಧಾ ತಂಡವನ್ನು ಸೋಲಿಸಿದೆ. ಆದರೆ ಬೆಂಗಳೂರು ಈಗಾಗಲೇ ಪ್ಲೇ ಆಫ್ ರೇಸ್‌ನಿಂದ ಹೊರಬಿದ್ದಿರುವುದು ಅಭಿಮಾನಿಗಳಲ್ಲಿ ನಿರಾಶೆ ಮೂಡಿಸಿದೆ.

ಈ ಪಂದ್ಯದಲ್ಲಿ ರೋಹಿತ್‌ ಕುಮಾರ್‌ ಅವರದೇ ಗರ್ಜನೆ. ಬೆಂಗಳೂರು ಗಳಿಸಿದ 64 ಅಂಕದಲ್ಲಿ ಅರ್ಧದಷ್ಟು ಅಂದರೆ 32 ಅಂಕ ರೋಹಿತ್‌ ಅವರದೇ ಆಗಿದೆ. ಈ ಮೂಲಕ ರೋಹಿತ್‌ ಯುಪಿ ತಂಡದ ರಿಷಾಂಕ್‌ ದೇವಾಡಿಗ ಜೈಪುರ ವಿರುದ್ಧ ನಿರ್ಮಿಸಿದ್ದ ಪಂದ್ಯವೊಂದರ ಗರಿಷ್ಠ 28 ಅಂಕಗಳ ದಾಖಲೆಯನ್ನು ಅಳಿಸಿ ಹಾಕಿದರು. 

ದಿನದ ಇನ್ನೊಂದು ಪಂದ್ಯದಲ್ಲಿ ಆತಿಥೇಯ ಪುನೇರಿ ಪಲ್ಟಾನ್ಸ್‌ ತಂಡವು ತನ್ನ ವಲಯದ ದ್ವಿತೀಯ ಸ್ಥಾನಿ ಹರಿಯಾಣ ಸ್ಟೀಲರ್ಗೆ 27-31 ಅಂಕಗಳಿಂದ ಶರಣಾಗಿದೆ. ಈ ಗೆಲುವಿನಿಂದ ಹರಿಯಾಣ ಲೀಗ್‌ ಹಂತದ ಹೋರಾಟ ಮುಗಿಸಿದ್ದು ಆಡಿದ 22 ಪಂದ್ಯಗಳಿಂದ 79 ಅಂಕ ಗಳಿಸಿದೆ. ಪುನೇರಿ ತಂಡಕ್ಕೆ ಇನ್ನೆರಡು ಪಂದ್ಯ ಬಾಕಿ ಉಳಿದಿದ್ದು ಸದ್ಯ 74 ಅಂಕ ಹೊಂದಿದೆ. ಇನ್ನುಳಿದ ಎರಡು ಪಂದ್ಯಗಳಲ್ಲಿ ಪುನೇರಿ ಗೆದ್ದರೆ ಅಗ್ರಸ್ಥಾನಕ್ಕೇರುವ ಸಾಧ್ಯತೆಯಿದೆ. ಸದ್ಯ ಅಗ್ರಸ್ಥಾನದಲ್ಲಿರುವ ಗುಜರಾತ್‌ 82 ಅಂಕ ಹೊಂದಿದೆ.  ಶುಕ್ರವಾರ ಲೀಗ್‌ನ ಕೊನೆಯ ಪಂದ್ಯದಲ್ಲಿ ಪುನೇರಿ ತಂಡವು ಗುಜರಾತ್‌ ತಂಡವನ್ನು ಎದುರಿಸಲಿದೆ. 

ಆರಂಭದಲ್ಲಿಯೇ ಅಬ್ಬರ 
ಪಂದ್ಯದ ಆರಂಭದಿಂದಲೇ ಬುಲ್ಸ್‌ ಭಾರೀ ಹೋರಾಟ ಪ್ರದರ್ಶಿಸಿತು. ಹಂತ ಹಂತವಾಗಿ ಅಂಕ ಗಳಿಕೆಯಲ್ಲಿ ಭಾರೀ ಅಂತರವನ್ನು ಪಡೆಯುತ್ತ¤ ಸಾಗಿತು. ಅತ್ತ ಯೋಧಾ ತಂಡ ವೈಫ‌ಲ್ಯಕ್ಕೆ ತುತ್ತಾಗಿತ್ತು. ಹೀಗಾಗಿ ಮೊದಲ ಅವಧಿಯ ಅಂತ್ಯದಲ್ಲಿ ಬುಲ್ಸ್‌ 27-10ರಿಂದ ಮುನ್ನಡೆ ಪಡೆದಿತ್ತು. ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದ್ದರಿಂದ ಯುಪಿ ಯೋಧಾ ತಂಡ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಿತ್ತು. 

2ನೇ ಅವಧಿಯಲ್ಲೂ ಮಿಂಚದ ಯುಪಿ: 2ನೇ ಅವಧಿಯ ಆರಂಭದಲ್ಲಿ ಯೋಧಾ ತಿರುಗೇಟು ನೀಡುವ ಸೂಚನೆ ನೀಡಿತ್ತು. ಆದರೆ ಬುಲ್ಸ್‌ ಅದಕ್ಕೆ ಅವಕಾಶ ನೀಡಲಿಲ್ಲ. ಒಂದರ ಹಿಂದೆ ಒಂದರಂತೆ ಒಟ್ಟು 5 ಬಾರಿ ಯೋಧಾ ತಂಡವನ್ನು ಆಲೌಟ್‌ ಮಾಡಿತ್ತು. ಆದರೆ ಬುಲ್ಸ್‌ ಮಾತ್ರ ಒಮ್ಮೆಯೂ ಆಲೌಟ್‌ ಆಗದೇ ಕೊನೆಯವರೆಗೂ ರೋಚಕವಾಗಿ ಹೋರಾಟ ಪ್ರದರ್ಶಿಸಿತು.

ಈ ಗೆಲುವಿನ ಮೂಲಕ ಬೆಂಗಳೂರು ತಂಡ 21 ಪಂದ್ಯಗಳಿಂದ 8 ಜಯ, 11 ಸೋಲು, 2 ಟೈ ಸಹಿತ ಒಟ್ಟು 54 ಅಂಕ ಸಂಪಾದಿಸಿ 4ನೇ ಸ್ಥಾನಕ್ಕೆ ಜಿಗಿದಿದೆ. ಅತ್ತ ಯೋಧಾ ತಂಡ 22 ಪಂದ್ಯಗಳಿಂದ 8 ಜಯ, 10 ಸೋಲು, 4 ಟೈ ಸಹಿತ  ಒಟ್ಟು 60 ಅಂಕ ಸಂಪಾದಿಸಿ “ಬಿ’ ಗುಂಪಿನಲ್ಲಿ 3ನೇ ಸ್ಥಾನದಲ್ಲಿದೆ. ಲೀಗ್‌ನಲ್ಲಿ ಬೆಂಗಳೂರಿಗೆ ಇನ್ನು ಪಾಟ್ನಾ ವಿರುದ್ಧದ ಒಂದು ಪಂದ್ಯ ಮಾತ್ರ ಬಾಕಿ ಇದೆ.
ಪಂದ್ಯದಲ್ಲಿ ರೋಹಿತ್‌ ಕುಮಾರ್‌ 31 ರೈಡಿಂಗ್‌ನಿಂದ 30 ಅಂಕ ಸಂಪಾದಿಸಿದ್ದಾರೆ. ಅದರಲ್ಲಿ 25 ಟಚ್‌ ಪಾಯಿಂಟ್‌, 5 ಬೋನಸ್‌ ಅಂಕಗಳು. ಇನ್ನು ಕ್ಯಾಚಿಂಗ್‌ನಿಂದ ರೋಹಿತ್‌ 2 ಅಂಕ ಗಳಿಸಿದ್ದಾರೆ. ಒಟ್ಟಾರೆ ಅವರ ಗಳಿಕೆ 32 ಅಂಕಗಳಾಗಿವೆ.

ಇಂದಿನ  ಪಂದ್ಯಗಳು
ಪ್ರಸಾರ: ಸ್ಟಾರ್‌ ಸ್ಫೋರ್ಟ್ಸ್ ಸುವರ್ಣ ಪ್ಲಸ್‌

ಬೆಂಗಳೂರು ಬುಲ್ಸ್‌-
ಪಾಟ್ನಾ ಪೈರೇಟ್ಸ್‌

ಆರಂಭ: ರಾತ್ರಿ 8.00

ಪುನೇರಿ ಪಲ್ಟಾನ್ಸ್‌-
ಜೈಪುರ ಪ್ಯಾಂಥರ್

ಆರಂಭ: ರಾತ್ರಿ 9.00

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.