ಧೋನಿ 505ನೇ ಅಂತಾರಾಷ್ಟ್ರೀಯ ಪಂದ್ಯ
Team Udayavani, Sep 25, 2018, 11:51 AM IST
ಪಾಕಿಸ್ಥಾನ ವಿರುದ್ಧದ ಮುಖಾಮುಖೀಯ ವೇಳೆ ಕೀಪರ್ ಮಹೇಂದ್ರ ಸಿಂಗ್ ಧೋನಿ ಭಾರತದ ಪರ 2ನೇ ಅತ್ಯಧಿಕ ಸಂಖ್ಯೆಯ ಅಂತಾರಾಷ್ಟ್ರೀಯ ಪಂದ್ಯವಾಡಿದ ಕ್ರಿಕೆಟಿಗನಾಗಿ ಮೂಡಿಬಂದರು. ಇದು ಎಲ್ಲ ಮಾದರಿಯಲ್ಲಿ ಅವರ 505ನೇ ಅಂತಾರಾಷ್ಟ್ರೀಯ ಪಂದ್ಯಾವಾಗಿತ್ತು. 504 ಪಂದ್ಯಗಳನ್ನಾಡಿದ ರಾಹುಲ್ ದ್ರಾವಿಡ್ ಅವರನ್ನು ಧೋನಿ ಮೀರಿನಿಂತರು. 664 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಸಚಿನ್ ತೆಂಡುಲ್ಕರ್ ಅವರದು ದಾಖಲೆಯಾಗಿದೆ.