CONNECT WITH US  

ಟೆನ್ನಿಸ್ ಕೋರ್ಟ್ ನಿಂದ ಹಿಂದೆ ಸರಿದ ಆಂಡಿ ಮರ‍್ರೆ

ಆಸ್ಟ್ರೇಲಿಯನ್ ಓಪನ್ ನಂತರ ಕಣಕ್ಕಿಳಿಯುದಿಲ್ಲವಂತೆ ಬ್ರಿಟನ್ ಟೆನ್ನಿಸ್ ಸ್ಟಾರ್

ಬ್ರಿಟನ್: ಸುಮಾರು 77  ವರ್ಷದ ನಂತರ ವಿಂಬಲ್ಡನ್ ಕಿರೀಟ ಗೆದ್ದ ಖ್ಯಾತಿಯ ಆಂಡಿ ಮರ‍್ರೆ ತಮ್ಮ ಟೆನ್ನಿಸ್ ಬಾಳ್ವೆಗೆ ವಿದಾಯ ಹೇಳಿದ್ದಾರೆ. ಆಸ್ಟ್ರೇಲಿಯನ್ ಓಪನ್ ಕೂಟದ ರೋಬರ್ಟೋ ಬಟಿಸ್ಟಾ ವಿರುದ್ದದ ಪಂದ್ಯ ತನ್ನ ಕೊನೆಯ ಪಂದ್ಯವಾಗಬಹುದು ಎಂದಿದ್ದಾರೆ. 

ಮಾಜಿ ನಂ 1 ಶ್ರೇಯಾಂಕಿತ ಆಟಗಾರ ಆಂಡಿ ಮರ‍್ರೆ ದೀರ್ಘಕಾಲದಿಂದ ಸೊಂಟ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ಇನ್ನು ಮುಂದೆ ಆಡಲು ಸಾಧ್ಯವಿಲ್ಲ. ವಿಂಬಲ್ಡನ್ ನಂತರ ನಿವೃತ್ತಿ ಹೊಂದುವ ಇಚ್ಛೆ ಇದೆ. ಆದರೆ ಆಸ್ಟ್ರೇಲಿಯನ್ ಓಪನ್ ನನ್ನ ಕೊನೆಯ ಪಂದ್ಯವಾಗಲೂಬಹುದು ಎಂದಿದ್ದಾರೆ. 

ಟೆನ್ನಿಸ್ ಲೋಕದ ಅಗ್ರಮಾನ್ಯ ಆಟಗಾರರ ಸಾಲಿನಲ್ಲಿ ಕಾಣಿಸಿಕೊಳ್ಳುವ ಆಂಡಿ ಮರ‍್ರೆ ಈವರೆಗೆ ಮೂರು ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆದ್ದಿದ್ದಾರೆ. 

Trending videos

Back to Top