ನಾಗ್ಪುರ ಸ್ಟೇಡಿಯಂನಿಂದಲೂ ಪಾಕ್ ಕ್ರಿಕೆಟ್ ಫೋಟೊ ತೆರವು
Team Udayavani, Feb 21, 2019, 12:30 AM IST
ನಾಗ್ಪುರ: ಪುಲ್ವಾಮಾದಲ್ಲಿ ಯೋಧರ ಮೇಲಿನ ದಾಳಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಭಾವನೆಯನ್ನು ಎತ್ತಿ ಹಿಡಿಯುವ ಸಲುವಾಗಿ ವಿದರ್ಭ ಕ್ರಿಕೆಟ್ ಮಂಡಳಿ ನಾಗ್ಪುರ ಸ್ಟೇಡಿಯಂನಲ್ಲಿದ್ದ ಪಾಕಿಸ್ಥಾನದ ಮಾಜಿ ಕ್ರಿಕೆಟಿಗರ ಫೋಟೊಗಳನ್ನು ತೆರವುಗೊಳಿಸಿದೆ.
“ಮಾಜಿ ನಾಯಕ ಇಮ್ರಾನ್ ಖಾನ್, ಬ್ಯಾಟ್ಸ್ಮನ್ ಜಾವೇದ್ ಮಿಯಾಂದಾದ್ ಅವರ ಚಿತ್ರಗಳೂ ಸೇರಿದಂತೆ ಪಾಕಿಸ್ಥಾನದ ಆಟಗಾರರ ಎಲ್ಲ ಫೋಟೊಗಳನ್ನೂ ತೆರವುಗೊಳಿಸಲಾಗಿದೆ. ಇದನ್ನು ವಿಸಿಎ ಅಧ್ಯಕ್ಷ ಆನಂದ್ ಜೈಸ್ವಾಲ್ ತಿಳಿಸಿದ್ದಾರೆ.
ಈ ಹಿಂದೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಮೊಹಾಲಿ, ಜೈಪುರ ಸ್ಟೇಡಿಯಂ ಮತ್ತು ಮುಂಬಯಿ ಕ್ರಿಕೆಟ್ ಕ್ಲಬ್ಗಳಿಂದಲೂ ಪಾಕಿಸ್ಥಾನ ಆಟಗಾರರ ಫೋಟೋಗಳನ್ನು ತೆಗೆದುಹಾಕಲಾಗಿತ್ತು.