CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ರಾಷ್ಟ್ರಪತಿ ಚುನಾವಣೆ: ಜೆಡಿಎಸ್‌ ಮತದಾನ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಎಸ್‌ನ ವೈ.ಎಸ್‌.ವಿ.ದತ್ತಾ ಹಾಗೂ ಭಿನ್ನಮತೀಯ ಶಾಸಕ ಚೆಲುವರಾಯಸ್ವಾಮಿ ಮತ ಚಲಾವಣೆ ಮಾಡಲಿಲ್ಲ. ದತ್ತಾ ಆರು ಮತದಾನಕ್ಕೆ ಹೊರಟಿದ್ದಾಗ ಮಾರ್ಗಮಧ್ಯೆ ಸಹೋದರಿ ನಿಧನ ಸುದ್ದಿ ಬಂದ ಹಿನ್ನೆಲೆಯಲ್ಲಿ ವಾಪಸ್ಸಾಗಿ ಮತದಾನಕ್ಕೆ ಗೈರು ಹಾಜರಾದರು. ಚೆಲುವರಾಯಸ್ವಾಮಿಯವರು ಅಮೆರಿಕ ಪ್ರವಾಸದಲ್ಲಿದ್ದ ಕಾರಣ ಮತದಾನಕ್ಕೆ ಗೈರು ಹಾಜರಾಗಿದ್ದರು.32 ಜೆಡಿಎಸ್‌ ಶಾಸಕರು, ಆರು ಮಂದಿ ಭಿನ್ನಮತೀಯ ಶಾಸಕರು ಮತದಾನದಲ್ಲಿ ಪಾಲ್ಗೊಂಡು ಯುಪಿಎ ಅಭ್ಯರ್ಥಿ ಮೀರಾ ಕುಮಾರ್‌ಗೆ ಮತ ಚಲಾಯಿಸಿದರು. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಸಂಸದ ಪುಟ್ಟರಾಜು ದೆಹಲಿಯಲ್ಲಿ ಮತ ಚಲಾವಣೆ ಮಾಡಿದರು.


ಎಚ್‌.ಡಿ.ಕುಮಾರಸ್ವಾಮಿ ಅವರು ಶಾಸಕರ ಜತೆಗೂಡಿ ಬಂದು ಮತದಾನ ಮಾಡಿದರು. ಜಮೀರ್‌ ಅಹಮದ್‌ ನೇತೃತ್ವದಲ್ಲಿ ಐವರು ಭಿನ್ನಮತೀಯ ಶಾಸಕರು ಮೊದಲಿಗೆ ಮತ ಚಲಾವಣೆ ಮಾಡಿದರು. ಅನಂತರ ಇಕ್ಬಾಲ್‌ ಅನ್ಸಾರಿ ವಿಳಂಬವಾಗಿ ಬಂದು ಮತದಾನ ಮಾಡಿದರು. ಮತದಾನ ಅನಂತರ ಮಾತನಾಡಿದ ಎಚ್‌.ಡಿ. ಕುಮಾರಸ್ವಾಮಿ, ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡರ ನಿರ್ಣಯದಂತೆ ಯುಪಿಎ ಅಭ್ಯರ್ಥಿ ಮೀರಾ ಕುಮಾರ್‌ ಅವರಿಗೆ 32 ಶಾಸಕರು ಮತ ಚಲಾವಣೆ ಮಾಡಿದ್ದೇವೆ ಎಂದರು. ಸಿ.ಟಿ. ರವಿ, ಜೆಡಿಎಸ್‌ನ ಕೆಲವರು ಎನ್‌ಡಿಎ ಅಭ್ಯರ್ಥಿಗೆ ಮತ ಚಲಾಯಿಸಲಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ರೀತಿ ಯಾರೂ ಪಕ್ಷದ ತೀರ್ಮಾನ ಉಲ್ಲಂಘಿಸಿಲ್ಲ. ಪಕ್ಷದ ಶಾಸಕರು ದೇವೇಗೌಡರ ತೀರ್ಮಾನಕ್ಕೆ ಬದ್ಧರಾಗಿ ಸಹಮತದಿಂದಲೇ ಮೀರಾಕುಮಾರ್‌ ಅವರಿಗೆ ಮತ ಚಲಾವಣೆ ಮಾಡಿದ್ದಾರೆ ಎಂದರು.

Back to Top