ಸೆಲ್ಫಿಗೆ ಡಿಕೆಶಿ ಗರಂ: ವಿದ್ಯಾರ್ಥಿಗೆ ಏಟು
Team Udayavani, Nov 21, 2017, 6:55 AM IST
ಬೆಳಗಾವಿ: ಸಚಿವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕೋಪಗೊಂಡ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿದ್ಯಾರ್ಥಿಗೆ ಏಟು ಕೊಟ್ಟ ಘಟನೆ ಸೋಮವಾರ ನಡೆದಿದೆ.
ನಗರದ ಶೇಖ್ ಹೋಮಿಯೋಪಥಿ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕು ದಿನಾಚರಣೆ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ ಪಾಲ್ಗೊಂಡಿದ್ದರು. ಕಾರ್ಯ ಕ್ರಮದ ವೇಳೆ ವಿದ್ಯಾರ್ಥಿಯೊಬ್ಬ ಸಚಿವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಮುಂದಾದ. ಇದರಿಂದ ಕೋಪಗೊಂಡ ಸಚಿವರು ವಿದ್ಯಾರ್ಥಿಯ ಕೈಗೆ ಹೊಡೆದು ಮೊಬೈಲ್ ಕೆಳಗೆ ಬೀಳಿಸಿದರು. ಇದರಿಂದ ಕೆಲ ಕಾಲ ಗೊಂದಲ ಸೃಷ್ಟಿಯಾಯಿತು