ಈಗ ಪ್ರಜ್ವಲ್ ರೇವಣ್ಣ JDS ಪ್ರಧಾನ ಕಾರ್ಯದರ್ಶಿ; ಎಚ್.ಡಿ.ದೇವೇಗೌಡ
Team Udayavani, Nov 27, 2017, 2:33 PM IST
ಬೆಂಗಳೂರು: ಕೊನೆಗೂ ಜೆಡಿಎಸ್ ವರಿಷ್ಠ್ ಎಚ್.ಡಿ.ದೇವೇಗೌಡರು ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಜೆಡಿಎಸ್ ನಲ್ಲಿ ಯುವ ನಾಯಕನೆಂದೇ ಗುರುತಿಸಿಕೊಂಡಿರುವ ಪ್ರಜ್ವಲ್ ರೇವಣ್ಣಗೆ ಉನ್ನತ ಸ್ಥಾನಮಾನ ನೀಡಲಾಗಿದೆ. ಇದರಿಂದ ಪ್ರಜ್ವಲ್ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರು.
ನಂಬಿಕೆ ಉಳಿಸಿಕೊಳ್ಳುತ್ತೇನೆ: ಪ್ರಜ್ವಲ್ ರೇವಣ್ಣ
ದೊಡ್ಡವರು (ಎಚ್.ಡಿ.ದೇವೇಗೌಡ) ನನ್ನ ಮೇಲೆ ನಂಬಿಕೆ ಇಟ್ಟು ಈ ಸ್ಥಾನ ಕೊಟ್ಟಿದ್ದಾರೆ. 27 ವರ್ಷದ ಯುವಕನ ಮೇಲೆ ಭರವಸೆ ಇಟ್ಟಿದ್ದಾರೆ. ಎಲ್ಲರ ನಂಬಿಕೆಯನ್ನು ಉಳಿಸಿಕೊಂಡು ವಿಶ್ವಾಸ ಗಳಿಸುವುದಾಗಿ ಪ್ರಜ್ವಲ್ ರೇವಣ್ಣ ತಿಳಿಸಿದ್ದಾರೆ.