ಆಪರೇಷನ್‌ ಕಮಲಕ್ಕೆ ವರಿಷ್ಠರಿಂದ ಬ್ರೇಕ್‌

Team Udayavani, Mar 6, 2018, 6:30 AM IST

Amit-Shah-4-600.jpg

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಮಿಷನ್‌ 150+ ಗುರಿ ಸಾಧನೆಗಾಗಿ ರಾಜ್ಯದಲ್ಲಿ ಆಪರೇಷನ್‌ ಕಮಲದ ಮೂಲಕ ಅನ್ಯ ಪಕ್ಷದ ಪ್ರಮುಖರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಸಿದ್ಧವಾಗಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಪಕ್ಷದ ವರಿಷ್ಠರು ಬ್ರೇಕ್‌ ಹಾಕಿದ್ದು, ಅಭ್ಯರ್ಥಿಗಳ ಆಯ್ಕೆ ಕುರಿತ ಸಮೀಕ್ಷೆ ಮತ್ತು ಅವರು ಗೆಲ್ಲುವ ಸಾಮರ್ಥ್ಯವನ್ನು ಪರಿಶೀಲಿಸಿದ ಬಳಿಕವೇ ಆಪರೇಷನ್‌ ಕಮಲ ಆರಂಭಿಸುವಂತೆ ಸೂಚಿಸಿದ್ದಾರೆ.

ಪಕ್ಷ ಸೇರಲು ಮುಂದಾಗುವವರೆಲ್ಲರನ್ನೂ ಬರಮಾಡಿಕೊಂಡು ಚುನಾವಣೆ ಸಂದರ್ಭದಲ್ಲಿ ಗೊಂದಲ ಮೂಡಿಸುವ ಬದಲು ಗೆಲ್ಲುವ ಸಾಮರ್ಥ್ಯವಿರುವ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬಳಿಕವೇ ಪಕ್ಷ ಗೆಲ್ಲಲು ಸಾಧ್ಯವಿಲ್ಲ ಎಂಬ ಕಡೆ ಅನ್ಯ ಪಕ್ಷಗಳ ಪ್ರಮುಖರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂಬ ಸ್ಪಷ್ಟ ನಿರ್ದೇಶನ ಪಕ್ಷದ ವರಿಷ್ಠ ಮಂಡಳಿಯಿಂದ ರಾಜ್ಯ ನಾಯಕರಿಗೆ ಬಂದಿದೆ ಎಂದು ಹೇಳಲಾಗಿದೆ. ಈ ಕಾರಣಕ್ಕಾಗಿಯೇ ಅನ್ಯ ಪಕ್ಷಗಳ ಮುಖಂಡರು ಬಿಜೆಪಿ ಸೇರಲು ಬಯಸಿ ಪಕ್ಷದ ಪ್ರಮುಖರನ್ನು ಸಂಪರ್ಕಿಸಿದರೆ ಅಂಥವರನ್ನು ನೇರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರ ಬಳಿ ಕಳುಹಿಸಿಕೊಡಬೇಕು. ಯಡಿಯೂರಪ್ಪ ಅವರು ಪಕ್ಷದ ವರಿಷ್ಠ ಮಂಡಳಿಯೊಂದಿಗೆ ಚರ್ಚಿಸಿ ಬೇರೆ ಯವರನ್ನು ಪಕ್ಷ ಸೇರಿಸಿಕೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಬಿಜೆಪಿ ಮುಖಂಡರಿಗೆ ವರಿಷ್ಠರಿಂದ ಸೂಚನೆ ಬಂದಿದೆ.

ಮಾಸಾಂತ್ಯಕ್ಕೆ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ
ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಕುರಿತಂತೆ ಎರಡು ಸಮೀಕ್ಷೆಗಳನ್ನು ಮಾಡಲಾಗಿದ್ದು, ಇದರ ಜತೆಗೆ ಆರ್‌ಎಸ್‌ಎಸ್‌ ಮುಖಂಡರಿಂದಲೂ ಒಂದು ಪಟ್ಟಿಯನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಅವರ ತಂಡ ಪಡೆದುಕೊಂಡಿದೆ. ಈ ಪಟ್ಟಿಗಳನ್ನು ಪರಿಶೀಲಿಸಿ ಗೆಲ್ಲಬಹುದು ಎನ್ನಲಾದ 120 ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗುವುದು. ಮಾ. 10ರ ಬಳಿಕ ಅಮಿತ್‌ ಶಾ ಅವರು ರಾಜ್ಯದಲ್ಲಿ ಹೆಚ್ಚು ದಿನ ಕಳೆಯಲಿದ್ದಾರೆ. ಇವರೊಂದಿಗೆ ಅವರ ಚುನಾವಣಾ ತಂಡದ ಸದಸ್ಯರೂ ರಾಜ್ಯಕ್ಕೆ ಬರಲಿದ್ದಾರೆ. ಈ ಸಂದರ್ಭದಲ್ಲಿ ಅಭ್ಯರ್ಥಿಗಳ ಆಯ್ಕೆಯ ಸಮೀಕ್ಷಾ ವರದಿ ಕುರಿತು ಚರ್ಚಿಸಲಾಗುವುದು. 

ಗೆಲ್ಲಲಾಗದ ಕ್ಷೇತ್ರಗಳಲ್ಲಿ ಆಪರೇಷನ್‌ ಕಮಲ 
ಮೊದಲ ಪಟ್ಟಿ ಸಿದ್ಧಗೊಳ್ಳುವ ವೇಳೆಗೆ ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳು ಇಲ್ಲ ಎಂಬುದು ಸ್ಪಷ್ಟವಾಗುತ್ತದೆ. ಅಂತಹ ಕ್ಷೇತ್ರ ಗಳಲ್ಲಿ ಉಳಿದ ಪಕ್ಷಗಳಲ್ಲಿರುವ ಪ್ರಮುಖರು ಗೆಲ್ಲಬಹುದು ಎಂದಾದರೆ ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು ಮತ್ತು ಆ ವೇಳೆ ಪಕ್ಷದ ಸ್ಥಳೀಯ ಪ್ರಮುಖರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಪಕ್ಷದಲ್ಲಿ ಚರ್ಚೆಗಳು ನಡೆದಿವೆ.

ಟಾಪ್ ನ್ಯೂಸ್

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

ಜರ್ಮನಿ ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್‌ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

German ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್‌ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

Sushil Modi cremated with state honours

Patna; ಸರ್ಕಾರಿ ಗೌರವದೊಂದಿಗೆ ಸುಶೀಲ್‌ ಮೋದಿ ಅಂತ್ಯ ಸಂಸ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

CM Siddaramaiah: ಸಿಎಂ,ಡಿಸಿಎಂ ಕಾವೇರಿ ನಿವಾಸದಲ್ಲಿ ಮಹತ್ವದ ​ಸಭೆ

ಜರ್ಮನಿ ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್‌ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

German ಅಧಿಕಾರಿಗಳ ಜತೆ ಸಂಪರ್ಕ; ಪ್ರಜ್ವಲ್‌ ಪತ್ತೆ ಮಾಹಿತಿ ಕಲೆ ಹಾಕುತ್ತಿರುವ ಅಧಿಕಾರಿಗಳು

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

8 ಹೊಸ ಡಿಪ್ಲೋಮಾ ಕೋರ್ಸ್‌ಗೆ ಎಂಜಿನಿಯರಿಂಗ್‌ ಪ್ರವೇಶ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

K. S. Eshwarappa ನಾನು ಸಾಯುವವರೆಗೂ ಬಿಜೆಪಿಗ; ಉಚ್ಚಾಟನೆ ಲೆಕ್ಕಕ್ಕೇ ಇಲ್ಲ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Bantwal ಲಾರಿ ಹರಿದು ಬೈಕ್‌ ಸವಾರ ಸಾವು; ಸಹಸವಾರ ಗಂಭೀರ

Lawsuit to stop auction of Maradona’s golden ball

Diego Maradona ಚಿನ್ನದ ಚೆಂಡಿನ ಹರಾಜು ತಡೆಯಲು ದಾವೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Padubidri ನೀರು ಪಾಲಾಗಿದ್ದ ಅಭಿಲಾಷ್‌ ಮೃತದೇಹ ಪತ್ತೆ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

Belthangady ಗೇರುಕಟ್ಟೆ ಸಮೀಪ ರಸ್ತೆ ಬದಿ ದಿಬ್ಬಕ್ಕೆ ಕಾರು ಢಿಕ್ಕಿ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

CM Siddaramaiah ಚುನಾವಣೆ ಅನಂತರ ಬಿಜೆಪಿಯ ಭಿನ್ನಮತದ ಮಹಾಸ್ಫೋಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.