CONNECT WITH US  

ಇಂದಿನಿಂದಲೇ ಪೆಟ್ರೋಲ್‌,ಡೀಸೆಲ್‌ ದುಬಾರಿ

ಬೆಂಗಳೂರು: ಇತ್ತೀಚೆಗಷ್ಟೇ ಮಂಡನೆಯಾದ ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ ಮೇಲೆ ತಲಾ ಶೇ.2ರಷ್ಟು ತೆರಿಗೆ ಹೆಚ್ಚಳ ಮಾಡಲಾಗಿದ್ದು, ಅದರಂತೆ ಪರಿಷ್ಕೃತ ತೆರಿಗೆಯನ್ನು ಶನಿವಾರದಿಂದಲೇ ಜಾರಿಗೊಳಿಸಿ ಸರ್ಕಾರ ಅಧಿಸೂಚನೆ ಹೊರಡಿಸಿದೆ. 

ಈ ಹಿಂದೆ ರಾಜ್ಯ ಸರ್ಕಾರ ಪ್ರತಿ ಲೀಟರ್‌ ಪೆಟ್ರೋಲ್‌ ಮಾರಾಟ ದರದ ಮೇಲೆ ವಿಧಿಸಿದ್ದ ತೆರಿಗೆಯನ್ನು ಶೇ.30ರಿಂದ ಶೇ.32ಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಪ್ರತಿ ಲೀಟರ್‌ ಡೀಸೆಲ್‌ ಮಾರಾಟ ದರದ ಮೇಲೆ ವಿಧಿಸಲಾಗಿದ್ದ ತೆರಿಗೆಯನ್ನು ಶೇ.19ರಿಂದ ಶೇ.21ಕ್ಕೆ ಏರಿಕೆ ಮಾಡಿ ಹಣಕಾಸು ಇಲಾಖೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. 

ರಾಜ್ಯದಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ಕ್ರಮವಾಗಿ 1.14 ರೂ. ಹಾಗೂ 1.12 ರೂ. ಹೆಚ್ಚಳವಾಗಲಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಶುಕ್ರವಾರ 78.05 ಇದ್ದುದು,ತೆರಿಗೆ ಏರಿಕೆ ಬಳಿಕ ಶನಿವಾರದಿಂದ 79.41 ರೂ.ಗೆ ಏರಿಕೆಯಾಗಲಿದೆ. ಡೀಸೆಲ್‌ 69.46 ರೂ. ಇದ್ದುದು ತೆರಿಗೆ ಹೆಚ್ಚಳದ ಬಳಿಕ 70.78 ರೂ.ಗೆ ಏರಿಕೆಯಾಗಲಿದೆ ಎಂದು ಪೆಟ್ರೋಲ್‌ ಡೀಲರ್‌ಗಳು ತಿಳಿಸಿದ್ದಾರೆ.


Trending videos

Back to Top