ನೀವು ಬರೆಯುತ್ತೀರಿ.. ನಿಮ್ಮಿಂದ ಸಾಧ್ಯವಿದೆ…


Team Udayavani, Jul 16, 2018, 6:20 AM IST

aaaff.gif

ವ್ಯಾಸರಾವ್‌ಗೆ ಧೈರ್ಯ ತುಂಬಿದ್ದ ಪುಟ್ಟಣ್ಣ ಕಣಗಾಲ್‌, ಶುಭಮಂಗಳ ಚಿತ್ರದ ಮೂಲಕ ಸಿನಿಮಾ ಪ್ರ
ವೇಶಿಸಿದ ಕವಿ

ಎಂ.ಎನ್‌.ವ್ಯಾಸರಾವ್‌ ಅವರು ಚಿತ್ರರಂಗಕ್ಕೆ ಬರಲು ಕಾರಣ ನಿರ್ದೇಶಕ ಪುಟ್ಟಣ್ಣ ಕಣಗಾಲ್‌. “ನಾಗರಹಾವು’ ಯಶಸ್ಸಿನ ನಂತರ ಪುಟ್ಟಣ್ಣ ಕಣಗಾಲ್‌ “ಶುಭಮಂಗಳ’ ಚಿತ್ರಕ್ಕೆ ಅಣಿಯಾಗುತ್ತಿದ್ದರು. ಚಿತ್ರದ ಹಾಡೊಂದನ್ನು ಲೆಕ್ಕ ಗೊತ್ತಿರುವವರ ಬಳಿಯೇ ಬರೆಸಬೇಕು ಎಂಬುದು ಪುಟ್ಟಣ್ಣ ಅವರ ನಿರ್ಧಾರವಾಗಿತ್ತು. ಆ ಚಿತ್ರದ ನಿರ್ಮಾಪಕ ಕೆಎಸ್‌ಎಲ್‌ ಸ್ವಾಮಿ(ರವೀ) ಅವರು ಒಂದು ದಿನ ಎಂ.ಎನ್‌.ವ್ಯಾಸರಾವ್‌ ಅವರ ಮನೆಗೆ ಹೋಗಿ, “ಸಾರ್‌ ನಿಮ್ಮನ್ನು ಕರ್ಕೊಂಡು ಬರಲು ಪುಟ್ಟಣ್ಣ ಹೇಳಿದ್ದಾರೆ ಬನ್ನಿ’ ಎಂದು ಹೇಳಿ, ಪುಟ್ಟಣ್ಣ ಅವರ ಬಳಿಗೆ ಕರೆ ತಂದರು.

ಆದರೆ, ಕವಿ ಕಂ ಬ್ಯಾಂಕ್‌ ಅಧಿಕಾರಿಯಾಗಿದ್ದ ಎಂ.ಎನ್‌. ವ್ಯಾಸರಾವ್‌ಗೆ ಪುಟ್ಟಣ್ಣರ ಪರಿಚಯವೇ ಇರಲಿಲ್ಲ. ಅಪರಿಚಿತರು ಮತ್ತು ಹೆಸರಾಂತ ಚಿತ್ರ ನಿರ್ದೇಶಕರೂ ಆಗಿದ್ದ ಅವರೊಂದಿಗೆ ಮಾತನಾಡುವುದು ಹೇಗೆ ಎಂಬ ಹಿಂಜರಿಕೆ ವ್ಯಾಸರಾವ್‌ ಅವರಿಗಿತ್ತು. ಹೀಗಿದ್ದಾಗಲೇ ಸಡಗರದಿಂದ ಬಳಿ ಬಂದು ಕೈ ಕುಲುಕಿದ ಪುಟ್ಟಣ್ಣ , “ಕವಿಗಳೆ, ನಿಮ್ಮನ್ನು ನಾನು ಇಲ್ಲಿಗೆ ಯಾಕೆ ಕರೆಸಿದ್ದೀನಿ ಗೊತ್ತಾ? ನಾನು ಇದುವರೆಗೂ ಪ್ರತಿ ಸಿನಿಮಾದಲ್ಲೂ ನಾಯಕ-ನಾಯಕಿ, ಪೋಷಕ ನಟರು/ ಖಳನಟರನ್ನು ಪರಿಚಯಿಸುತ್ತಿದ್ದೆ. ಈಗ ನನ್ನ ಮುಂದಿನ ಚಿತ್ರ “ಶುಭಮಂಗಳ’ ಮೂಲಕ ನಿಮ್ಮನ್ನು ಗೀತ ರಚನೆಕಾರರನ್ನಾಗಿ ಚಿತ್ರರಂಗಕ್ಕೆ ಪರಿಚಯಿಸಬೇಕು ಅಂದುಕೊಂಡಿದ್ದೇನೆ. ಹಾಗಾಗಿ ನೀವೀಗ ನನ್ನ ಚಿತ್ರಕ್ಕೆ ಹಾಡು ಬರೆಯಬೇಕು’ ಎಂದು ನೇರವಾಗಿ ಹೇಳಿದರು.

ಅದುವರೆಗೆ ತಮಗೆ ತೋಚಿದ ಕವನ ಬರೆಯುತ್ತಿದ್ದ ವ್ಯಾಸರಾವ್‌, ಚಿತ್ರಗಳಿಗೆ ಹಾಡು ಬರೆದವರಲ್ಲ. ಸಿನಿಮಾಕ್ಕೆ ಬೇಕಾದಂತೆ ಹಾಡು ಬರೆಯುವುದು ಹೇಗೆ ಎಂಬುದೂ ಗೊತ್ತಿರಲಿಲ್ಲ. ಹಾಡಿನ ಟ್ಯೂನ್‌ ಕೇಳಿಸಿಕೊಂಡು, ಅದಕ್ಕೆ ಹೊಂದುವಂತೆ ಗೀತೆ ಬರೆಯುವ ಕೆಲಸ ಹೊಸದು. 

ಹೀಗಾಗಿ, “ನಾನು ಚಿತ್ರಕ್ಕೆ ಹಾಡು ಬರೆದಿಲ್ಲ’ ಎಂದು ವ್ಯಾಸರಾವ್‌ ಹೇಳಿದಾಗ, “ನೀವು ಬರೆಯುತ್ತೀರಿ. ನಿಮ್ಮಿಂದ ಸಾಧ್ಯವಿದೆ’ಎಂದು ಹೇಳಿದ ಪುಟ್ಟಣ್ಣ ಅವರು ಚಿತ್ರದ ಸನ್ನಿವೇಶ ವಿವರಿಸಿದರಲ್ಲದೆ, ನೀವು ಕವಿ ಮತ್ತು ಬ್ಯಾಂಕ್‌ ಅಧಿಕಾರಿ. ದಿನವೂ ಲೆಕ್ಕಗಳ ಮಧ್ಯೆಯೇ ಕಳೆದು ಹೋಗುತ್ತೀರಿ. ಲೆಕ್ಕವನ್ನು ಹೇಗೆ ಬರೆಯಬೇಕು ಎಂದು ನಿಮಗೆ ಗೊತ್ತಿರುತ್ತದೆ. ಹಾಗಾಗಿ, ಈ ಸನ್ನಿವೇಶಕ್ಕೆ ಹೊಂದಿಕೆಯಾಗುವ ಹಾಡೊಂದನ್ನು ಬರೆದುಕೊಡಿ ಎಂದು ಹೇಳಿದ್ದರು.

ಬೇರೆ ದಾರಿ ಇಲ್ಲ ಎಂದುಕೊಂಡ ವ್ಯಾಸರಾವ್‌ ಹಾಡು ಬರೆಯಲು ಒಪ್ಪಿದರು. ಆದರೆ. ವಾರವಾದರೂ ಬರೆಯಲು ಸಾಧ್ಯವಾಗಲಿಲ್ಲ. ಆ ವೇಳೆ ವ್ಯಾಸರಾವ್‌ ಮನೆಗೆ ಬಂದ ನಿರ್ಮಾಪಕ ರವೀ ಅವರು, ನೀವು, ನಾನು, ಪುಟ್ಟಣ್ಣ ಹಾಗೂ ಸಂಗೀತ ನಿರ್ದೇಶಕ ವಿಜಯಭಾಸ್ಕರ… ಒಟ್ಟಿಗೆ ಚಿತ್ರದುರ್ಗಕ್ಕೆ ಹೋಗಿ ಬರೋಣ. ಅಲ್ಲಿ ನಿಮಗೆ ಟ್ಯೂನ್‌ ಕೇಳಿಸುತ್ತೇವೆ ಎಂದು ಕರೆದುಕೊಂಡು ಹೋಗಿದ್ದರು. ಹಿರಿಯೂರು ಬಳಿ ಎಳನೀರು ಕುಡಿಯಲು ಕಾರು ನಿಲ್ಲಿಸಿದ್ದರು. ಎಳನೀರು ಮಾರಾಟಗಾರನಲ್ಲಿ ಸಹಜವಾಗಿಯೇ “ಎಳನೀರಿಗೆ ಎಷ್ಟಪ್ಪಾ’ ಎಂದು ಪುಟ್ಟಣ್ಣ ಲೆಕ್ಕ ಕೇಳಿ¨ªಾರೆ. ಆದಕ್ಕೆ ಆತ ಮೊತ್ತವನ್ನೂ ಹೇಳಿದ್ದ. ಆಗ ಏನೋ ಹೊಳೆದಂತಾದ ವ್ಯಾಸರಾವ್‌,”ಅಲ್ಲ ಸಾರ್‌, ಎಷ್ಟೋ ವರ್ಷದಿಂದ ಆಕಾಶ ಮಳೆ ಸುರಿಸುತ್ತಿದೆ. ಆದರೆ, ಹಾಗೆ ಸುರಿದ ಮಳೆ ನೀರಿನ ಪ್ರಮಾಣ ಎಷ್ಟು ಅಂತ ಈ ಭೂಮಿ ಲೆಕ್ಕ ಇಟ್ಟಿದೆಯಾ? ಇಲ್ಲ ಅಲ್ವಾ? ನಾವು ಈ ಚಿಕ್ಕಪುಟ್ಟ ಲೆಕ್ಕ ಕೇಳುತ್ತೇವಲ್ಲಾ ಎಂದು ಪುಟ್ಟಣ್ಣ ಅವರನ್ನು ಪ್ರಶ್ನಿಸಿದಾಗ, ಇದೇ.. ಇದೇ.. ನನಗೆ ಬೇಕಿದ್ದುದು.

ಕವಿಗಳಿಂದ ಹಾಡು ಬರೆಸಬೇಕು ಎನ್ನುವುದೂ ಇದಕ್ಕೆ. ಬಹಳ ಚೆನ್ನಾಗಿ ಹೇಳಿದ್ರಿ. ಈಗ ಹಾಡು ಬರೆಯಲು ಶುರುಮಾಡಿ ಅಂದರಂತೆ. ಇದರಿಂದ ಖುಷಿಗೊಂಡ ವ್ಯಾಸರಾವ್‌, ಅಂದು ರಾತ್ರಿ ಒಂದೊಂದೇ ಪದಗಳೊಂದಿಗೆ ಆಟವಾಡಿ “ನಾಕೊಂದ್ಲ ನಾಕು, ನಾಕೆರಡ್ಲ ಎಂಟು’ ಎಂದು ಶುರುಮಾಡಿ, ಕೂಡುವುದು,ಕಳೆಯುವುದು, ಗುಣಿಸುವುದನ್ನೆಲ್ಲ ಅವರು ಹಾಡು ಸಿದಟಛಿಪಡಿಸಿಯೇ ಬಿಟ್ಟರು. ಆ ಹಾಡೂ ಸೂಪರ್‌ ಹಿಟ್‌ ಆಯಿತು.

ಆ ನಂತರ ವ್ಯಾಸರಾವ್‌ ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಹಾಡು ಬರೆಯುವ ಮೂಲಕ ಬೇಡಿಕೆಯ ಗೀತರಚನೆಕಾರರಾದರು.

ಪ್ರಸಿದ್ಧ ಗೀತೆಗಳು
ನೀನಿಲ್ಲದೇ (ಭಾವಗೀತೆ), ನಿನ್ನ ಕಂಗಳ ಕೊಳದಿ (ಭಾವಗೀತೆ), ಹೋಗು ಮನಸೇ (ಭಾವಗೀತೆ)
ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು (ಶುಭಮಂಗಳ), ನಾಕೊಂದ್ಲಾ ನಾಕು (ಶುಭಮಂಗಳ), ಅಡವಿ ದೇವಿಯ ಕಾಡು ಜನಗಳ (ರಾಯರು ಬಂದರು ಮಾವನ ಮನೆಗೆ), ಬಾರೇ ಬಾರೇ ದೇವಿಯೇ (ರಾಯರು ಬಂದರು ಮಾವನ ಮನೆಗೆ), ಯುಗ ಯುಗಗಳೆ ಸಾಗಲಿ
(ಹೃದಯಗೀತೆ), ಮಧುರ ಈ ಕ್ಷಣ(ಒಡಹುಟ್ಟಿದವರು), ಆ ಸೂರ್ಯ ಚಂದ್ರ (ಮಿಡಿದ ಶ್ರುತಿ), ಯಾವುದು ಪ್ರೀತಿ (ಮಿಡಿದ ಶ್ರುತಿ), ಪ್ರೇಮದಲ್ಲಿ ಸ್ನೇಹದಲ್ಲಿ (ರಂಗನಾಯಕಿ), ನೀ ನನ್ನ ಕಾವ್ಯ ಕನ್ನಿಕೆ (ಮಾಗಿಯ ಕನಸು).

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.