CONNECT WITH US  

ಮನೆ ದೇವರಿಗೆ ಇಂದು ಸಿಎಂ ಪೂಜೆ 

ಹೊಳೆನರಸೀಪುರ: ಎಚ್‌.ಡಿ.ಕುಮಾರಸ್ವಾಮಿ ಮುಖ್ಯ ಮಂತ್ರಿಯಾದ ಬಳಿಕ ಮೊದಲ ಬಾರಿಗೆ ಸ್ವಗ್ರಾಮ
ಹರದನಹಳ್ಳಿಗೆ ಸೋಮವಾರ ಆಗಮಿಸಲಿದ್ದಾರೆ. ಗ್ರಾಮದ ಕುಲದೇವರು ಈಶ್ವರನಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ಮೊದಲ ಶ್ರಾವಣ ಸೋಮವಾರದ ಹಿನ್ನೆಲೆಯಲ್ಲಿ ಪತ್ನಿ ಅನಿತಾ, ಪುತ್ರ ನಿಖೀಲ್‌ ಜೊತೆ ಬೆಳಗ್ಗೆ 5 ಗಂಟೆಗೆ
ಬೆಂಗಳೂರಿನಿಂದ ಹೊರಟು ರಸ್ತೆ ಮೂಲಕ ನೇರ ಹರದನಹಳ್ಳಿಗೆ ಬೆಳಗ್ಗೆ 7ಗಂಟೆಗೆ ಆಗಮಿಸಿ ದೇವರ ದರ್ಶನ ಪಡೆಯಲಿದ್ದಾರೆ. ಇದು ಖಾಸಗಿ ಕಾರ್ಯಕ್ರಮವಾಗಿದೆ. ಸಮಯವಿದ್ದರೆ ತಾಲೂಕಿನ ಮಾವಿನಕೆರೆ ಬೆಟ್ಟದ ರಂಗನಾಥ ಹಾಗೂ ಪಟ್ಟಣದ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ. ಕುಮಾರಸ್ವಾಮಿ ಕುಟುಂಬದ ಜೊತೆ ಸೋದರ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಹಾಗೂ ಜಿಲ್ಲೆಯ ಜೆಡಿಎಸ್‌ ಶಾಸಕರು ಭಾಗವಹಿಸುವ ಸಾಧ್ಯತೆ ಇದೆ.


Trending videos

Back to Top