CONNECT WITH US  

ಸಾಲಬಾಧೆ: ಇಬ್ಬರು ರೈತರ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ.

ಕಡೂರು/ಯಲಬುರ್ಗಾ: ಪ್ರತ್ಯೇಕ ಪ್ರಕರಣದಲ್ಲಿ ಸಾಲಬಾಧೆಯಿಂದ ಬೇಸತ್ತು ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಬ್ಯಾಲದಾಳು ತಾಂಡ್ಯದಲ್ಲಿ ಗೋವಿಂದಸ್ವಾಮಿ (70) ಎಂಬ ರೈತ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಇವರಿಗೆ ನಾಲ್ಕು ಎಕರೆ ಜಮೀನಿದ್ದು, ಕೃಷಿ ಕಾರ್ಯಕ್ಕಾಗಿ ಡಿಸಿಸಿ ಬ್ಯಾಂಕಿನಲ್ಲಿ 1.60 ಲಕ್ಷ ರೂ. ಸಾಲ ಮಾಡಿದ್ದರು. ಅಲ್ಲದೆ 6 ತಿಂಗಳ ಹಿಂದೆ ಬೋರ್‌ ವೆಲ್‌ ಕೊರೆಸಲು ಪುನಃ ಒಂದೂವರೆ ಲಕ್ಷ ರೂ.
ಸಾಲ ಮಾಡಿದ್ದು ಒಟ್ಟು 3.10 ಲಕ್ಷ ರೂ. ಸಾಲ ಮಾಡಿದ್ದರು ಎನ್ನಲಾಗಿದೆ.

ಇನ್ನು, ಯಲಬುರ್ಗಾ ತಾಲೂಕಿನ ಕುದ್ರಿಕೋಟಗಿ ಗ್ರಾಮದಲ್ಲಿ ರೈತ ನರಸಪ್ಪ ಹನುಮಪ್ಪ ಹೂಸೂರ(50) ವಿಷ ಸೇವಿಸಿ
ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಯಲಬುರ್ಗಾ ಪಟ್ಟಣದ ಪ್ರಗತಿ ಗ್ರಾಮೀಣ ಬ್ಯಾಂಕ್‌ನಲ್ಲಿ ಹಲವು ವರ್ಷಗಳ ಹಿಂದೆ 50 ಸಾವಿರ ರೂ. ಬೆಳೆಸಾಲ ಪಡೆದಿದ್ದು, ಇದೀಗ ಅದು ಬಡ್ಡಿ ಸೇರಿ 90 ಸಾವಿರ ರೂ. ಆಗಿದೆ. ಅಷ್ಟೇ ಅಲ್ಲದೇ ಹೊಲದಲ್ಲಿ ಬಿತ್ತನೆ ಮಾಡಿದ್ದ ಬೆಳೆಗಳು ಒಣಗಿ ಹೋಗಿರುವುದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.


Trending videos

Back to Top