ಉತ್ಸವಕ್ಕೆ ಯಾರ ಅಂಕುಶವೂ ತಟ್ಟದಿರಲಿ


Team Udayavani, Jan 23, 2019, 11:04 AM IST

23-january-21.jpg

ಶಿರಸಿ: ಕರ್ನಾಟಕ ಸರಕಾರದ ಅಧಿಕೃತ ಉತ್ಸವಗಳಲ್ಲಿ ಹಂಪಿ, ಮೈಸೂರು ದಸರಾ ಹಾಗೂ ಬನವಾಸಿ ಕದಂಬೋತ್ಸವಗಳು ಅಗ್ರ ಪಂಕ್ತಿಯಲಿ ಸೇರುತ್ತವೆ. ಆದಿ ಕವಿ ಹಾಡಿ ಹೊಗಳಿದ ನಾಡು ಕನ್ನಡದ ಪ್ರಥಮ ರಾಜಧಾನಿ ಕೂಡ ಹೌದು.

ಐತಿಹಾಸಿಕ, ಸಾಹಿತ್ಯಿಕ, ಸಾಂಸ್ಕೃತಿಕ ಮಹತ್ವವೂ ಇರುವ ಬನವಾಸಿಯಲ್ಲಿ ಕದಂಬರ ನೆನಪಿನ ಕದಂಬೋತ್ಸವ ಆಚರಣೆ ಪ್ರತೀವರ್ಷ ಗೆಜೆಟ್ ನೋಟಿಫಿಕೇಶನ್‌ ಅಡಿಯಲ್ಲೇ ಸರಕಾರವೇ ಖುದ್ದಾಗಿ ಆಚರಿಸಬೇಕು. ಇದು ನಾಡಿನ ಹೆಮ್ಮೆಯ ಉತ್ಸವವೂ ಹೌದು.

ವಸಂತೋತ್ಸವದ ನೆನಪು:ಕದಂಬೋತ್ಸವ 1996ರಿಂದ ಆರಂಭಗೊಂಡಿದೆ. ಮೊದಲು ಬನವಾಸಿಗರೇ ಸೇರಿ ಆಚರಿಸಿದ ಕದಂಬೋತ್ಸವ ನಂತರದ ವರ್ಷದಲ್ಲಿ ಸರಕಾರ ಅಧಿಕೃತ ಉತ್ಸವವನ್ನಾಗಿ ಆಚರಿಸಿತು.

ಹಿಂದೆ ಕದಂಬರು ವಸಂತೋತ್ಸವದ ಹೆಸರಿನಲ್ಲಿ ಬನವಾಸಿಯಲ್ಲಿ ಸಾಂಸ್ಕೃತಿಕ ಸಂಭ್ರಮ ನಡೆಸುತ್ತಿದ್ದರು. ಅದೇ ಮಾದರಿಯಲ್ಲಿ ಪ್ರಜಾಪ್ರಭುತ್ವದಲ್ಲಿ ಸರಕಾರವೇ ಉತ್ಸವವನ್ನಾಗಿ ಆಚರಿಸಲು ತೀರ್ಮಾನಿಸಿತ್ತು. ಕೋಟಿ ರೂ. ತನಕ ಸರಕಾರವೇ ಅನುದಾನ ಬಿಡುಗಡೆ ಮಾಡಿ, ಸಾಂಸ್ಕೃತಿಕ, ಸಾಹಿತ್ಯಿಕ ಮೆರಗಿನ ಜೊತೆ ಈ ಭಾಗದ ಸಮಗ್ರ ಅಭಿವೃದ್ಧಿಗೂ ಯೋಜಿಸಿತ್ತು. ಆದರೆ, ವಸಂತೋತ್ಸವ ಕಂಡವರಿಲ್ಲ. ಅದರ ನೆನಪು ಆಗುವ ಮೊದಲೇ ಈ ಉತ್ಸವದ ಧೂಳು ಅಡಗುತ್ತದೆ.

ನಿರ್ಲಕ್ಷ್ಯ ಯಾಕೆ?: ಕದಂಬೋತ್ಸವವನ್ನು ಸಂಪೂರ್ಣವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನಡೆಸಬೇಕು. ಅದರ ಸಂಪೂರ್ಣ ಹೊಣೆ ಇಲಾಖೆಯದ್ದೇ. ಆದರೆ, ಕಳೆದ ಆರೇಳು ವರ್ಷಗಳಿಂದ ಕದಂಬೋತ್ಸವ ಜಿಲ್ಲಾ ಮಟ್ಟದ ಉತ್ಸವವಾಗುತ್ತಿದೆಯಾ? ಇದಕ್ಕೆ ಇರಬೇಕಾದ ವ್ಯಾಪಕ ಪ್ರಚಾರ, ಅನುದಾನ ಎಲ್ಲವಕ್ಕೂ ನಿರ್ಲಕ್ಷ್ಯದ ಕೊರತೆ ಆಗುತ್ತಿದೆಯಾ ಎಂಬ ಪ್ರಶ್ನೆ ಎದ್ದಿದೆ.

2008, 09ರ ತನಕವೂ ಕದಂಬೋತ್ಸವವನ್ನು ಇಲಾಖೆಯ ಬೆಂಗಳೂರಿನ ಕೇಂದ್ರ ಕಚೇರಿಯಿಂದಲೇ ನಡೆಸಲಾಗುತ್ತಿತ್ತು. ಸ್ಥಳೀಯ ಪ್ರತಿಭೆಗಳಿಗೆ, ಜನರಿಗೂ ಪಾಲ್ಗೊಳ್ಳುವ ಅವಕಾಶ ಬೇಕು ಎಂಬ ಕಾರಣಕ್ಕೆ ಸ್ಥಳೀಯರ ಸಮಿತಿಗಳನ್ನೂ ರಚಿಸಲಾಯಿತು. ಬೆಂಗಳೂರಿನ ಹಿರಿಯ ಅಧಿಕಾರಿಗಳು ಎರಡೂ ದಿನ ಉತ್ಸವದಲ್ಲಿ ಪಾಲ್ಗೊಳ್ಳದೇ ವಾಪಸ್ಸಾಗಿದ್ದೂ ನಡೆಯಿತು. ಕೊನೆ ಕೊನೆಗೆ ಜಿಲ್ಲಾಡಳಿತಕ್ಕೇ ಸ್ವಲ್ಪ ಹಣ ನೀಡಿ ಕೈತೊಳೆದುಕೊಳ್ಳುವ ತೀರ್ಮಾನಕ್ಕೂ ಬರಲಾಯಿತು.

ಅರೆಕಾಸಿನ ಮಜ್ಜಿಗೆ?: ಕದಂಬೋತ್ಸವದ ಸಿದ್ಧತೆ, ಪ್ರಚಾರ, ಮೈಕು, ಲೈಟು, ವಿವಿಧ ಸ್ಪರ್ಧಾ ಬಹುಮಾನಗಳು ಸೇರಿದಂತೆ 75ರಿಂದ 80 ಲಕ್ಷ ರೂ.ಗಳಷ್ಟು ವಾರ್ಷಿಕ ವೆಚ್ಚವೇ ಇರುತ್ತದೆ. ಕಳೆದ ಐದಾರು ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ನೆರವನ್ನೂ ಪಡೆದು ಉತ್ಸವ ನಡೆಸಲಾಗುತ್ತಿದೆ. ಕೆಲವು ಸಲ ಜಿಲ್ಲಾಡಳಿತ ಖರ್ಚು ವೆಚ್ಚ ತೂಗಿಸಲು ಸ್ಮರಣ ಸಂಚಿಕೆ ಪ್ರಕಟಿಸಿದ್ದೂ ಇದೆ. ಈ ಬಾರಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆ ವೈಶಿಷ್ಟಪೂರ್ಣವಾಗಿ ಆಚರಿಸಲೂ ಯೋಜಿಸ ಲಾಗುತ್ತಿದೆ. ಸಾಂಸ್ಕೃತಿಕ ಔತಣದ ಜೊತೆ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣಗಳ ಮೂಲಕವಾದರೂ ಪಂಪನನ್ನು ನೆನಪಿಸುವ ಕಾರ್ಯವೂ ಆಗಬೇಕು ಎಂಬ ಹಕ್ಕೊತ್ತಾಯ ಕೂಡ ಇದೆ.

ಈ ಬಾರಿ ಈಗಾಗಲೇ ಪ್ರವಾಸೋದ್ಯಮ ಇಲಾಖೆ 40 ಲಕ್ಷ ರೂ ಬಿಡುಗಡೆ ಮಾಡಿದೆ. ಮಾತೃ ಸಂಸ್ಥೆಯಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಾತ್ರ ಕೇವಲ 18 ಲಕ್ಷ ರೂ. ಅನುದಾನ ನೀಡಿದೆ. ತಾನೇ ಸ್ವತಃ ಮುಂದೆ ನಿಂತು ಮಾಡಬೇಕಾದ ಸಂಸ್ಕೃತಿ ಇಲಾಖೆ 18.85 ಲಕ್ಷ ರೂ ನೀಡಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅನುದಾನ ಹೆಚ್ಚಳಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇವೆ. ಅನುದಾನ ಹೆಚ್ಚಳದ ನಿರೀಕ್ಷೆಯಿದೆ.
•ಎಸ್‌.ಎಸ್‌. ನಕುಲ್‌,
ಜಿಲ್ಲಾಧಿಕಾರಿ

ಪಂಪ ಪ್ರಶಸ್ತಿ ಪ್ರದಾನ, ಕದಂಬೋತ್ಸವ ಎರಡೂ ಐತಿಹಾಸಿಕ ಮಹತ್ವದ್ದೇ. ಅನುದಾನ ಹೆಚ್ಚಳಕ್ಕೆ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡುತ್ತಿದ್ದೇವೆ.
 •ಶಿವರಾಮ ಹೆಬ್ಟಾರ, ಶಾಸಕ

ರಾಘವೇಂದ್ರ ಬೆಟ್ಟಕೊಪ್ಪ

ಟಾಪ್ ನ್ಯೂಸ್

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Revanna 2

H.D. Revanna ಬಂಧನ; ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ

1-rwrrer

BJP; ತೇಜಸ್ವಿ ಸೂರ್ಯ ನವರಾತ್ರಿಯ ಮುನ್ನಾದಿನ ಮೀನು ತಿನ್ನುತ್ತಾರೆ!: ಕಂಗನಾ ಭಾಷಣ ವೈರಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭಾರತ್‌ ಜೋಡೋದಿಂದ ದೇಶದ ಜನರ ಮನಸ್ಸು ಬೆಸೆದ ರಾಗಾ: ಡಿಕೆಶಿ

1–dsdsadd

Honnavar; ಖಾಸಗಿ ಬಸ್‌ ಪಲ್ಟಿ: 2 ಸಾವು, 45ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ

accident

Yellapur: ಟಿಪ್ಪರ್ ಗೆ ಢಿಕ್ಕಿಯಾಗಿ ಬೈಕ್ ಸಹಸವಾರೆ ಬಾಲಕಿ ಮೃತ್ಯು

1-wwqewqe

Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

ರೈತರಿಗೆ ತಂತ್ರಜ್ಞಾನದ ಕೊಡುಗೆ ಕೊಟ್ಟರೆ ಪ್ರಗತಿ ಸಾಧ್ಯ: ಹಂದೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

H.D. Revanna ಬಂಧನ: ಆಪ್ತರೊಂದಿಗೆ ಎಚ್‌ಡಿಕೆ ರಹಸ್ಯ ಮಾತುಕತೆ

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

Karnataka MLA ಎಚ್‌.ಡಿ.ರೇವಣ್ಣ ಬಂಧನ: ಸ್ಪೀಕರ್‌ಗಿಲ್ಲ ಇನ್ನೂ ಮಾಹಿತಿ

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

Prajwal Revanna ನನಗೆ ಆತ್ಮೀಯ ಸ್ನೇಹಿತ: ಸಂಸದ ಬಸವರಾಜು

21-wqewewqe

IPL; ಗುಜರಾತ್ ವಿರುದ್ಧ ಭರ್ಜರಿ ಜಯ: ಆರ್ ಸಿಬಿ ಪ್ಲೇ ಆಫ್ ಕನಸು ಜೀವಂತ

Dingaleshwara (2)

Prahlad Joshi ವಿರುದ್ದ ರಣಕಹಳೆ : ದಿಂಗಾಲೇಶ್ವರ ಶ್ರೀ ವಿರುದ್ದ ಎಫ್ ಐಆರ್ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.