ಅಫ್ಘಾನ್ ಸಂಸದೀಯ ಚುನಾವಣೆ: ಮತದಾನ ಆರಂಭ, 88 ಲಕ್ಷ ಮತದಾರರು
Team Udayavani, Oct 20, 2018, 12:12 PM IST
ಕಾಬೂಲ್ : ಅಫ್ಘಾನಿಸ್ಥಾನದಲ್ಲಿಂದು ಹತ್ತಾರು ಸಾವಿರ ಜನರು ಸಂಸದೀಯ ಚುನಾವಣೆಗೆ ಮತದಾನಕ್ಕೆ ಧೈರ್ಯದಿಂದ ಮುಂದೆ ಬಂದಿದ್ದು ದೇಶದಲ್ಲಿ ಈಚೆಗೆ ನಿರಂತರವಾಗಿ ನಡೆಯುತ್ತಿರುವ ಚುನಾವಣಾ ಹಿಂಸೆಗೆ ತಾವು ಭಯ ಪಡುವವರಲ್ಲ ಎಂದು ಸಾರಿದ್ದಾರೆ.
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಮತದಾನದ ಆರಂಭದ ಹೊತ್ತಿನಲ್ಲೇ ತಮ್ಮ ಮತ ಚಲಾಯಿಸಿ ಅಫ್ಘಾನಿಸ್ಥಾನದ ಜನರನ್ನು ಇನ್ನೊಂದು ದೊಡ್ಡ ಚುನಾವಣೆಗಾಗಿ ಅಭಿನಂದಿಸಿದರು.
ಇದೇ ವೇಳೆ ಅವರು ಚುನಾವಣಾ ಪ್ರಕ್ರಿಯೆಗಳನ್ನು ಯಶಸ್ವಿಯಾಗಿ ನಡೆಸುವುದಕ್ಕೆ ಕಟಿಬದ್ಧರಾಗಿ ಭಾರೀ ಸಂಖ್ಯೆಯಲ್ಲಿ ನಿಯೋಜಿಸಲ್ಪಟ್ಟಿರುವ ಯೋಧರನ್ನು ಕರ್ತವ್ಯಪರತೆಗಾಗಿ ಅಭಿನಂದಿಸಿದರು.
ಅಫ್ಘಾನಿಸ್ಥಾನದ ಸ್ವಾಯತ್ತ ಚುನಾವಣಾ ಆಯೋಗ ಸಂಸದೀಯ ಚುನಾವಣೆಗೆ 88 ಲಕ್ಷ ಮತದಾರರನ್ನು ನೋಂದಾಯಿಸಿಕೊಂಡಿದೆ. ದೇಶದ ಮತದಾರರ ನಿಜಕ್ಕೂ ಧೀರರಾಗಿದ್ದಾರೆ ಎಂದು ನಿರ್ಭಿಡೆಯಿಂದ ಮತದಾನಕ್ಕೆ ಬಂದಿರುವ ಸುಮಾರು 50 ಲಕ್ಷ ಮತದಾರರನ್ನು ಆಯೋಗದ ಓರ್ವ ಸದಸ್ಯರಾಗಿರುವ ವಸೀಮಾ ಬಾದ್ ಸಿ ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ