“3000′ + ಪಿಶಾಚಿ + ಭಯ: ಹಾರರ್ ಟ್ರೈಲರ್ ವೀಕ್ಷಿಸಿ
Team Udayavani, Feb 24, 2018, 4:03 PM IST
ಕನ್ನಡದಲ್ಲಿ ಹಾರರ್ ಸಿನಿಮಾಗಳಿಗಂತೂ ಬರವಿಲ್ಲ. ಆ ಸಾಲಿಗೆ “3000′ ಎಂಬ ಸಿನಿಮಾವೂ ಒಂದು. ಇತ್ತೀಚೆಗೆ ಈ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರಿಗೆ ಹೊಸ ರೀತಿಯ ಕೌತುಕ ಹಾಗೂ ಭಯವನ್ನುಂಟು ಮಾಡಿದೆ. ಇದು ಹೇಳಿ ಕೇಳಿ ಹೊಸಬರ ಹಾಗೂ ಒಂದು ಸಂದೇಶವುಳ್ಳ ಕಥೆಯನ್ನು ಒಳಗೊಂಡಿರುವಂತಹ ಚಿತ್ರ. ಈ ಚಿತ್ರದಲ್ಲೊಂದು ವಿಶೇಷತೆ ಇದೆ. ಅದು ಲ್ಯಾಟಿನ್ ಭಾಷೆ. ಅದನ್ನಿಲ್ಲಿ ಬಳಸಿಕೊಳ್ಳಲಾಗಿದೆ. ಲ್ಯಾಟಿನ್ ಭಾಷೆಯಲ್ಲೇ ಒಂದು ಹಾಡಿದೆ ಎಂಬುದು ವಿಶೇಷ. ಕನ್ನಡದಲ್ಲಿ ಲ್ಯಾಟಿನ್ ಭಾಷೆಯ ಹಾಡು ಇದೇ ಮೊದಲು. ಸುಹಾನ್ ಇಲ್ಲಿ ನಾಯಕರಾಗಿ ಕಾಣಿಸಿಕೊಂಡರೆ, ಕೀರ್ತಿ ನಿರ್ದೇಶನ ಮತ್ತು ಶಂಕರ್ ನಿರ್ಮಾಣ ಚಿತ್ರಕ್ಕಿದೆ. ಇನ್ನು ಚಿತ್ರದಲ್ಲಿ ಗೌರೀಶ್ ಅಕ್ಕಿ, ಸ್ವಾತಿ, ಕೀರ್ತಿ ಸೇರಿದಂತೆ ಬಹುತೇಕ ರಂಗಭೂಮಿ ಕಲಾವಿದರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಮನು ಕ್ಯಾಮೆರಾ ಹಿಡಿದಿದ್ದಾರೆ. ಚಿತ್ರದ ಹಾರರ್ ಟ್ರೈಲರ್ ವೀಕ್ಷಿಸಿ.