ಸುಂದರಿ ಹಿಂದೆ ಹೋದ “ಅಯೋಗ್ಯ’: ಸೂಪರ್ ಸಾಂಗ್ ವೀಕ್ಷಿಸಿ
Team Udayavani, Aug 22, 2018, 4:45 PM IST
ಸತೀಶ್ ನೀನಾಸಂ ಅಭಿನಯದ ಬಹುನಿರೀಕ್ಷಿತ “ಅಯೋಗ್ಯ’ ಚಿತ್ರ ಪ್ರಪಂಚದಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದರೆ, ಇತ್ತ ಚಿತ್ರದ “ಹಿಂದೆ ಹಿಂದೆ ಹಿಂದೆ ಹೋಗು’ ಹಾಡು ಯೂಟ್ಯೂಬ್ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಅಲ್ಲದೇ ಸಂಜಿತ್ ಹೆಗ್ಡೆ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಚಿತ್ರದಲ್ಲಿ ಸಖತ್ ರಗಡ್ ಲುಕ್ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯನ ಪಾತ್ರದಲ್ಲಿ ಸತೀಶ್ ನೀನಾಸಂ ಕಾಣಿಸಿಕೊಂಡಿದ್ದು, ರಚಿತಾ ರಾಮ್ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. ಖಡಕ್ ವಿಲನ್ ಬಚ್ಚೇಗೌಡನಾಗಿ ರವಿಶಂಕರ್ ನಟಿಸಿದ್ದಾರೆ. ಚಿತ್ರಕ್ಕೆ ಯೋಗರಾಜ್ ಭಟ್ ಶಿಷ್ಯ ಮಹೇಶ್ ಕುಮಾರ್ ಕಥೆ ಬರೆದು ನಿರ್ದೇಶಿಸಿದರೆ, ಟಿ.ಆರ್. ಚಂದ್ರಶೇಖರ್ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಶರತ್ ಚಕ್ರವರ್ತಿ ಸಂಭಾಷಣೆ, ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದ್ದು, ಪ್ರೀತಮ್ ತೆಗ್ಗಿನಮನೆ ಛಾಯಾಗ್ರಹಣ ಮಾಡಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಸರಿತ, ರವಿಶಂಕರ್, ರಂಗಾಯಣ ರಘು, ತಬಲಾ ನಾಣಿ, ಸಾಧು ಕೋಕಿಲ, ಬುಲೆಟ್ ಪ್ರಕಾಶ್, ಕುರಿ ಪ್ರತಾಪ್ ಸೇರಿದಂತೆ ನಟಿಸಿದ್ದಾರೆ. ಚಿತ್ರದ ಸೂಪರ್ ಸಾಂಗ್ ವೀಕ್ಷಿಸಿ.