CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಜಯ್ ರಾಘವೇಂದ್ರ ಅಭಿನಯದ "ಎರಡು ಕನಸು' ಚಿತ್ರದ ಸೂಪರ್ ಟ್ರೈಲರ್

1974ರಲ್ಲಿ ವಾಣಿ ಅವರ ಕಾದಂಬರಿಯನ್ನಾಧರಿಸಿದ "ಎರಡು ಕನಸು' ಎಂಬ ಚಿತ್ರ ಬಿಡುಗೆಯಾಗಿದ್ದು ಗೊತ್ತಿರಬಹುದು. ಡಾ. ರಾಜಕುಮಾರ್‌ ಅಭಿನಯದ ಈ ಚಿತ್ರ ಸಾಕಷ್ಟು ಜನಪ್ರಿಯವಾಗಿತ್ತು. ಈಗ ಅದೇ ಹೆಸರಿನ ಇನ್ನೊಂದು ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ವಿಜಯ್‌ ರಾಘವೇಂದ್ರ, ಕಾರುಣ್ಯ ರಾಮ್‌, ಕೃಷಿ ತಪಂಡ ಮುಂತಾದವರು ನಟಿಸಿರುವ ಈ ಚಿತ್ರವನ್ನು ಮದನ್‌ ನಿರ್ದೇಶಿಸಿದ್ದು, ಅಶೋಕ್‌ ನಿರ್ಮಿಸಿದ್ದಾರೆ. ಚಿತ್ರಕ್ಕೆ ಮದನ್‌ ಅವರೇ ಕಥೆ, ಚಿತ್ರಕಥೆಯನ್ನು ರಚಿಸಿದ್ದಾರೆ. ಚಿತ್ರಕ್ಕೆ ಸ್ಟೀವ್‌ -ಕೌಶಿಕ್‌ ಅವರ ಸಂಗೀತ ಮತ್ತು ದರ್ಶನ್‌ ಕನಕ ಅವರ ಛಾಯಾಗ್ರಹಣವಿದೆ. (Eradu Kanasu - Official Trailer | Vijay Raghavendra, Karunya Ram, Krishi Thapanda)

Back to Top