“ಜಾನಿ ಜಾನಿ ಎಸ್ ಪಪ್ಪಾ’ ಎಂದ ವಿಜಿ: ಮಾಸ್ ಟೀಸರ್ ವೀಕ್ಷಿಸಿ
Team Udayavani, Feb 9, 2018, 5:12 PM IST
“ಕನಕ’ ಚಿತ್ರ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನದ ಬೆನ್ನಲ್ಲೇ “ದುನಿಯಾ ವಿಜಯ್’ ಅಭಿನಯದ “ಜಾನಿ ಜಾನಿ ಎಸ್ ಪಪ್ಪಾ’ ಚಿತ್ರದ ಫಸ್ಟ್ ಲುಕ್ ಟೀಸರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಸೃಷ್ಟಿಸುತ್ತಿದೆ. ಸ್ವತಃ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಈ ಟೀಸರ್ ನಲ್ಲಿ ದುನಿಯಾ ವಿಜಯ್ ವಿಭಿನ್ನ ಗೆಟಪ್ ನಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ನೋಡುಗರಿಗೆ ಟೀಸರ್ “ಜಾನಿ ಮೇರಾ ನಾಮ್’ ಚಿತ್ರವನ್ನು ನೆನಪಿಸುತ್ತದೆ. ಇನ್ನು ವಿಜಯ್ ಎದುರಿಗೆ ನಾಯಕಿಯಾಗಿ ರಚಿತಾರಾಮ್ ನಟಿಸಿದ್ದಾರೆ. ಚಿತ್ರಕ್ಕೆ ಪ್ರೀತಂ ಗುಬ್ಬಿ ನಿರ್ದೇಶನವಿದ್ದು, ಈ ಹಿಂದೆ “ಜಾನಿ ಮೇರಾ ನಾಮ್’ ಚಿತ್ರವನ್ನು ಇವರೇ ನಿರ್ದೇಶಿಸಿದ್ದರು. ಇದರ ಮುಂದುವರಿದ ಭಾಗವಾಗಿ ಜಾನಿ ಜಾನಿ ಎಸ್ ಪಪ್ಪಾ ಚಿತ್ರವನ್ನು ನಿರ್ಮಿಸಿದ್ದಾರೆ. ಅಲ್ಲದೇ ಆ ಚಿತ್ರಕ್ಕೂ, ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುತ್ತಾರೆ ನಿರ್ದೇಶಕರು. ಇನ್ನು ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ದತ್ತಣ್ಣ ಸೇರಿದಂತೆ ಅನೇಕರ ತಾರಾಬಳಗವಿದೆ. ಪ್ರಮುಖವಾಗಿ ಚಿತ್ರದ ಫಸ್ಟ್ ಲುಕ್ ಟೀಸರ್ ಅನ್ನು ದುನಿಯಾ ವಿಜಯ್ ಹುಟ್ಟುಹಬ್ಬದಂದು ಚಿತ್ರತಂಡ ಬಿಡುಗಡೆ ಮಾಡುವ ಮೂಲಕ ಉಡುಗೊರೆ ನೀಡಿದೆ. ಚಿತ್ರದ ಮಾಸ್ ಟೀಸರ್ ವೀಕ್ಷಿಸಿ.