CONNECT WITH US  

ಪವರ್ ಸ್ಟಾರ್ ಕಂಠದಲ್ಲಿ "ಜಾನಿ ಜಾನಿ ಎಸ್ ಪಪ್ಪಾ': ಕಲರ್‌ಫುಲ್‌ ಸಾಂಗ್

"ಜಾನಿ ಮೇರಾ ನಾಮ್' ಚಿತ್ರದ ಮುಂದುವರಿದ ಭಾಗ ಎನ್ನಲಾಗಿರುವ "ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬ್ಯಾಂಡ್ ಬಜಾಯಿಸುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ ಟೈಟಲ್ ಸಾಂಗ್ ಬಿಡುಗಡೆ ಮಾಡಿದೆ. ಚಿತ್ರದ ಟೈಟಲ್ ಸಾಂಗ್‌ಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಧ್ವನಿಯಾಗಿದ್ದಾರೆ. 'ಅಂಜೋದಿಲ್ಲ... ಗಿಂಜೋದಿಲ್ಲ... ಮುಖಾಮುಖಿ ಮುಕಾಬುಲ್ಲಾ, ಅಡ್ರೆಸ್‌ ಇಲ್ಲಾ ಫೇಸ್‌ಬುಕ್‌ ಇಲ್ಲಾ ನನ್ನಷ್ಟು ಫೇಮಸ್ ಯಾರು ಇಲ್ಲ'... ಇದು 'ಜಾನಿ ಜಾನಿ ಯೆಸ್ ಪಪ್ಪಾ' ಚಿತ್ರದ ಟೈಟಲ್ ಸಾಂಗ್‌ನ ಮೊದಲ ಲೈನ್‌. ಯೂಟ್ಯೂಬ್ ನಲ್ಲಿ ರಿಲೀಸ್ ಆಗಿರುವ ಈ ಹಾಡನ್ನು ಈಗಾಗಲೇ 1 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.

ಚಿತ್ರದ ನಾಯಕಿಯಾಗಿ ರಚಿತಾ ರಾಮ್ ಮತ್ತು ನಾಯಕ ದುನಿಯಾ ವಿಜಿ ಇದೇ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ತೆರೆ ಹಂಚಿಕೊಂಡಿದ್ದು, ವಿಭಿನ್ನ ಗೆಟಪ್‌ನಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ."ಜಾನಿ ಮೇರಾ ನಾಮ್‌' ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪ್ರೀತಂ ಗುಬ್ಬಿ ಅವರೇ "ಜಾನಿ ಜಾನಿ ಎಸ್‌ ಪಪ್ಪಾ' ಚಿತ್ರವನ್ನೂ ನಿರ್ದೇಶಿಸಿದ್ದಾರೆ. ತಿಥಿ ಚಿತ್ರದ ಗಡ್ಡಪ್ಪ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು ಚಿತ್ರದಲ್ಲಿದ್ದಾರೆ. ಚಿತ್ರದ ಕಲರ್‌ಫುಲ್‌ ಸಾಂಗ್ ವೀಕ್ಷಿಸಿ.

Back to Top