ದಿಗಂತ್ “ಕಥೆ ಶುರುವಾಗಿದೆ’: ಬೊಂಬಾಟ್ ಟ್ರೈಲರ್ ವೀಕ್ಷಿಸಿ
Team Udayavani, Aug 4, 2018, 3:26 PM IST
ದಿಗಂತ್, ಪೂಜಾ ನಟಿಸಿರುವ ಪರಂವಃ ಸ್ಟುಡಿಯೋಸ್ ಮತ್ತು ಪುಷ್ಕರ್ ಫಿಲಂಸ್ ಲಾಂಛನದಲ್ಲಿ ರಕ್ಷಿತ್ ಶೆಟ್ಟಿ, ಪುಷ್ಖರ್ ಮಲ್ಲಿಕಾರ್ಜುನಯ್ಯ, ಲೇಟ್ ಜಿ.ಎಸ್.ಗುಪ್ತ, ವಿನೋದ್ ದಿವಾಕರ್ ಹಾಗೂ ಪ್ರಸನ್ನ ಹೆಗ್ಡೆ ಅವರು ನಿರ್ಮಿಸಿರುವ “ಕಥೆಯೊಂದು ಶುರುವಾಗಿದೆ’ ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಂಡಿದ್ದು, ಸೆನ್ನಾ ಹೆಗ್ಡೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಭಿಜಿತ್ ಮಹೇಶ್ ಸಂಭಾಷಣೆ ಬರೆದಿದ್ದಾರೆ. ಶ್ರೀರಾಜ್ ರವಿಚಂದ್ರನ್ ಛಾಯಾಗ್ರಹಣ, ಸಚಿನ್ ವಾರಿಯರ್ ಸಂಗೀತ ನಿರ್ದೇಶನ ಹಾಗೂ ಎಸ್.ಎಸ್.ಮ್ಯಾಕ್ಸ್ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಅಶ್ವಿನ್ ರಾವ್ ಪಲ್ಲಕಿ, ಶ್ರೇಯಾ ಅಂಜನ್, ಪ್ರಾಕಾಶ್, ಬಾಬು ಹಿರಣ್ಣಯ್ಯ, ಅರುಣ ಬಾಲರಾಜ್, ರಘು ರಾಮನ್ಕೊಪ್ಪ ಮುಂತಾದವರಿದ್ದಾರೆ. ಚಿತ್ರದ ಬೊಂಬಾಟ್ ಟ್ರೈಲರ್ ವೀಕ್ಷಿಸಿ.