“ಪರಸಂಗ’ ಮಾಡಿದ ಮಿತ್ರ: ಬೊಂಬಾಟ್ ಮೋಶನ್ ಪೋಸ್ಟರ್ ವೀಕ್ಷಿಸಿ
Team Udayavani, Apr 9, 2018, 3:42 PM IST
ಖ್ಯಾತ ನಗೆ ನಟ ಮಿತ್ರ ಅಭಿನಯದ “ಪರಸಂಗ’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರವನ್ನು ಕೆ ಎಂ ರಘು ನಿರ್ದೆಶಿಸುವುದರ ಜೊತೆಗೆ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ಬರೆದಿದ್ದಾರೆ. ಈ ಸಿನಿಮಾ ವಿಶೇಷ ಕಥೆಯನ್ನು ಒಳಗೊಂಡಿದ್ದು, ಎಚ್ ಕುಮಾರ್, ಎಂ ಮಹಾದೇವಗೌಡ, ಕೆ ಎಂ ಲೋಕೇಶ್ ನಿರ್ಮಾಣಕ್ಕೆ ಸಹ ನಿರ್ಮಾಪಕರಾಗಿ ಪ್ರಕಾಶ್ ಮಂಡ್ಯ, ಸಿದ್ದೇಗೌಡ ಎಸ್ ಸೇರಿಕೊಂಡಿದ್ದಾರೆ. ಇನ್ನು ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಮಿತ್ರ, ಅಕ್ಷತ ಶ್ರೀನಿವಾಸ್, ಮನೋಜ್, ತರುಣ್ ಸುಧೀರ್, ಕಾಮಿಡಿ ಕಿಲಾಡಿಗಳು ನಟರುಗಳಾದ ಗೋವಿಂದೇಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದ ಚಂದ್ರ ಪ್ರಭ ಇದ್ದಾರೆ. ಚಿತ್ರದ ಬೊಂಬಾಟ್ ಮೋಶನ್ ಪೋಸ್ಟರ್ ವೀಕ್ಷಿಸಿ.