ಶೆಟ್ಟರ “ಅರೆರೆ ಅವಳ ನಗುವ’ ಹಾಡು ವೈರಲ್: ಸೂಪರ್ ಸಾಂಗ್ ವೀಕ್ಷಿಸಿ
Team Udayavani, Aug 11, 2018, 3:59 PM IST
“ಕಿರಿಕ್ ಪಾರ್ಟಿ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಿಷಬ್ ಶೆಟ್ಟಿ “ಸರ್ಕಾರಿ ಹಿ.ಪ್ರಾ. ಶಾಲೆ ಕಾಸರಗೋಡು, ಕೊಡುಗೆ: ರಾಮಣ್ಣ ರೈ’ ಎಂಬ ಮಕ್ಕಳ ಚಿತ್ರವೊಂದನ್ನು ನಿರ್ದೇಶಿಸುತ್ತಿದ್ದು, ಇದೀಗ ಚಿತ್ರದ “ಅರೆರೆ ಅವಳ ನಗುವ ನೋಡಿ ಮರೆತೆ ಜಗವ’ ಎಂಬ ಹಾಡು ಯೂಟ್ಯೂಬ್ನಲ್ಲಿ ಸಖತ್ ವೈರಲ್ ಆಗಿದೆ. ಚಿತ್ರಕ್ಕೆ “ರಾಮಾ ರಾಮಾ ರೇ’ ವಾಸುಕಿ ವೈಭವ್ ಸಂಗೀತ ಸಂಯೋಜಿಸಿದ್ದು, ಇದೊಂದು ಕಾಸರಗೋಡು ಹಿನ್ನೆಲೆಯಲ್ಲಿ ಸಾಗುವ ಮಕ್ಕಳ ಚಿತ್ರವಾಗಿದ್ದು, ಮಕ್ಕಳ ಜೊತೆ ತಲೆಹರಟೆ ಮಾಡ್ಕೊಂಡು ಹಿರಿಯ ನಟ ಅನಂತ್ನಾಗ್ ಇಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವೆಂಕಟೇಶ್ ಅಂಗುರಾಜ್ ಕ್ಯಾಮೆರಾ ಕೈಚಳಕವಿದ್ದು, ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಸಹ ಚಿತ್ರದಲ್ಲಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದಾರೆ. ಅಲ್ಲದೇ ಚಿತ್ರದ ವಿತರಣಾ ಹಕ್ಕನ್ನು ಜಯಣ್ಣ ಪಡೆದಿದ್ದಾರೆ. ಚಿತ್ರದ ಸೂಪರ್ ಸಾಂಗ್ ವೀಕ್ಷಿಸಿ.