Bankruptcy; ವಿಶ್ವವಿಖ್ಯಾತ ಸ್ಟಾರ್ಟ್ಅಪ್ ವೀವರ್ಕ್ ದಿವಾಳಿ
Team Udayavani, Nov 8, 2023, 5:40 AM IST
ವಾಷಿಂಗ್ಟನ್: 2010ರಲ್ಲಿ ಪ್ರಾರಂಭವಾಗಿ ವಿಶ್ವವಿಖ್ಯಾತವಾಗಿದ್ದ ವೀವರ್ಕ್ ಸ್ಟಾರ್ಟ್ ಅಪ್ ಕಂಪೆನಿ ಈಗ ದಿವಾಳಿಯಾಗಿದೆ. ನ್ಯೂಯಾರ್ಕ್ ಮೂಲದ ಕಂಪೆನಿ, ತಾನು ದಿವಾಳಿಯಾಗಿದ್ದೇನೆಂದು ಮಂಗಳವಾರ ನ್ಯೂಜೆರ್ಸಿಯಲ್ಲಿ ಘೋಷಿಸಿಕೊಂಡಿದೆ. ಸದ್ಯ ಅದು ಕಾರ್ಯಾಚರಣೆ ಮಾಡ ಬಹುದಾದರೂ, ಸಾಲ ತೀರಿಸಲು ದಾರಿ ಹುಡುಕಿಕೊಳ್ಳಬೇಕಿದೆ. ಒಂದು ಕಾಲದಲ್ಲಿ 47 ಬಿಲಿಯನ್ ಡಾಲರ್ ಮೌಲ್ಯ ಹೊಂದಿ, ಭಾರೀ ಹೆಸರು ಮಾಡಿದ್ದ ಸ್ಟಾರ್ಟ್ಅಪ್ ಈಗ ಅಧಃ ಪತನಕ್ಕೀಡಾಗಿರುವುದು ದೊಡ್ಡ ಪ್ರಶ್ನೆಯಾಗಿದೆ.
ವೀವರ್ಕ್ ಇತರ ಕಂಪೆನಿಗಳಿಗೆ ಕಚೇರಿಯನ್ನು ಒದಗಿಸಿಕೊಡುವ ಒಂದು ಕಂಪೆನಿ. ಈ ರೀತಿಯ ವಿಶೇಷ ದಾರಿ ಹುಡುಕಿಕೊಂಡು ಅದು ದೊಡ್ಡ ಹೆಸರು ಮಾಡಿತ್ತು. ಆದರೆ ಕೊರೊನಾ ದಾಳಿ ಮಾಡಿದ್ದೇ ತಡ, ಉದ್ಯೋಗಿಗಳು ಕಚೇರಿ ತೊರೆದು ಮನೆ ಸೇರಿಕೊಂಡರು. ಅಲ್ಲಿಗೆ ಕಂಪೆನಿ ನಷ್ಟದ ಹಾದಿ ತುಳಿಯ ತೊಡ ಗಿತು. ಕೊರೊನಾ ಮುಗಿದ ಮೇಲೂ ಬಹುತೇಕರು ಮನೆಯಿಂದಲೇ ಕೆಲಸ ಮುಂದುವರಿಸಿದರು. ಅದರಿಂದ ಚೇತ ರಿಸಿ ಕೊಳ್ಳಲು ಅದಕ್ಕೆ ಆಗುತ್ತಲೇ ಇಲ್ಲ.
ವೀವರ್ಕ್ನ ಮುಖ್ಯ ಸಮಸ್ಯೆಯೆಂದರೆ ಅದು ಇತರರಿಗೆ ಕೊಡುವ ಕಚೇರಿ ಸ್ಥಳವನ್ನು ತಾನೇ ಸ್ವತಃ ಬಾಡಿಗೆಗೆ ಪಡೆದಿರುತ್ತದೆ! ಈ ಖರ್ಚನ್ನು ಅದಕ್ಕೆ ನಿಭಾಯಿಸಲು ಆಗದೇ ವಿದಾಯ ಹೇಳಿದೆ. ಆದರೆ ವೀವರ್ಕ್ನ ಭಾರತೀಯ ಶಾಖೆ ತಾನು ಲಾಭ ದಲ್ಲಿದ್ದೇನೆ. ತಾನು ಜಾಗತಿಕ ಶಾಖೆ ಯಿಂದ ಪ್ರತ್ಯೇಕವಾಗಿದ್ದೇನೆ, ಆ ಹೆಸರನ್ನು ಬಳಸಿಕೊಂಡು ಮುಂದು ವರಿಯಲು ತನಗೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ