ದಿನಾಂತ್ಯಕ್ಕೆ ಕರಗಿದ ಜಿಎಸ್ಟಿ ಹಿತಾನುಭವ:ಸೆನ್ಸೆಕ್ಸ್ 11 ಅಂಕ ನಷ್ಟ
Team Udayavani, Jul 4, 2017, 6:00 PM IST
ಮುಂಬಯಿ : ಬೆಳಗ್ಗಿನ ಆರಂಭಿಕ ವಹಿವಾಟಿನಲ್ಲಿ ಕಂಡು ಬಂದಿದ್ದ ಜಿಎಸ್ಟಿ ಹಿತಾನುಭವದ ಉತ್ಸಾಹ ಸಂಜೆಯ ಹೊತ್ತಿಗೆ ಕರಗಿದ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಮಂಗಳವಾರದ ವಹಿವಾಟನ್ನು 11.83 ಅಂಕಗಳ ನಷ್ಟದೊಂದಿಗೆ 31,209.79 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರುಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 1.70 ಅಂಕಗಳ ನಷ್ಟಕ್ಕೆ ಗುರಿಯಾಗಿ 9,613.30 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಇಂದಿನ ವಹಿವಾಟಿನಲ್ಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದ ಶೇರುಗಳೆಂದರೆ ರಿಲಯನ್ಸ್, ಬಿಪಿಸಿಎಲ್, ಐಟಿಸಿ, ಎಸ್ ಬ್ಯಾಂಕ್, ಹಿಂಡಾಲ್ಕೋ.
ಟಾಪ್ ಗೇನರ್ಗಳು : ರಿಲಯನ್ಸ್, ಬಿಪಿಸಿಎಲ್, ಎಚ್ ಡಿ ಎಫ್ ಸಿ, ಇನ್ಫೋಸಿಸ್, ಕೋಟಕ್ ಮಹೀಂದ್ರ. ಟಾಪ್ ಲೂಸರ್ಗಳು : ಐಡಿಯಾ ಸೆಲ್ಯುಲರ್, ಡಾ. ರೆಡ್ಡಿ. ಹೀರೋ ಮೋಟೋ ಕಾರ್ಪ್, ಎಕ್ಸಿಸ್ ಬ್ಯಾಂಕ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್