ಬ್ರಿಟನ್ ಅಸ್ಥಿರತೆ ಕಡೆಗಣಿಸಿದ ಮುಂಬಯಿ ಶೇರು ಪೇಟೆ; 48 ಅಂಕ ಏರಿಕೆ
Team Udayavani, Jun 9, 2017, 4:47 PM IST
ಮುಂಬಯಿ : ದಿಢೀರ್ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಬಹುಮತವಿಲ್ಲದೆ ಬ್ರಿಟನ್ ಸಂಸತ್ತು ಅತಂತ್ರವಾಗಿರುವ ಅಸ್ಥಿರತೆಯ ಭಯದ ನಡುವೆಯೂ ಸಾವರಿಸಿಕೊಂಡ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 48.70 ಅಂಕಗಳ ಏರಿಕೆಯೊಂದಿಗೆ ಕೊನೆಗೊಳಿಸಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 21 ಅಂಕಗಳ ಮುನ್ನಡೆಯೊಂದಿಗೆ 9,668.25 ಅಂಕಗಳ ಮಟ್ಟದಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ 1,393 ಶೇರುಗಳು ಮುನ್ನಡೆ ಸಾಧಿಸಿದರೆ 1,285 ಶೇರುಗಳು ಹಿನ್ನಡೆಗೆ ಗುರಿಯಾದವು; 179 ಶೇರುಗಳ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.
ಇಂದಿನ ಟಾಪ್ ಗೇನರ್ಗಳು : ವೇದಾಂತ, ಮಾರುತಿ ಸುಜುಕಿ, ಹಿಂಡಾಲ್ಕೊ, ಟಾಟಾ ಮೋಟರ್, ಟಾಟಾ ಸ್ಟೀಲ್; ಟಾಪ್ ಲೂಸರ್ಗಳು : ಟೆಕ್ ಮಹೀಂದ್ರ, ಗೇಲ್, ಐಟಿಸಿ, ವಿಪ್ರೋ, ಟಾಟಾ ಪವರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್