ಮುಂಬಯಿ ಶೇರು ಪೇಟೆ ಅಲ್ಪ ಏರಿಕೆ: ಸೆನ್ಸೆಕ್ಸ್ 47 ಅಂಕ
Team Udayavani, Dec 3, 2018, 5:00 PM IST
ಮುಂಬಯಿ : ದಿನದ ವಹಿವಾಟಿನ ಉದ್ದಕ್ಕೂ ಏಳು ಬೀಳುಗಳನ್ನು ಕಾಣುತ್ತಲೇ ಸಾಗಿದ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 46.70 ಅಂಕಗಳ ಮುನ್ನಡೆಯೊಂದಿಗೆ 36,241 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 7 ಅಂಕಗಳ ಮುನ್ನಡೆಗೆ ತೃಪ್ತಿ ಪಟ್ಟು ದಿನದ ವಹಿವಾಟನ್ನು 10,883.75 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,779 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,321 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,263 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 195 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.
ಇಂದಿನ ಟಾಪ್ ಗೇನರ್ಗಳು : ಇಂಡಿಯಾಬುಲ್ಸ ಹೌಸಿಂಗ್, ಎಸ್ ಬ್ಯಾ,ಕ್, ಎಚ್ಯುಎಲ್, ಗೇಲ್, ವೇದಾಂತ; ಟಾಪ್ ಲೂಸರ್ಗಳು : ಸನ್ ಫಾರ್ಮಾ, ಮಹೀಂದ್ರ, ಯುಪಿಎಲ್, ಎಚ್ಪಿಸಿಎಲ್, ಝೀ ಎಂಟರ್ಟೇನ್ಮೆಂಟ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್