2,262 ಕೋಟಿ ರೂ.ಫೆಮಾ ಉಲ್ಲಂಘನೆ:ವಾಸನ್ ಹೆಲ್ತ್ಕೇರ್ಗೆ ED ನೊಟೀಸ್
Team Udayavani, Apr 17, 2017, 3:43 PM IST
ಹೊಸದಿಲ್ಲಿ : ವಿದೇಶ ವಿನಿಮಯ ನಿರ್ವಹಣ ಕಾಯಿದೆ (ಫೆಮಾ) ಉಲ್ಲಂಘನೆ ಗೈದು ಸರಕಾರಕ್ಕೆ 2,262 ಕೋಟಿ ರೂ. ವಂಚಿಸಿರುವ ಆರೋಪದ ಮೇಲೆ ಪ್ರಖ್ಯಾತ ವಾಸನ್ ಹೆಲ್ತ್ಕೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಾರಿ ನಿರ್ದೇಶನಾಲಯ (ಇಡಿ) ನೊಟೀಸ್ ಜಾರಿ ಮಾಡಿದೆ.
ವಾಸನ್ ಕಂಪೆನಿಯ ಶೇರುಗಳನ್ನು ಸಾಗರೋತ್ತರ ಹೂಡಿಕೆದಾರರಿಗೆ ಮಾರುವ ಮೂಲಕ ಫೆಮಾ ಉಲ್ಲಂಘನೆ ಮಾಡಿರುವ ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಕಂಪೆನಿಗೂ ಜಾರಿ ನಿರ್ದೇಶನಾಲಯ ನೊಟೀಸ್ ಜಾರಿ ಮಾಡಿದೆ.
ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರೊಂದಿಗ ವಾಸನ್ ಹಾಗೂ ಅಡ್ವಾಂಟೇಜ್ ಕಂಪೆನಿಗೆ ನಂಟು ಇದೆ ಎನ್ನಲಾಗಿದೆ; ಆದರೆ ಚಿದಂಬರಂ ಈ ಆರೋಪವನ್ನು ಅಲ್ಲಗಳೆಯುತ್ತಾ ಬಂದಿದ್ದಾರೆ.
ವಾಸನ್ ಐ ಕೇರ್ ಮತ್ತು ಅಡ್ವಾಂಟೇಜ್ ಕಂಪೆನಿ ನಡುವೆ 200 ಕೋಟಿ ರೂ.ಗಳಿಗೂ ಅಧಿಕ ಮೊತ್ತ ಅವ್ಯವಹಾರ ನಡೆದಿರುವುದನ್ನು ಇಡಿ ಪತ್ತೆ ಹಚ್ಚಿದೆ. ಕಾರ್ತಿ ಚಿದಂಬರಂ ಅವರು ತಮ್ಮ ಆಸ್ಬ್ರಿಜ್ ಹೋಲ್ಡಿಂಗ್ಸ್ ಸಂಸ್ಥೆಯ ಮೂಲಕ ಅಡ್ವಾಂಟೇಜ್ ಕಂಪೆನಿಯ ಮೇಲೆ ನಿಯಂತ್ರಣ ಹೊಂದಿರುವುದಾಗಿ ಆಳುವ ಬಿಜೆಪಿ ಈ ಹಿಂದೆಯೇ ಆರೋಪಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್