ಬುಕ್ಕಿಂಗ್ ದಿನವೇ ಗ್ಯಾಸ್?
Team Udayavani, Jan 13, 2021, 6:00 AM IST
ಹೊಸದಿಲ್ಲಿ: ಬುಕ್ಕಿಂಗ್ ಮಾಡಿದ ದಿನವೇ ಎಲ್‌ಪಿಜಿ ಸಿಲಿಂಡರ್ ಒದಗಿಸುವ ನಿಟ್ಟಿನಲ್ಲಿ “ತತ್ಕಾಲ್ ಎಲ್‌ಪಿಜಿ ಸೇವಾ’ ಆರಂಭಿ ಸಲು ಇಂಡಿಯನ್ ಆಯಿಲ್ ಕಾರ್ಪೊರೇಶನ್ (ಐಒಸಿಎಲ್) ಯೋಜನೆ ರೂಪಿಸಿದೆ.
ಏಕ ಸಿಲಿಂಡರ್ ಗ್ರಾಹಕ ರಿಗಾಗಿ ಈ ಸೇವೆ ಜಾರಿ ಗೊಳಿಸಲು ಎಲ್ಲ ರಾಜ್ಯ ಗಳು ಕನಿಷ್ಠ ಒಂದು ಪ್ರಮುಖ ನಗರ ಯಾ ಜಿಲ್ಲೆ ಯನ್ನು ಗುರುತಿಸ ಬೇಕು. ಬುಕ್ಕಿಂಗ್ ಮಾಡಿದ ಬಳಿಕ 30-45 ನಿಮಿಷಗಳಲ್ಲಿ ಸಿಲಿಂಡರ್ ಡೆಲಿವರಿ ನೀಡಲಾಗುವುದು ಎಂದು ಐಒಸಿಎಲ್ ಹೇಳಿದೆ. ಅದು “ಇಂಡೇನ್’ ಬ್ರ್ಯಾಂಡ್‌ನಡಿ ಎಲ್‌ಪಿಜಿ ನೀಡು ತ್ತಿದ್ದು, ಫೆ. 1ರಿಂದಲೇ ತತ್ಕಾಲ್ ಎಲ್‌ಪಿಜಿ ಸೇವಾ ಆರಂಭ ವಾಗುವ ನಿರೀಕ್ಷೆ ಇದೆ.
ಎಲ್‌ಪಿಜಿ ಬಳಕೆ ಹೆಚ್ಚಳ :
ದೇಶದಲ್ಲಿ ಕಳೆದ ವರ್ಷ ಇದೇ ಮೊದಲ ಬಾರಿಗೆ ಎಲ್‌ಪಿಜಿ ಬಳಕೆಯ ಪ್ರಮಾಣವು ಇಂಧನ ತೈಲಗಳಿಗಿಂತ ಹೆಚ್ಚಿತ್ತು ಎಂದು ಸರಕಾರದ ಅಂಕಿಅಂಶಗಳು ತಿಳಿಸಿವೆ.
ಉಚಿತ ಎಲ್‌ಪಿಜಿ ಯೋಜನೆ, ಲಾಕ್‌ಡೌನ್ ಮತ್ತು ಚಳಿಗಾಲ ಇದಕ್ಕೆ ಕಾರಣ. ಎಲ್‌ಪಿಜಿ ಬಳಕೆಯು 2020ರಲ್ಲಿ 274.1 ಲಕ್ಷ ಟನ್‌ಗಳಾಗಿದ್ದು, ಇದು 2019ಕ್ಕಿಂತ ಶೇ. 4.3 ಹೆಚ್ಚು. ಇದೇ ಅವಧಿಯಲ್ಲಿ ಇಂಧನ ಬಳಕೆ 272.7 ಲಕ್ಷ ಟನ್ ಆಗಿದ್ದು, ಇದು 2019ಕ್ಕಿಂತ ಶೇ. 9.3 ಇಳಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಂಕ್ಗಳಿಗೆ ವಂಚನೆ ಶೇ. 51ರಷ್ಟು ಇಳಿಕೆ; ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ
ಬೆಲೆ ಇಳಿಕೆಗೆ ಕ್ರಮ: ಗೋಧಿ ರಫ್ತು ನಿಷೇಧಿಸಿದ ಭಾರತ, ಈರುಳ್ಳಿ ಬೀಜ ರಫ್ತು ನಿರ್ಬಂಧ ಸಡಿಲಿಕೆ
ಪ್ರತಿ ಎಲ್ಐಸಿ ಷೇರಿನ ಬೆಲೆ 949 ರೂ.ಗಳಿಗೆ ನಿಗದಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಲಾಭದಲ್ಲಿ ಶೇ 41ರಷ್ಟು ಹೆಚ್ಚಳ
ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 136 ಅಂಕ ಇಳಿಕೆ; ಶೇ.22ರಷ್ಟು ಇಳಿಕೆ ಕಂಡ ಟ್ವಿಟರ್ ಷೇರು