Google ನಿಂದ ನೂರಾರು ಉದ್ಯೋಗಿಗಳ ವಜಾ;ಕಾರಣವೇನು?
Team Udayavani, Jan 12, 2024, 5:41 AM IST
ಸ್ಯಾನ್ಫ್ರಾನ್ಸಿಸ್ಕೋ: ವೆಚ್ಚ ಕಡಿತದ ಕ್ರಮವಾಗಿ ನೂರಾರು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕು ತ್ತಿರುವ ತಂತ್ರಜ್ಞಾನ ಸಂಸ್ಥೆಗಳ ಸಾಲಿಗೆ ಈಗ ಗೂಗಲ್ ಕೂಡ ಸೇರ್ಪಡೆ ಗೊಂಡಿದೆ. ಗೂಗಲ್ ಈಗ ಜಾಗತಿಕವಾಗಿ ತನ್ನ ಹಾರ್ಡ್ವೇರ್, ವಾಯ್ಸ ಅಸಿಸ್ಟೆನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವರನ್ನು ಉದ್ಯೋಗದಿಂದ ವಜಾ ಮಾಡಿದೆ.
ಸಂಘಟನಾತ್ಮಕ ಬದಲಾವಣೆಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯಿ ರುವ ಕಾರಣ ಕೆಲವು ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬೇಕಾಗಿದೆ ಎಂದು ಸಂಸ್ಥೆ ಹೇಳಿದೆ. ಇತ್ತೀಚೆಗಷ್ಟೇ ಗೂಗಲ್ ಮತ್ತು ಮಾತೃಸಂಸ್ಥೆ ಆಲ್ಫಾಬೆಟ್ ವೆಚ್ಚ ಕಡಿತದ ಪ್ರತಿಜ್ಞೆ ಮಾಡಿದ್ದವು. ಸಂಸ್ಥೆಯ 12 ಸಾವಿರ ಉದ್ಯೋಗಿಗಳು ಅಂದರೆ ಸುಮಾರು ಶೇ.6ರಷ್ಟು ಮಂದಿಯನ್ನು ವಜಾ ಮಾಡುವುದಾಗಿ ಕಳೆದ ವರ್ಷ ಗೂಗಲ್ ಹೇಳಿತ್ತು. ಇದರ ಜತೆಗೆ ಗೂಗಲ್ ಸಿಇಒ ಸುಂದರ್ ಪಿಚೈ ಕೂಡ ಉದ್ಯೋಗಿಗಳ ವಜಾ ಪ್ರಕ್ರಿಯೆಯನ್ನು ಇತ್ತೀಚೆಗೆ ಸಮರ್ಥಿಸಿದ್ದರು.
ಕಳೆದ ವರ್ಷ ಫೇಸ್ಬುಕ್ನ ಮಾತೃ ಸಂಸ್ಥೆ ಮೆಟಾ 20,000 ಮಂದಿಯನ್ನು ಕೆಲಸದಿಂದ ಕಿತ್ತುಹಾಕಿತ್ತು. ವಾರದ ಆರಂಭದಲ್ಲಿ ಅಮೆಜಾನ್ ತನ್ನ ಪ್ರೈಮ್ ವೀಡಿಯೋ ಮತ್ತು ಸ್ಟುಡಿಯೋ ಘಟಕ ಗಳಲ್ಲಿದ್ದ ನೂರಾರು ನೌಕರರನ್ನು ಮನೆಗೆ ಕಳುಹಿಸಿದೆ. ಟ್ವಿಜ್ನಲ್ಲಿ ಕಾರ್ಯ ನಿರ್ವ ಹಿಸುತ್ತಿರುವ 500 ಮಂದಿಯನ್ನೂ ತೆಗೆದುಹಾಕುವುದಾಗಿಯೂ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್
MUST WATCH
ಹೊಸ ಸೇರ್ಪಡೆ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ