5,375 ಕೋಟಿ ರೂ ಮೊತ್ತದಲ್ಲಿ ‘ಎಫ್404–ಜಿಇ–ಐಎನ್ 20’ ಎಂಜಿನ್ ಖರೀದಿಸಲಿದೆ ಎಚ್‌ಎಎಲ್..!
Team Udayavani, Aug 18, 2021, 2:42 PM IST
ನವ ದೆಹಲಿ : ಅಮೆರಿಕದ ಜಿಇ ಏವಿಯೇಷನ್ಸ್ ಕಂಪನಿಯಿಂದ ‘ಎಫ್404–ಜಿಇ–ಐಎನ್20’ ಎಂಜಿನ್ ಖರೀದಿಗೆ ಎಚ್‌ಎಎಲ್ (ಹಿಂದುಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್) ಸಂಸ್ಥೆಯು 5,375 ಕೋಟಿ ರೂ ಮೊತ್ತದ ಒಪ್ಪಂದ ಮಾಡಿಕೊಂಡಿದೆ.
‘ತೇಜಸ್’ ಲಘು ಯುದ್ಧ ವಿಮಾನಗಳಲ್ಲಿ ಈ ಎಂಜಿನ್ ಗಳನ್ನು ಎಚ್ ಎ ಎಲ್ ಬಳಕೆ ಮಾಡುವ ಉದ್ದೇಶದಿಂದ ಖರೀದಿಗೆ ಮುಂದಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : ಸಾಧ್ಯವಿದ್ದಲ್ಲಿ ಆಫ್ ಲೈನ್ ತರಗತಿ ಆರಂಭಿಸಲು ಗೋವಾ ಸರ್ಕಾರ ಅನುಮತಿ..!
ಈ ಒಪ್ಪಂದಕ್ಕೆ ಎಚ್ ಎ ಎಲ್ ಸಂಸ್ಥೆ ತನ್ನ ಬೆಂಗಳೂರಿನ ಕಾರ್ಪೊರೇಟ್ ಕಚೇರಿಯಲ್ಲಿ ಸಹಿ ಮಾಡಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಸಂಸ್ಥೆಯ ಸಿಎಂಡಿ ಆರ್. ಮಾಧವನ್, ‘ಲಘು ಯುದ್ಧ ವಿಮಾನಗಳಿಗೆ ಎಚ್ ಎ ಎಲ್ ಕಡೆಯಿಂದ ನಡೆದಿರುವ ಅತಿದೊಡ್ಡ ಒಪ್ಪಂದ ಇದಾಗಿದೆ ಎಂದು ತಿಳಿಸಿದೆ.
ಇನ್ನು, ಎಚ್ ಎಎ ಲ್ ಒಟ್ಟು 83 ಲಘು ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಒದಗಿಸಲು ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದವನ್ನು ಜಾರಿಗೆ ತರುವ ನಿಟ್ಟಿನಲ್ಲಿ, ಎಂಜಿನ್ ಗಳ ಖರೀದಿಗೆ ಮುಂದಾಗಿರುವುದು ಮಹತ್ವದ್ದು ಎಂದು ಸಂಸ್ಥೆ ತಿಳಿಸಿದೆ.
ಒಟ್ಟು 99 ಎಂಜಿನ್‌ಗಳನ್ನು ಎಚ್‌ಎಎಲ್ ಖರೀದಿಸಲಿದ್ದು, 2029 ರೊಳಗೆ ಎಚ್ ಎಎಲ್ ಗೆ ಲಭ್ಯವಾಗಲಿವೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : 2022ರ ದಸರಾ ಹಬ್ಬದ ಮೊದಲೇ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಪೂರ್ಣ : ಪ್ರತಾಪ್ ಸಿಂಹ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್