ಮುಂಬಯಿ ಶೇರು 292 ಅಂಕ ಜಂಪ್‌; ನಿಫ್ಟಿ 11,865ರ ಮಟ್ಟಕ್ಕೆ

Team Udayavani, Jul 1, 2019, 7:32 PM IST

ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಸೋಮವಾರದ ವಹಿವಾಟನ್ನು 291.86 ಅಂಕಗಳ ಉತ್ತಮ ಜಿಗಿತದೊಂದಿಗೆ 39,686.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 76.70 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 11,865.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.

ಇಂದಿನ ಟಾಪ್‌ ಗೇನರ್‌ಗಳಾಗಿ ಝೀ ಎಂಟರ್‌ಟೇನ್‌ಮೆಂಟ್‌, ಡಾ.ರೆಡ್ಡಿ, ಟಾಟಾ ಮೋಟರ್‌, ಬಜಾಜ್‌ ಆಟೋ, ಈಶರ್‌ ಮೋಟರ್‌ ಶೇರುಗಳು ಶೇ.5.82ರ ವರೆಗಿನ ಏರಿಕೆಯನ್ನು ದಾಖಲಿಸಿದವು.

ಟಾಪ್‌ ಲೂಸರ್‌ಗಳಾಗಿ ಬಿಪಿಸಿಎಲ್‌, ಒಎನ್‌ಜಿಸಿ,ಐಓಸಿ, ಕೋಲ್‌ ಇಂಡಿಯ, ಎಚ್‌ಸಿಎಲ್‌ ಟೆಕ್‌ ಶೇರುಗಳು ಹಿನ್ನಡೆಗೆ ಗುರಿಯಾದವು.

ಮುಂಬಯಿ ಶೇರು ಪೇಟೆಯಲ್ಲಿಂದು ಒಟ್ಟು 2,745 ಕಂಪೆನಿಗಳಶೇರುಗಳು ವಹಿವಾಟಿಗೆ ಒಳಪಟ್ಟವು. ಈ ಪೈಕಿ 1,266 ಶೇರುಗಳು ಮುನ್ನಡೆ ಸಾಧಿಸಿದವು; 1,320 ಶೇರುಗಳು ಹಿನ್ನಡೆಗೆ ಗುರಿಯಾದವು; 159 ಕಂಪೆನಿ ಶೇರುಗಳ ಧಾರಣೆ ಯಾವುದೇ ಬದಲಾವಣೆ ಕಾಣಲಿಲ್ಲ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ