ಭಾರತೀಯ ಉದ್ಯಮಿಗೆ ಮೊದಲ ಗೋಲ್ಡನ್‌ ಕಾರ್ಡ್‌ ವೀಸಾ ನೀಡಿದ ಶಾರ್ಜಾ

Team Udayavani, Jul 9, 2019, 6:04 PM IST

ಶಾರ್ಜಾ : ಹೂಡಿಕೆದಾರರಿಗೆ ಶಾಶ್ವತ ವಾಸ್ತವ್ಯ ಕಲ್ಪಿಸುವ ವ್ಯವಸ್ಥೆಯಡಿ ಶಾರ್ಜಾ ಭಾರತೀಯ ಮೂಲದ ಉದ್ಯಮಿಗೆ ಮೊದಲ ಗೋಲ್ಡನ್‌ ಕಾರ್ಡ್‌ ವೀಸಾ ನೀಡಿದೆ.

ಶಾರ್ಜಾ ಚೇಂಬರ್‌ ಆಫ್ ಕಾಮರ್ಸ್‌ ಮತ್ತು ಇಂಡಸ್ಟ್ರಿಯಡಿ ಕಾರ್ಯವೆಸಗುತ್ತಿರುವ ಕಿಂಗ್‌ಸ್ಟನ್‌ ಹೋಲ್ಡಿಂಗ್ಸ್‌ ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಹಾಗೂ ಶಾರ್ಜಾ ಇಂಡಸ್ಟ್ರಿ ಬ್ಯುಸಿನೆಸ್‌ ಗ್ರೂಪ್‌ನ ಅಧ್ಯಕ್ಷರಾಗಿರುವ ಲಾಲು ಸ್ಯಾಮುವೆಲ್‌ ಅವರಿಗೆ ಶಾರ್ಜಾದ ಮೊದಲ ಗೋಲ್ಡನ್‌ ಕಾರ್ಡ್‌ ವೀಸಾ ನೀಡಲಾಗಿದೆ ಎಂದು ಡಬ್ಲ್ಯುಎಎಂ ನ್ಯೂಸ್‌ ಏಜನ್ಸಿ ವರದಿ ಮಾಡಿದೆ.

ಗೋಲ್ಡನ್‌ ಕಾರ್ಡ್‌ ವೀಸಾ ಹತ್ತು ವರ್ಷ ಅವಧಿಯದ್ದಾಗಿದೆ. ಬಂಡವಾಳ, ಹೂಡಿಕೆ ಯನ್ನು ಆಕರ್ಷಿಸಬಲ್ಲ, ಅಂತಾರಾಷ್ಟ್ರೀಯ ಪರಿಣತರನ್ನು ಹೊಂದಿರುವ ಪ್ರಮುಖ ಕಂಪೆನಿಗಳ ಮಾಲಕರಾಗಿರುವ ಅರ್ಹ ಹೂಡಿಕೆದಾರರು ಹಾಗೂ ಉದ್ಯಮಶೀಲರಿಗೆ ಈ ಗೋಲ್ಡನ್‌ ವೀಸಾ ಕಾರ್ಡ್‌ ನೀಡಲಾಗುತ್ತದೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ