ಹೊಸ ಸಂವತ್ಸರಕ್ಕೆ ಪ್ರಗತಿಯ ಸ್ವಾಗತ; ಷೇರುಪೇಟೆ ಮುಹೂರತ್ ವಹಿವಾಟು
Team Udayavani, Oct 25, 2022, 6:50 AM IST
ಮುಂಬಯಿ: 2079ನೇ ಸಂವತ್ಸರವನ್ನು ಸ್ವಾಗತಿಸುವ ನಿಟ್ಟಿನಲ್ಲಿ ನರಕ ಚತುರ್ದಶಿಯ ದಿನವಾದ ಸೋಮ ವಾರ ಮುಂಬಯಿ ಷೇರು ಪೇಟೆಯಲ್ಲಿ ನಡೆದ ಮುಹೂರತ್ ವಹಿವಾಟು ಹೂಡಿಕೆದಾರರಿಗೆ ಸಿಹಿ ನೀಡಿದೆ.
ಸೋಮವಾರ ಸಂಜೆ 6.15 ರಿಂದ 7.15ರವರೆಗೆ ಒಂದು ಗಂಟೆ ಕಾಲ ನಡೆದ ವಿಶೇಷ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 524.51 ಅಂಕಗಳ ಏರಿಕೆ ಕಂಡು, 59,831.66ರಲ್ಲಿ ಕೊನೆಗೊಂಡಿತು. ನಿಫ್ಟಿ ಕೂಡ 154.45 ಅಂಕಗಳ ಏರಿಕೆ ದಾಖಲಿಸಿ, 17,730.75ರಲ್ಲಿ ವಹಿವಾಟು ಅಂತ್ಯಗೊಳಿಸಿತು.
ಮುಹೂರತ್ ಟ್ರೇಡಿಂಗ್ನಲ್ಲಿ “ಸಕಾರಾ ತ್ಮಕ’ ಫಲಿತಾಂಶ ವ್ಯಕ್ತವಾಗಿರುವುದು ಷೇರು ಹೂಡಿಕೆದಾರರ ಮೊಗದಲ್ಲಿ ಸಂತಸ ಮೂಡ ಲು ಕಾರಣವಾಯಿತು. ನೆಸ್ಲೆ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಲ್ ಆ್ಯಂಡ್ ಟಿ, ಎಚ್ಡಿಎಫ್ಸಿ, ಎಸ್ ಬಿಐ, ಎಚ್ಡಿಎಫ್ಸಿ ಬ್ಯಾಂಕ್ ಮತ್ತು ಡಾ. ರೆಡ್ಡೀಸ್ ಷೇರುಗಳು ಸುಮಾರು ಶೇ.2.92ರಷ್ಟು ಏರಿಕೆ ಕಂಡವು.
ಕೇವಲ ಹಿಂದುಸ್ಥಾನ್ ಯೂನಿಲಿವರ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಮಾತ್ರ ಶೇ.3.05ರಷ್ಟು ಕುಸಿತ ದಾಖಲಿಸಿದವು. ಹಿಂದೂ ಕ್ಯಾಲೆಂಡರ್ ವರ್ಷ “ವಿಕ್ರಮ ಸಂವತ್ಸರ’ದ ಆರಂಭದ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೀಪಾವಳಿಯಂದು ಒಂದು ಗಂಟೆ ಮುಹೂರತ್ ವಹಿವಾಟು ನಡೆಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ
Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ
T20 ವಿಶ್ವಕಪ್ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ
ಸೆನ್ಸೆಕ್ಸ್ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್
Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್