10 ವಿಶೇಷ ಕೋರ್ಟ್ ಕಾರ್ಯಾರಂಭ
Team Udayavani, May 2, 2018, 9:30 AM IST
ಹೊಸದಿಲ್ಲಿ: ಶಾಸಕರು, ಸಂಸದರ ವಿರುದ್ಧದ ಕೇಸುಗಳ ವಿಚಾರಣೆಗೆಂದು ಸ್ಥಾಪಿಸಲಾಗಿರುವ 12 ವಿಶೇಷ ನ್ಯಾಯಾಲಯಗಳ ಪೈಕಿ 10 ಈಗಾಗಲೇ ಕಾರ್ಯಾರಂಭಿಸಿವೆ ಎಂದು ಕಾನೂನು ಸಚಿವಾಲಯ ತಿಳಿಸಿದೆ. ಇನ್ನುಳಿದ 2 ಕೋರ್ಟ್ಗಳು ಸದ್ಯದಲ್ಲೇ ಕಾರ್ಯಾರಂಭಗೊಳ್ಳಲಿವೆ ಎಂದೂ ಸಚಿವಾಲಯವು ಮಾಹಿತಿ ನೀಡಿದೆ.