ಈರೋಡ್ ಸಮೀಪ ಲಾರಿಗೆ ವ್ಯಾನ್ ಢಿಕ್ಕಿ; 3 ಸಾವು, ಐವರಿಗೆ ಗಾಯ
Team Udayavani, Mar 21, 2017, 7:31 PM IST
ಈರೋಡ್ : ಇಟ್ಟಿಗೆ ತುಂಬಿದ್ದ ಲಾರಿಗೆ ವ್ಯಾನೊಂದು ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮವಾಗಿ ಇಬ್ಬರು ಮಹಿಳೆಯರು ಸೇರಿದಂತೆ ವ್ಯಾನಿನಲ್ಲಿದ್ದ ಮೂವರು ಮೃತಪಟ್ಟು ಇತರ ಐದು ಮಂದಿ ಗಂಭೀರವಾಗಿ ಗಾಯಗೊಂಡ ಘಟನೆಗೆ ಇಲ್ಲಿಗೆ ಸಮೀಪದ ಪೆರುಂದುರೈ ಎಂಬಲ್ಲಿ ನಡೆದಿದೆ.
ಎದುರು ಗಡೆ ಸಾಗುತ್ತಿದ್ದ, ಇಟ್ಟಿಗೆ ತುಂಬಿದ್ದ ಲಾರಿಯನ್ನು ಹಿಂದಿಕ್ಕಲು ವ್ಯಾನ್ ಚಾಲಕ ಯತ್ನಿಸಿದಾಗ ಅದು ಸಾಧ್ಯವಾಗದೆ ನಿಯಂತ್ರಣ ತಪ್ಪಿದ ಕಾರಣ ವ್ಯಾನ್, ಲಾರಿಗೆ ಢಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವ್ಯಾನ್ ಚಾಲಕನ ಪತ್ನಿ ಹಾಗೂ 70ರ ವೃದ್ಧ ಮಹಿಳೆ ಮೃತ ಪಟ್ಟಿದ್ದು ಗಾಯಾಳುಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳ ಸ್ಥಿತಿ ಗಂಭೀರವಿದೆ. ವ್ಯಾನಿನಲ್ಲಿ ಒಟ್ಟು ಎಂಟು ಮಂದಿ ಪ್ರಯಾಣಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CSIR: ಪ್ರತೀ ಸೋಮವಾರ ಇಸ್ತ್ರಿ ಹಾಕದ ವಸ್ತ್ರ ಧರಿಸಲು ಅವಕಾಶ!
West Bengal; ಶಿಕ್ಷಕರ ನೇಮಕ ಹಗರಣ: ಬಂಗಾಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತರಾಟೆ
Bijnor; ಸಿಗರೇಟಿಂದ ಸುಟ್ಟು ಪತಿಗೆ ಚಿತ್ರಹಿಂಸೆ: ಸಿಸಿಟಿವಿ ವಿಡಿಯೋ ಆಧರಿಸಿ ಪತ್ನಿ ಸೆರೆ
ಕಾಶ್ಮೀರದಲ್ಲಿ ಎನ್ಕೌಂಟರ್: ಇಬ್ಬರು ಉಗ್ರರ ಹತ್ಯೆ
Manipur; ಹಸುವಿಗೆ ಗುಂಡಿಟ್ಟು ಕೊಂದ ಕ್ರೂರಿ!: ವ್ಯಾಪಕ ಆಕ್ರೋಶ