ಬಿಹಾರದಲ್ಲಿ ವಿದ್ಯುತ್ ದರ ಶೇ.55 ಏರಿಕೆ
Team Udayavani, Mar 25, 2017, 3:53 PM IST
ಪಟ್ನಾ : 2017-18ರ ಹಣಕಾಸು ವರ್ಷದಲ್ಲಿ ವಿದ್ಯುತ್ ದರಗಳನ್ನು ಒಟ್ಟಾರೆಯಾಗಿ ಶೇ.55ರಷ್ಟು ಏರಿಸುವುದಕ್ಕೆ ಬಿಹಾರ ವಿದ್ಯುತ್ ನಿಯಂತ್ರಣ ಆಯೋಗ (ಬಿಇಆರ್ಸಿ) ಅನನುಮತಿ ನೀಡಿದೆ.
ಶೇ.55ರಷ್ಟು ಏರಿರುವ ಹೊಸ ವಿದ್ಯುತ್ ದರಗಳು 2017ರ ಎಪ್ರಿಲ್ 1ರಿಂದ ಜಾರಿಗೆ ಬರಲಿವೆ ಎಂದು ವಿದ್ಯುತ್ ನಿಯಂತ್ರಣ ಆಯೋಗವು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ವಿದ್ಯುತ್ ದರಗಳನ್ನು ಏರಿಸುವಾಗ ಆಯೋಗವು ನೆರೆಯ ರಾಜ್ಯಗಳಲ್ಲಿನ ವಿದ್ಯುತ್ ದರಗಳನ್ನು ದೃಷ್ಟಿಯಲ್ಲಿರಿಸಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.