5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ
Team Udayavani, Jan 27, 2022, 10:30 PM IST
ನವದೆಹಲಿ: 5ಜಿ ತಂತ್ರಜ್ಞಾನವನ್ನು ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದ ನಟಿ ಜೂಹಿ ಚಾವ್ಲಾ ಅವರಿಗೆ ವಿಧಿಸಲಾಗಿದ್ದ 20 ಲಕ್ಷ ರೂ. ದಂಡವನ್ನು ದೆಹಲಿ ಹೈ ಕೋರ್ಟ್ 2 ಲಕ್ಷ ರೂ.ಗೆ ಇಳಿಸಿದೆ.
ಹಾಗೆಯೇ “ನಟಿಯದ್ದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ’ ಎಂದು ಕರೆದಿದ್ದ ನ್ಯಾಯಮೂರ್ತಿಗಳ ಆದೇಶವನ್ನು ನ್ಯಾಯಾಲಯ ಕೈ ಬಿಟ್ಟಿದೆ. 5ಜಿ ತಂತ್ರಜ್ಞಾನದಿಂದ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆ. ಹಾಗಾಗಿ ಆ ತಂತ್ರಜ್ಞಾನಕ್ಕೆ ದೇಶದಲ್ಲಿ ಅನುಮತಿ ಕೊಡಬಾರದು ಎಂದು ಕೋರಿ ಜೂಹಿ ಚಾವ್ಲಾ 2021ರಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ಮಾಡಿದ್ದ ನ್ಯಾಯಮೂರ್ತಿಗಳು, ಅರ್ಜಿ ತಿರಸ್ಕರಿಸಿ, ನಟಿಗೆ 20 ಳು ರೂ. ದಂಡ ವಿಧಿಸಿದ್ದರು.
ಇದೀಗ ಅರ್ಜಿ ವಿಚಾರಣೆ ಮಾಡಿರುವ ಹೈಕೋರ್ಟ್ ದಂಡದ ಮೊತ್ತ ಕಡಿಮೆಗೊಳಿಸಿದೆ.