ದೇಶದ ಮಹಿಳೆಯರಿಗೆ ಭರ್ಜರಿ ಕೊಡುಗೆ ನೀಡಲು ಕೇಂದ್ರ ಸಜ್ಜು
Team Udayavani, May 8, 2017, 9:38 AM IST
ಹೊಸದಿಲ್ಲಿ: ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ. ಏಕಾಂಗಿ ಮಹಿಳೆಯರಿಗೆ ಆದಾಯ ತೆರಿಗೆಯಲ್ಲಿ ರಿಯಾಯಿತಿ, ಆರೋಗ್ಯದ ಉಚಿತ ತಪಾಸಣೆಗೆ ಆಧಾರ್ ಸಂಪರ್ಕಿತ ಆರೋಗ್ಯ ಕಾರ್ಡ್‌ಗಳ ವಿತರಣೆ, ಗರ್ಭಿಣಿಯರಿಗೆ ನಗದುರಹಿತ ವೈದ್ಯಕೀಯ ಸೇವೆ ಸೇರಿದಂತೆ ಅನೇಕ ಸೌಲಭ್ಯಗಳನ್ನು ಒದಗಿಸುವ ಚಿಂತನೆ ನಡೆದಿದೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದ ಸಚಿವರ ಸಮಿತಿಯು ಮಹಿಳೆಯರಿಗೆಂದೇ ಹೊಸ ರಾಷ್ಟ್ರೀಯ ನೀತಿಯನ್ನು ರಚಿಸಿದ್ದು, ಸಂಪುಟದ ಒಪ್ಪಿಗೆಯಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.
ಋತುಸ್ರಾವದ ನೈರ್ಮಲ್ಯ ಕಾಪಾಡುವ ಎಲ್ಲ ಉತ್ಪನ್ನಗಳಿಗೂ ತೆರಿಗೆ ವಿನಾಯ್ತಿ, ಶೌಚಾಧಿಲಯಗಳ ಸ್ಥಾಪನೆ, ಲಿಂಗಾಧಾರಿತ ದೌರ್ಜನ್ಯಗಳ ಸಂತ್ರಸ್ತರಿಗೆ ಉಚಿತ ವೈದ್ಯಕೀಯ, ಕಾನೂನು ನೆರವು, ಆಶ್ರಯ ಮುಂತಾದ ಸೌಲಭ್ಯಗಳೂ ಈ ನೀತಿಯಲ್ಲಿ ಒಳಗೊಂಡಿವೆ.
ಪ್ರಸ್ತಾಪದಲ್ಲೇನಿದೆ?
– ಆಧಾರ್ ಸಂಪರ್ಕಿತ ಹೆಲ್ತ್ ಕಾರ್ಡ್ ಹೊಂದಿರುವವರಿಗೆ ಆರೋಗ್ಯ ತಪಾಸಣೆ
– ಗರ್ಭಿಣಿಯರಿಗೆ ನಗದುರಹಿತ ವೈದ್ಯ ಸೇವೆ
– ಹೆಚ್ಚು ಸಾರ್ವಜನಿಕ ಶೌಚಾಲಯಗಳು; ಸ್ಯಾನಿಟರಿ ನ್ಯಾಪ್ಕಿನ್‌ಗಳಿಗೆ ತೆರಿಗೆ ವಿನಾಯ್ತಿ
– ಲಿಂಗಾಧಾರಿತ ಹಿಂಸೆಯ ಸಂತ್ರಸ್ತರಿಗೆ ಉಚಿತ ವೈದ್ಯಕೀಯ, ಕಾನೂನು ನೆರವು
– ಹೆಣ್ಣುಮಕ್ಕಳಿಗೆ ಸರಕಾರಿ ಸಂಸ್ಥೆಗಳು ನಡೆಸುವ ಸ್ಪರ್ಧಾತ್ಮಕ, ಪ್ರವೇಶ ಪರೀಕ್ಷೆಗಳ ನೋಂದಣಿ ಶುಲ್ಕ ಮನ್ನಾ ಹೆಚ್ಚು ಹಾಸ್ಟೆಲ್‌ಗಳ ಸ್ಥಾಪನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು