ಪ್ರೇಯಸಿಯ ದೇಹ 35 ತುಂಡು…: ದೇಶವನ್ನೇ ಬೆಚ್ಚಿಬಿಳಿಸಿದ ಹತ್ಯಾ ಪ್ರಕರಣಗಳಿವು..

Team Udayavani, Nov 14, 2022, 7:58 PM IST

ಪ್ರೇಯಸಿಯ ದೇಹ 35 ತುಂಡು…: ದೇಶವನ್ನೇ ಬೆಚ್ಚಿಬಿಳಿಸಿದ ಹತ್ಯಾ ಪ್ರಕರಣಗಳಿವು..

ನವದೆಹಲಿ: ದೆಹಲಿಯಲ್ಲಿ ಇಡೀ ದೇಶವೇ ಬೆಚ್ಚಿಬಿದ್ದ ಘಟನೆಯೊಂದು ನಡೆದಿದೆ. ಪ್ರಿಯಕರನೇ ತನ್ನ ಪ್ರಿಯತಮೆಯನ್ನು ಕೊಂದು ದೇಹವನ್ನು 35 ತುಂಡುಗಳಾಗಿ ಬಿಸಾಕಿದ ಭೀಕರ ಘಟನೆ ದೇಶದ ಜನರನ್ನು ಬೆಚ್ಚಿ ಬೀಳಿಸಿದೆ.

ಇದು ಮೊದಲಲ್ಲ ದೇಶದಲ್ಲಿ ಇಂಥದ್ದೇ ಮಾದರಿಯಲ್ಲಿ ನಡೆದ ಭೀಕರ ಘಟನೆಗಳ ಒಂದು ಹಿನ್ನೋಟ ಇಲ್ಲಿದೆ.

ನೈನಾ ಸಾಹ್ನಿ: ದಿ ತಂದೂರ್ ಕೇಸ್:‌   

ಅದು ಜುಲೈ 2,1995 ರ ಸಮಯ. ದೆಹಲಿಯ ವಿಧಾನಸಭಾ ಸದಸ್ಯ ಹಾಗೂ ಕಾಂಗ್ರೆಸ್ ಯುವ ನಾಯಕ  ಸುಶೀಲ್ ಶರ್ಮಾ ಅವರ ಪತ್ನಿ ನೈನಾ ಸಾಹ್ನಿ ಭೀಕರವಾಗಿ ಕೊಲೆಯಾಗಿರುವ ಘಟನೆಯೊಂದು ಬೆಳಕಿಗೆ ಬಂದಿತ್ತು. ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಹೈಪ್ರೂಫೈಲ್‌ ಕೇಸ್‌ ನಲ್ಲಿ ಪ್ರಮುಖ ಆರೋಪಿಯಾಗಿ ನೈನಾ ಸಾಹ್ನಿ ಅವರ ಗಂಡ ಸುಶೀಲ್‌ ಶರ್ಮಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು.

ಹಿನ್ನೆಲೆ:

ನೈನಾ ಹಾಗೂ ಮತ್ಲೂಬ್ ಕರೀಂ ಶಾಲಾ ದಿನದಿಂದ ಸ್ನೇಹಿತರಾಗಿದ್ದರು. ಇಬ್ಬರು ಆತ್ಮೀಯ ಜೊತೆಯಲ್ಲಿ ಸ್ನೇಹಿತರಾಗಿದ್ದರು. ಇದು ನೈನಾ ಅವರ ಪತಿ ಸುಶೀಲ್‌ ಅವರಿಗೆ ಸಹಿಸಲು ಆಗುತ್ತಿರಲಿಲ್ಲ. ಒಂದು ದಿನ  ನೈನಾ ಹಾಗೂ ಕರೀಂ ಫೋನಿನಲ್ಲಿ ಮಾತನಾಡುವುದನ್ನು ನೋಡಿದ ಸುಶೀಲ್‌ ಸಿಟ್ಟಿನಲ್ಲಿ ನೈನಾಳನ್ನು ಗುಂಡಿಟ್ಟು ಹತ್ಯೆಗೈಯುತ್ತಾರೆ.

ಮೃತ ದೇಹವನ್ನು ರೆಸ್ಟೋರೆಂಟ್‌ ಗೆ ತೆಗೆದುಕೊಂಡು ಹೋಗಿ ಅಲ್ಲಿ ರೆಸ್ಟೋರೆಂಟ್‌ ಮ್ಯಾನೇಜರ್‌ ನ ಸಹಾಯದಿಂದ ನೈನಾಳ ಮೃತದೇಹವನ್ನು ತಂದೂರ್‌ ನಲ್ಲಿಟ್ಟು ಬೂದಿಯಾಗಿಸಲು ಯತ್ನಿಸುತ್ತಾರೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ರೆಸ್ಟೋರೆಂಟ್‌ ಮ್ಯಾನೇಜರ್‌ ನ್ನು ಪೊಲೀಸರು ಬಂಧಿಸುತ್ತಾರೆ ಆದರೆ ಸುಶೀಲ್‌ ಶರ್ಮಾ ಪರಾರಿ ಆಗಿದ್ದರು. ಇದಾದ ಬಳಿಕ ಜುಲೈ 10, 1995 ರಂದು ಡಿಎನ್‌ ಎ ಆಧಾರದ ಮೇಲೆ ಮೃತ ದೇಹದ ಗುರುತನ್ನು ಪತ್ತೆ ಹಚ್ಚಲಾಗುತ್ತದೆ.

ಸುಶೀಲ್‌ ಶರ್ಮಾ ಅವರು ಪ್ರಕರಣದ ಅಪರಾಧಿಯೆಂದು ಘೋಷಿಸಲಾಗುತ್ತದೆ. ಡಿಸೆಂಬರ್‌ 8, 2020 ರಂದು ಸುಶೀಲ್‌ ಶರ್ಮಾ ಅವರು ನಿರ್ದೋಷಿ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತ್ತು.

ಬೆಲರಾಣಿ ದತ್ತಾ ಕೇಸ್‌ (BELARANI DUTTA Case) : 1954 ಜನವರಿ 31, ಕೋಲ್ಕತ್ತಾದ ಕಿಯೋರಾಟಾಲಾ ಸ್ಮಶಾನದ ಶೌಚಾಲಯದ ಹೊರಗೆ ಸ್ವಚ್ಛತೆ ಮಾಡುವ ವ್ಯಕ್ತಿಯೊಬ್ಬನಿಗೆ ಸುತ್ತಿದ ಮೂರು ಪೇಪರ್‌ ಬಂಡಲ್‌ ಗಳು ಕಣ್ಣಿಗೆ ಬೀಳುತ್ತದೆ. ಅದರಲ್ಲಿ ರಕ್ತದ ಕಲೆಗಳು ಹಾಗೂ ಮಾನವನ ಬೆರಳುಗಳು ಹೊರ ಬಂದಿರುವುದನ್ನು ನೋಡುತ್ತಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಭೀಕರ ಹತ್ಯೆಯ ವಿಚಾರ ಬೆಳಕಿಗೆ ಬರುತ್ತದೆ

ಬಿರೆನ್ ಎಂಬ ಯುವಕನೊಬ್ಬ ಬೆಲರಾಣಿ ಹಾಗೂ ಮೀರಾ ಇಬ್ಬರನ್ನು ಪ್ರೀತಿಸಯತ್ತಿದ್ದ. ಕೆಲವೊಮ್ಮೆ ಇಬ್ಬರಿಗೂ ಸರಿಯಾದ ಸಮಯವನ್ನು ನೀಡಲು ಸಾಧ್ಯವಾಗದೇ ಇದ್ದಾಗ. ಇಬ್ಬರೂ ಬಿರೆನ್‌ ನನ್ನು ಪ್ರಶ್ನಿಸುತ್ತಿದ್ದರು. ಅದೊಂದು ದಿನ ಬೆಲರಾಣಿ ತಾನೂ ಗರ್ಭಿಣಿಯಾಗಿದ್ದೇನೆ ಎಂದು ಹೇಳುತ್ತಾಳೆ. ಇದನ್ನು ಕೇಳಿದ ಬಿರೆನ್‌ ಬೆಲರಾಣಿಯನ್ನು ಹತ್ಯೆಗೈಯುತ್ತಾನೆ. ಮೃತ ದೇಹದೊಂದಿಗೆ ಎರಡು ದಿನ ಇದ್ದು, ಆ ಬಳಿಕ ಅವಳ ದೇಹವನ್ನು ಕತ್ತರಿಸಿ ಮುಖದ ಚರ್ಮವನ್ನು ತೆಗೆದು, ವಿರೂಪಗೊಳಿಸುತ್ತಾನೆ. ದೇಹದ ಭಾಗವನ್ನು ವಿವಿಧ ಕಡೆ ಎಸೆಯುತ್ತಾನೆ.

ಈ ಪ್ರಕರಣದಲ್ಲಿ ಬಿರೆನ್‌ ಗೆ ಗಲ್ಲು ಶಿಕ್ಷೆಯಾಗುತ್ತದೆ.

ಆರುಷಿ ತಲ್ವಾರ್‌ ಹತ್ಯಾ ಪ್ರಕರಣ :

ಮೇ. 15,2008 ರಂದು ನೋಯ್ಡಾದ ಮನೆಯ ಕೋಣೆಯೊಂದರಲ್ಲಿ 13 ವರ್ಷದ ಬಾಲಕಿ ಆರುಷಿ ತಲ್ವಾರ್‌ ಕತ್ತು ಸೀಳಿ ಮೃತಪಟ್ಟಿರುವ ಸ್ಥಿತಿಯಲ್ಲಿ ಪತ್ತೆಯಾಗುತ್ತಾಳೆ. ಪೊಲೀಸರು ತನಿಖೆಯಲ್ಲಿ ಆರುಷಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಹೇಮ್‌ ರಾಜ್‌ ಈ ಕೃತ್ಯವನ್ನು ಎಸಗಿರಬಹುದು ಎಂದು ಶಂಕಿಸುತ್ತಾರೆ. ಆದರೆ ಎರಡು ದಿನದ ಬಳಿಕ ಹೇಮ್‌ ರಾಜ್‌ ಅವರು ಹತ್ಯೆಯಾದ ಸ್ಥಿತಿಯಲ್ಲಿ ಮನೆಯ ಮಹಡಿಯ ಮೇಲೆ ಪತ್ತೆಯಾಗುತ್ತಾರೆ.

ಸಿಬಿಐ ಪ್ರಕರಣ ವರ್ಗವಾಗುತ್ತದೆ. ಸಿಬಿಐ ತನಿಖೆ ಕೈಗೊಂಡು, ಆರುಷಿ ಅವರ ಪೋಷಕರಾದ ರಾಜೇಶ್‌ ತಲ್ವಾರ್‌ ಹಾಗೂ ನೂಪುರ್‌ ತಲ್ವಾರ್‌ ಅವರನ್ನು ವಿಚಾರಣೆ ನಡೆಸುತ್ತದೆ. ವಿಚಾರಣೆಯ ಬಳಿಕ ಆರುಷಿ-ಹೇಮರಾಜ್‌ ನಡುವಿನ ಸಂಬಂಧದಿಂದ ಬೇಸತ್ತು ರಾಜೇಶ್‌-ನೂಪುರ್‌ ಹತ್ಯೆ ಮಾಡಿದ್ದರೆಂದು ಸಿಬಿಐ ವರದಿ ಸಲ್ಲಿಸುತ್ತದೆ.

ಇದಾದ ಬಳಿಕ ಸಿಬಿಐ ವಿಶೇಷ ಕೋರ್ಟ್‌ ನವೆಂಬರ್‌ 2013 ರಂದು ರಾಜೇಶ್‌ ತಲ್ವಾರ್‌ ದಂಪತಿಗೆ ಜೀವಾವಧಿ ಶಿಕ್ಷೆ ವಿಧಿಸಿಸತ್ತು. ತೀರ್ಪನ್ನು ಪ್ರಶ್ನಿಸಿ ಆಲಹಬಾದ್‌ ಕೋರ್ಟ್‌ ಗೆ ರಾಜೇಶ್‌ ದಂಪತಿ ಮೊರೆ ಹೋಗಿದ್ದರು. 2017 ರಲ್ಲಿ ಕೋರ್ಟ್‌ ರಾಜೇಶ್‌ ದಂಪತಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಆದೇಶ ನೀಡಿತ್ತು.

ಟಾಪ್ ನ್ಯೂಸ್

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Thai model: ಒಂದು ವರ್ಷದಿಂದ ನಾಪತ್ತೆಯಾಗಿದ್ದ ಥಾಯ್ ಮಾಡೆಲ್ ಶವ ಬಹ್ರೈನ್‌ ನಲ್ಲಿ ಪತ್ತೆ!

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Suvendu Adhikari

W.Bengal; ಟಿಎಂಸಿ ಪಕ್ಷವನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿ: ಸುವೇಂದು ಅಧಿಕಾರಿ

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಉತ್ತರಪತ್ರಿಕೆಯಲ್ಲಿ ಜೈಶ್ರೀರಾಮ್‌ ಘೋಷಣೆ ಬರೆದ ವಿದ್ಯಾರ್ಥಿ ಪಾಸ್:‌ ಪ್ರಾಧ್ಯಾಪಕ ಅಮಾನತು!

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

11-

Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು

KKRvsPBKS; Gautam Gambhir’s Heated Argument With Official

IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.