ಬಹುಭಾಷಾ ನಟಿ ಇಷಾ ಕೊಪ್ಪಿಕರ್ ಬಿಜೆಪಿ ಸೇರ್ಪಡೆ
Team Udayavani, Jan 27, 2019, 1:17 PM IST
ಮುಂಬಯಿ: ಬಹುಭಾಷಾ ನಟಿ ಇಷಾ ಕೊಪ್ಪಿಕರ್ ಅವರು ಭಾನುವಾರ ಭಾರತೀಯ ಜನತಾ ಪಕ್ಷವನ್ನು ಸೇರ್ಪಡೆಯಾಗಿದ್ದಾರೆ. ಅವರಿಗೆ ಮಹಿಳಾ ಸಾರಿಗೆ ವಿಭಾಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು 42 ರ ಹರೆಯದ ಇಷಾ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.
1998 ರಲ್ಲಿ ಇಷಾ ಅವರು ತಮಿಳು ಚಿತ್ರದ ಮೂಲಕ ಬಣ್ಣದ ಬದುಕಿಗೆ ಕಾಲಿರಿಸಿದ್ದರು. 2000 ರಲ್ಲಿ ಫಿಜಾ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್ಗೆ ಕಾಲಿರಿಸಿದ್ದರು.
ಇಷಾ ಸೂಪರ್ ಹಿಟ್ ಚಿತ್ರ ‘ಸೂರ್ಯವಂಶ’ ಸೇರಿ ನಾಲ್ಕು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.