ಹೈದರಾಬಾದ್ ನಂತರ ಜೈಪುರದ ಸಿಂಹಕ್ಕೂ ಕೋವಿಡ್ ದೃಢ
Team Udayavani, May 13, 2021, 8:19 AM IST
ಜೈಪುರ : ಇಲ್ಲಿನ ಮೃಗಾಲಯದಲ್ಲಿ ವಾಸಿಸುತ್ತಿರುವ ತ್ರಿಪುರ ಹೆಸರಿನ ಸಿಂಹಕ್ಕೆ ಕೋವಿಡ್ -19 ಸೋಂಕು ಪತ್ತೆಯಾಗಿದೆ ಎಂದು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ ಐ) ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ರಾಜಸ್ಥಾನದ ರಾಜಧಾನಿ ಜೈಪುರದಿಂದ 13 ಪ್ರಾಣಿಗಳ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿತ್ತು. ಮೂರು ಸಿಂಹಗಳು, ಮೂರು ಹುಲಿಗಳು ಮತ್ತು ಒಂದು ಪ್ಯಾಂಥರ್ ಪ್ರಾಣಿಗಳ ಮಾದರಿಯನ್ನು ಪರೀಕ್ಷೆ ನಡೆಸಲಾಗಿತ್ತು.
ಪಂಜಾಬ್ ನ ಚತ್ ಬೀರ್ ಮೃಗಾಲಯದಿಂದ ಮೂರು ಹುಲಿಗಳು, ಒಂದು ಸಿವೆಟ್ ಬೆಕ್ಕು, ಒಂದು ಕಪ್ಪು ಬಕ್, ಅಲ್ಲದೆ ಬರೇಲಿಯ ಒಂದು ಕಪ್ಪು ಬಕ್ ಪ್ರಾಣಿಗಳನ್ನು ಪರೀಕ್ಷೆ ಮಾಡಲಾಗಿತ್ತು. ಈ ಎಲ್ಲಾ ಪ್ರಾಣಿಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಬಗ್ಗೆ ಅಂದಾಜಿಸಿರುವ ವೈದ್ಯರು ವೈರಸ್ ಹರಡುವ ಸರಪಳಿಯು ಝೂ ನಲ್ಲಿ ಕೆಲಸ ಮಾಡುವ ಮಾನವರಿಂದಲೇ ಬರುತ್ತದೆ ಎಂದಿದ್ದಾರೆ. ಕಳೆದ ಮೇ 4 ರಂದು ಹೈದರಾಬಾದ್ ನ ಮೃಗಾಲಯ ಒಂದರಲ್ಲಿ ಸಿಂಹಕ್ಕೆ ಕೋವಿಡ್ ಪಾಸಿಟಿವ್ ದೃಢವಾಗಿದ್ದು, ಸುದ್ದಿಯಾಗಿತ್ತು.